ದಿನದ ಅಪರಾಧಗಳ ಪಕ್ಷಿನೋಟ 12ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍11.01.2020 ರಂದು ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾ ಶ್ರೀ. ನಾರಾಯಣಪ್ಪ ಬಿನ್ ಅಪ್ಪಯ್ಯ, ಐಸಂದ್ರ ಮಿಟ್ಟೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ- 07-01-2020 ರಂದು  ರಾತ್ರಿ 8.30 ಗಂಟೆಯಲ್ಲಿ ಮನೆಯಲ್ಲಿದ್ದಾಗ,  ಆರೋಪಿ ಬ್ಯಾಟಪ್ಪ ರವರ  ತಾಯಿ  ಮುನಿಯಮ್ಮ  ತನ್ನ  ಚಿಕ್ಕ ಮಗ ಗೊವಿಂದಪ್ಪನಿಗೆ  ಪೋನ್ ಮಾಡಲು ದೂರುದಾರರ ಬಳಿ ಮೊಬೈಲ್‌ ತೆಗೆದುಕೊಂಡ ವಿಚಾರದಲ್ಲಿ ಬ್ಯಾಟಪ್ಪ ರವರು ಅಕ್ರಮವಾಗಿ ದೂರುದಾರರ ಮನೆಯೊಳಗೆ ಪ್ರವೇಶ ಮಾಡಿ  ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ತಿಮ್ಮರಾಯಪ್ಪ ಬಿನ್ ಆವಲಪ್ಪ, ಎಂ.ಆರ್‌.ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು ಆರೋಪಿ ವೇಲು ರವರಿಗೂ ಹಳೇ ವೈಶ್ಯಮ ಇದ್ದು, ದಿನಾಂಕ 08.01.2020 ರಂದು ಸಂಜೆ 5.30 ಗಂಟೆಯಲ್ಲಿ ದೂರುದಾರರು ಅಟೋ ನಿಲ್ದಾಣದ ಬಳಿ ನಡೆದುಕೊಂಡು ಹೋಗಿತ್ತಿರುವಾಗ, ವೇಲು ರವರು ದೂರುದಾರರಿಗೆ ಮುಂದಕ್ಕೆ ಹೋಗದಂತೆ ಅಡ್ಡ-ಗಟ್ಟಿ ನಿಲ್ಲಿಸಿ ತಿಪ್ಪೆ ವಿಚಾರದಲ್ಲಿ ರಾಮಚಂದ್ರ ಮಕ್ಕಳಿಗೆ ಸಪೋರ್ಟ್ ಮಾಡುತ್ತಿಯಾ, ಎಂದು ಜಗಳ ತೆಗೆದು  ಕೈಗಳಿಂದ ಹೊಡೆದು ಕೆಟ್ಟ ಮಾತುಗಳಿಂದ ಬೈದು ಒಂದು ಕಲ್ಲನ್ನು ತೋರಿಸಿ ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

Leave a Reply

Your email address will not be published. Required fields are marked *