ದಿನದ ಅಪರಾಧಗಳ ಪಕ್ಷಿನೋಟ 12ನೇ ಅಕ್ಟೋಬರ್‌ 2019

– ಕನ್ನ ಕಳುವು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕನ್ನಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಜೇಂದ್ರನ್ ಬಿನ್ ಕಣ್ಣನ್, ಗೌತಮ್‌ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಅಭಿಪ್ರಿಯಾ TEXTILES ನ ಒಂದು ನೇಯ್ಗೆ ಘಟಕವನ್ನು ಬಿ.ಇ.ಎಂ.ಎಲ್ ರೈಲ್ ಕೋಚ್ ಪ್ಲಂಬರ್ ರೋಡ್ ಮುಂಭಾಗದಲ್ಲಿದ್ದು, ದಸರಾ ರಜೆ ಪ್ರಯುಕ್ತ ಘಟಕವನ್ನು ಮುಚ್ಚಿದ್ದು, ದಿನಾಂಕ:08.10.2019 ರಂದು ಸಂಜೆ 5.00 ಗಂಟೆಗೆಯಿಂದ ದಿನಾಂಕ 10.10.2019 ರಂದು ಸಂಜೆ 5.00 ಗಂಟೆಗೆ ಮದ್ಯೆ ಯಾರೋ ಕಳ್ಳರು ಘಟಕದ ಡೋರ್ ತೆಗೆದು,  1.Spare parts and motor of 960 rpm , I Hp from the thread winding machine, 2.Iron angles from the warping machine of one motor of 1 H.P, 3.Tools kit, 4.Gas cylinder of indane gas agency-2 no’s commercial, 5.Weighing machines & doubles wroth 200 kgs for gymnasium materials, 6.Butterfly two burner gas stove, 7.Tube light fittings DVD player, 8. Iron materials wroth 100-120 kgs ಇವುಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು :  01

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣದ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂತೋಷ್‌ ಬಿನ್ ವೆಂಕಟೇಶ್‌, ಓರಿಯನ್‌ಟಲ್‌ ಲೈನ್, ಉರಿಗಾಂ, ಕೆ.ಜ.ಎಫ್ ರವರು ದಿನಾಂಕ:10.10.2019 ರಂದು ಮದ್ಯಾಹ್ನ  12-45 ಗಂಟೆ  ಆಟೋ ಸಂಖ್ಯೆ ಕೆ.ಎ 08 ಎ-1151 ರಲ್ಲಿ ಪ್ರಯಾಣಿಕರನ್ನು ಇಳಿಸಲು  ಹೆನ್ರೀಸ್ ಬಾಟಗಂಗಮ್ಮ ದೇವಸ್ಥಾನದ ಬಳಿ ನು ಆಟೋವನ್ನು ನಿಲ್ಲಿಸಿದಾಗ ಬಂಗಾರಪೇಟೆ ಕಡೆಯಿಂದ ಬರುತ್ತಿದ್ದ ಕೆ.ಎ 03 ಎಂ.ಎಂ 3000 ಇಂಡಿಗೋ ಕಾರನ್ನು ಅದರ ಚಲಾಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಆಟೋ ಹಿಂಬದಿಗೆ ಡಿಕ್ಕಿಪಡಿಸಿದ್ದರಿಂದ ದೂರುದಾರರು ಆಟೋ ಸಮೇತ ಬಿದ್ದಿದ್ದರಿಂದ ಗಾಯಗಳಾಗಿರುತ್ತದೆ.

– ಇತರೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಶ್ವಾಮಿ, ಸಿ.ಪಿ.ಸಿ. 58 ಮತ್ತು ಶ್ರೀ. ಕೃಷ್ಣಪ್ಪ, ಪಿ.ಸಿ 90 ರವರು ದಿನಾಂಕ.11.10.2019 ರಂದು ಮದ್ಯಾಹ್ನ 2.00 ಗಂಟೆಗೆ  ರಾಬರ್ಟ್‌‌ಸನ್‌ಪೇಟೆ ವೃತ್ತದ ಸಿಪಿಐ, ಶ್ರೀ. ಸೂರ್ಯಪ್ರಕಾಶ್‌ ರವರೊಂದಿಗೆ ಪೋಕ್ಸೋ(ಅತ್ಯಾಚಾರ) ಪ್ರಕರಣದ ಆರೋಪಿ ಕುಟ್ಟಿ @ ತಮಿಳರಸನ್‌, ಮಂಜುನಾಥ್‌ನಗರ, ಉರಿಗಾಂಪೇಟೆ, ಕೆ.ಜಿ.ಎಫ್ ಎಂಬುವರ ಪತ್ತೆಗಾಗಿ ಯರ್‍ರನಾಗನಹಳ್ಳಿ ಬಳಿ ಇರುವುದಾಗಿ ಬಂದ ಮಾಹಿತಿ ಮೇರೆಗೆ ಅಲ್ಲಿಗೆ ಹೋಗಿದ್ದಾಗ, ಆರೋಪಿಯು ಸರಸ್ವತಿ ವಿದ್ಯಾನಿಕೇತನ ಶಾಲೆಯ ಹತ್ತಿರ ನಡೆದುಕೊಂಡು ಹೊಗುತ್ತಿದ್ದು, ಆರೋಪಿ ಬಳಿ ಹೋಗಿ “ನಿನ್ನ ಹೆಸರು ಕುಟ್ಟಿ ತಾನೆ” ಎಂದು ಕೇಳಿದಾಗ, ಆತ ಹೌದು ನನ್ನ ಹೆಸರು ಕುಟ್ಟಿ @ ತಮಿಳರಸನ್ ಏನೀಗ ಎಂದು ಗಡುಸಾಗಿ ಮಾತನಾಡಿದ್ದು, ಆಗ ದೂರುದಾರರು  “ನೀನು ನಿನ್ನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದೀಯ ಅದಕ್ಕೆ ನಿನ್ನನ್ನು ಹಿಡಿಯಲು ಬಂದಿದ್ದೇವೆಂದು ಹೇಳುತ್ತಿದ್ದಂತೆ” ಆರೋಪಿ ಶಾಲೆಯ ಎಡಗಡೆಗೆ ಓಡಿದ್ದು, ದೂರುದಾರರು ಆತನ ಹಿಂದೆ ಓಡಿ ಹಿಡಿಯಲು ಪ್ರಯತ್ನಿಸಿದ್ದು, ದೂರುದಾರರ ಹಿಂದೆ ಸಿಪಿಐ ರವರು ಮತ್ತು ಕೃಷ್ಣಪ್ಪ ಪಿ.ಸಿ 90 ರವರು ಸಹ ಓಡಿ ಹೋಗಿದ್ದು, ದೂರುದಾರರು ಓಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಾಗ, ಆರೋಪಿ ಕುಟ್ಟಿ ಒಂದು ದೊಡ್ಡ ಕಲ್ಲು ಎತ್ತಿ ದೂರುದಾರರ ಮೇಲೆ ಹಾಕಿದ್ದು, ಕಲ್ಲು ನೆಲದ ಮೇಲೆ ಬಿದ್ದು ಪುಟಿದು ದೂರುದಾರರ ಬಲಗೈ ತೋಳಿನ ಮೇಲೆ ಬಿದ್ದಿರುತ್ತೆ. ಆರೋಪಿ ಪುನಃ ಅದೇ ಕಲ್ಲನ್ನು ಎತ್ತಿಕೊಂಡು ದೂರುದಾರರ ಮೇಲೆ ಎಸೆದು ಕೊಲೆ ಮಾಡಲು ಮುಂದಾದಾಗ ಸಿ.ಪಿ.ಐ ಶ್ರೀ.ಸೂರ್ಯಪ್ರಕಾಶ್‌ ರವರು ಸರ್ವೀಸ್ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಆರೋಪಿಗೆ ಎಚ್ಚರಿಕೆ ನೀಡಿದರೂ ಸಹ ಆರೋಪಿ ಪುನಃ ಕಲ್ಲನ್ನು ಎಸೆಯಲು ಮುಂದಾದಾಗ ಸಿ.ಪಿ.ಐ ರವರು ದೂರುದಾರರನ್ನು ರಕ್ಷಿಸಲು ಒಂದು ಸುತ್ತು ಗುಂಡನ್ನು ಆರೋಪಿ ಕಾಲಿಗೆ ಹಾರಿಸಿದ್ದು, ಸದರಿ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ರಕ್ತಸ್ರಾವವಾಗಿರುತ್ತೆ. ಆರೋಪಿ ದೂರುದಾರರ ತಲೆಯ ಮೇಲೆ ಕಲ್ಲು ಹಾಕಿ  ಕೊಲೆ ಮಾಡಲು ಪ್ರಯತ್ನಿಸಿ, ಗಾಯವನ್ನುಂಟು ಮಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಪ್ರಕರಣ ದಾಖಲಿಸಿರುತ್ತೆ.

Leave a Reply

Your email address will not be published. Required fields are marked *