ದಿನದ ಅಪರಾಧಗಳ ಪಕ್ಷಿನೋಟ 12 ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 11.11.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು :‍ 02

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರದೀಪ್‌ ಬಿನ್ ರಾಮಚಂದ್ರಪ್ಪ, ಮಿಟ್ಟಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:11-11-2018 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ದ್ವಿಚಕ್ರ ವಾಹನ ಹೀರೋಹೋಂಡಾ ಸ್ಲ್ಪೆಂಡರ್ ನಂ ಕೆಎ-50-ಜೆ-034 7ರಲ್ಲಿ ಸಲ್ಡಾನ ವೃತ್ತದಿಂದ ಎಸ್.ಪಿ. ಕಛೇರಿಗೆ ಕಡೆಗೆ ಬರಲು ವಿಕ್ಟರಿ ಚರ್ಚಿನ ಮುಂಬಾಗದ ರಸ್ತೆಯಲ್ಲಿ ಬರುತ್ತಿದ್ದಾಗ, ಎಸ್.ಪಿ ಕಛೇರಿ ಕಡೆಯಿಂದ ಹೀರೋಹೋಂಡಾ ಸಿಬಿಜೆಡ್ ಕೆಎ-04-ಹೆಚ್ಎ-2274 ರ ಸವಾರ ಎಂ.ಮುರಳಿ ಬಿನ್ ಲೇಟ್ ಎಂ.ಮುರುಗನ್, ವಾಸ: # 369, ಟಾಪ್ ಲೈನ್, ಚಾಂಪಿಯನ್ ರೀಪ್ಸ್ ಎಂಬುವನು ಮದ್ಯಪಾನ ಸೇವನೆಮಾಡಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ದೂರುದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ್ದು, ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ. ಹೀರೋಹೋಂಡಾ ಸಿಬಿಜೆಡ್ ಸವಾರ ಎಂ.ಮುರಳಿ ರವರಿಗೆ ತೀವ್ರತರವಾದ ಗಾಯಗಳಾಗಿ ಮೃತಪಟ್ಟಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಉತ್ತರಕುಮಾರ ಬಿನ್ ವಿಜಯ್‌ಕುಮಾರ್‌, ಶಾಂತಿಪುರಂ ಗ್ರಾಮ, ಕುಪ್ಪಂ ತಾಲ್ಲಕು, ಆಂದ್ರಪ್ರದೇಶ ರವರ  ಅಣ್ಣನಾದ ಉದಯ್ ಕುಮಾರ್ ರವರು ದಿನಾಂಕ 09-11-2018 ರಂದು ಸಂಜೆ 07-30 ಗಂಟೆಯಲ್ಲಿ ಪಲ್ಸರ್ ದ್ವಿಚಕ್ರ ವಾಹನ ಸಂಖ್ಯೆ AP-03, CJ-2491 ರಲ್ಲಿ ಶಾಂತಿಪುರಂ ಕಡೆಯಿಂದ ವಿ.ಕೋಟೆ ಕಡೆಗೆ ಹೋಗುತ್ತಿರುವಾಗ ಉದಯ್ ಕುಮಾರ್ ರವರ ಹಿಂಬದಿಯಿಂದ ಟಿಪ್ಪರ್ ಲಾರಿ ಸಂಖ್ಯೆ AP-03, TC-3573 ರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉದಯ್ ಕುಮಾರ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ್ದು, ಉದಯ್ ಕುಮಾರ್ ರವರು ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ತ್ರೀವ್ರತರಹದ  ರಕ್ತಗಾಯಗಳಾಗಿರುತ್ತದೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಗಧೀಶ್‌ಕುಮಾರ್‌ ಬಿನ್ ಮುದ್ದುಕೃಷ್ಣಪ್ಪ, ಸೊರೇಗೌಡನಕೋಟೆ, ಬಂಗಾರಪೇಟೆ ತಾಲ್ಲೂಕು ರವರ  ಹೆಂಡತಿ ಶ್ರೀಮತಿ ಅನಿತ,  27 ವರ್ಷ ರವರು ದಿನಾಂಕ 10.11.2018 ರಂದು ಸಂಜೆ  4.50 ಗಂಟೆಯಲ್ಲಿ ಸೋರೇಗೌಡನಕೋಟೆ ಗ್ರಾಮದಲ್ಲಿರುವ ಧರ್ಮಸ್ಥಳ ಸಂಘದ ಬಳಿ ಹೋಗಿ ಬರುವುದಾಗಿ  ಹೇಳಿ ಮನೆಯಿಂದ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮುದವಲ್ಲಿ, ಬಾಗಲೂರು ಬಡಾವಣೆ, ಬೆಂಗಳೂರು ರವರ ಮಗನಾದ ರಾಜು,  23 ವರ್ಷ ರವರು ದಿನಾಂಕ 11.11.2018 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ತನ್ನ ಸ್ನೇಹಿತರೊಂದಿಗೆ ಬಂಗಾರಪೇಟೆ ತಾಲ್ಲೂಕಿನ ಅಲ್ಲಿಪುರ ಗ್ರಾಮದ ಸೈಯದ್ ಮುನೀರ್ ಅಹ್ಮದ್ ಎಂಬುವರ ಜಮೀನಿನಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ಈಜಾಡುತ್ತಿದ್ದಾಗ, ರಾಜು ರವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *