ದಿನದ ಅಪರಾಧಗಳ ಪಕ್ಷಿನೋಟ 12ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 11.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು :‍ 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಿದೀಶ್ ಗೋಪಿ ಬಿನ್ ಗೋಪಿ, ಶ್ರೀ ಚಕ್ರ ಡೈರಿ ಬಳಿ, ಕಾಡಿಗೋಡಿ, ಬೆಂಗಳೂರು ರವರು ಸ್ನೇಹಿತನಾದ ಅಖಿಲ್ ರವರೊಂದಿಗೆ ದ್ವಿಚಕ್ರ ವಾಹನ ಸಂಖ್ಯೆ KL 17 Q 4292 ರಲ್ಲಿ ದಿನಾಂಕ 08-07-2018 ರಂದು ಮದ್ಯಹ್ನ 2-45 ಗಂಟೆಯಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಹೋಗಲು ಬಂಗಾರಪೇಟೆ – ಕೋಲಾರ ಮುಖ್ಯ ರಸ್ತೆಯ ಬೀರಾಂಡಹಳ್ಳಿ ಗೇಟ್ ಸಮೀಪ ಹೋಗುತ್ತಿದ್ದಾಗ, ಅವರ ಮುಂದೆ ಹೋಗುತ್ತಿದ್ದ ಕಾರ್ ಸಂಖ್ಯೆ KA 03 P 4069 ರ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಬಲಕ್ಕೆ ಚಲಾಯಿಸಿದ್ದರಿಂದ ದೂರುದಾರರ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿ ಹೊಡೆದಿದ್ದು, ದೂರುದಾರರಿಗೆ ಮತ್ತು ಅಖಿಲ್ ರವರಿಗೆ ರಕ್ತ ಗಾಯವಾಗಿರುತ್ತೆ.

 – ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಅಮರಾವತಿ ಕೊಂ ಸುಬ್ರಮಣಿ, ಪಂತನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು  ರವರು ದಿನಾಂಕ: 10-07-2018 ರಂದು ರಾತ್ರಿ 08.00 ಗಂಟೆಯಲ್ಲಿ ಚಿಕ್ಕಮ್ಮ ಜ್ಯೋತಿ ರವರೊಂದಿಗೆ ಮನೆಯಲ್ಲಿ ಇರುವಾಗ, ಪಕ್ಕದ ಮನೆಯ ವಾಸಿ ಬಾಬು ದೂರುದಾರರ ಮನೆಯ ಕಿಟಕಿಯನ್ನು ತಟ್ಟಿದ್ದು, ದೂರುದಾರರ ಚಿಕ್ಕಮ್ಮನವರು ಬಾಬು ರವರನ್ನು ಕೇಳಿದಕ್ಕೆ, ಜ್ಯೋತಿ ರವರನ್ನು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದಿರುತ್ತಾನೆ. ದೂರುದಾರರು ಜಗಳವನ್ನು ಬಿಡಿಸಲು ಹೋಗಿದ್ದಕ್ಕೆ ಆರೋಪಿಗಳಾದ 1) ಬಾಬು, 2) ವೆಂಕಟರಾಮ, 3) ಬಾಲು ಮತ್ತು 4) ರಾಮಕೃಷ್ಣಪ್ಪ  ರವರುಗಳು ದೊಣ್ಣೆ ಮತ್ತು ಕಲ್ಲಿನಿಂದ ದೂರುದಾರರನ್ನು ಮತ್ತು ಜ್ಯೋತಿ ರವರನ್ನು ಹೊಡೆದು ಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *