ದಿನದ ಅಪರಾಧಗಳ ಪಕ್ಷಿನೋಟ 12ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:11.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದೇವರಾಜ್‌ ಬಿನ್ ದೊಡ್ಡವೀರಪ್ಪ, ದೊಡ್ಡಅಂಕಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು  ದಿನಾಂಕ 11.02.2020 ರಂದು ಬೆಳಿಗ್ಗೆ 09-00 ಗಂಟೆಗೆ  ಕೆಲಸಕ್ಕೆ ಬಂಗಾರಪೇಟೆಗೆ ಹೋಗಿದ್ದು, ದೂರುದಾರರ ತಂದೆ ಮತ್ತು ತಾಯಿ ಮನೆಯಲ್ಲಿಯೇ ಇದ್ದು, ಮದ್ಯಾಹ್ನ 1-30 ಗಂಟೆಯಲ್ಲಿ ದೂರುದಾರರ ತಾಯಿ ಅಂಗಡಿಗೆ ಮನೆಗೆ ಬಾಗಿಲನ್ನು ಮುಂದಕ್ಕೆ ಹಾಕಿಕೊಂಡು ಹೋಗಿದ್ದು, ದೂರುದಾರರ ತಂದೆ ಮನೆಯಲ್ಲಿ ಮಲಗಿದ್ದು, ಮದ್ಯಾಹ್ನ 1-45 ಗಂಟೆಗೆ ಮನೆಯ ಬಾಗಿಲನ್ನು ತೆಗೆದ ಶಬ್ದ ಕೇಳಿ ದೂರುದಾರರ ತಂದೆ ಎದ್ದು ನೋಡಲಾಗಿ, ಯಾರೋ ಒಬ್ಬ ಆಸಾಮಿ ಮನೆಯ ಒಳಗಿನಿಂದ ಓಡಿ ಹೋಗಿದ್ದು,  ಬೀರುವನ್ನು ನೋಡಲಾಗಿ ಬೀರುವಿನ ಬಾಗಿಳನ್ನು ತೆಗೆದಿದ್ದು, ಬೀರುವಿನ ಒಳಗೆ ಪರ್ಸ್ ನಲ್ಲಿ ಇಟ್ಟಿದ್ದ ಬಂಗಾರದ ಒಡವೆಗಳಾದ 1) ಮೂರು ಎಳೆ ಸರ, 2) ಕತ್ತಿನ ಚಿಕ್ಕ ಚೈನ್, 3) 2 ಉಂಗುರ(ಪ್ಲೈನ್), 4) ಒಂದು ಜೊತೆ ದೊಡ್ಡ ಓಲೆ, 5) ಒಂದು ಜೊತೆ ಚಿಕ್ಕ ಓಲೆ ಎಲ್ಲಾ ಒಟ್ಟು ಸುಮಾರು 65 ಗ್ರಾಂ  ಬೆಲೆ ಸುಮಾರು 1,50,000/- ರೂಗಳಾಗಿದ್ದು ಕಳವು ಮಾಡಿಕೊಂಡು ಹೋಗಿರುತ್ತಾನೆ.

– ದೊಂಬಿ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಮಂಜುಳಾ ಕೊಂ ರಾಜು, ಗೊಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ಕವಿತಾ, ವೆಂಕಟೇಶ್‌, ಶ್ರೀನಿವಾಸ, ಶಶಿಕಲಾ, ನಾರಾಯಣಪ್ಪ ಮತ್ತು ಶ್ರೀನಿವಾಸ ರವರಿಗೆ ಜಮೀನಿನ ವಿಚಾರದಲ್ಲಿ ವಿವಾದವಿದ್ದು ದಿನಾಂಕ 10.02.2020 ರಂದು ಮಧ್ಯಾಹ್ನ 2.00 ಗಂಟೆಗೆ ದೂರುದಾರರ ತಾಯಿ,  ಮನೆಯ ಬಳಿ ಇದ್ದಾಗ ಕವಿತಾ, ವೆಂಕಟೇಶ್‌, ಶ್ರೀನಿವಾಸ, ಶಶಿಕಲಾ, ನಾರಾಯಣಪ್ಪ ಮತ್ತು ಶ್ರೀನಿವಾಸ ಅಕ್ರಮ ಗುಂಪು ಕಟ್ಟಿಕೊಂಡು ಬಂದು ದೂರುದಾರನ್ನು ಕೆಟ್ಟಮಾತುಗಳಿಂದ ಬೈದು, ದೊಣ್ಣೆಗಳಿಂದ ಮತ್ತು ಕೈಗಳಿಂದ ಹೊಡೆದು ಗಾಯಪಡಿಸಿ,  ಪ್ರಾಣ ಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀಮತಿ. ಕವಿತಾ ಕೊಂ ವೆಂಕಟೇಶ್‌, ಗೊಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಮತ್ತು ಸಾಕಿ, ಮಂಜುಳಾ, ಚಕ್ಕಾರ್ಲಮ್ಮ, ರಾಜು ಮತ್ತು ರಾಮಪ್ಪ ರವರಿಗೆ ಜಮೀನಿನ ವಿಚಾರದಲ್ಲಿ ವಿವಾದವಿದ್ದು, ದಿನಾಂಕ 10.02.2020 ರಂದು ಮಧ್ಯಾಹ್ನ 2.00 ಗಂಟೆಗೆ ದೂರುದಾರರು  ಮನೆಯ ಮುಂದೆ ಪಾತ್ರೆ ತೊಳೆಯುತ್ತಿದ್ದಾಗ,  ಸಾಕಿ, ಮಂಜುಳಾ, ಚಕ್ಕಾರ್ಲಮ್ಮ, ರಾಜು ಮತ್ತು ರಾಮಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಇಟ್ಟಿಗೆ ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *