ದಿನದ ಅಪರಾಧಗಳ ಪಕ್ಷಿನೋಟ 12ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 11.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರ ಬಿನ್ ವೆಂಕಟೇಶಪ್ಪ, ಅತ್ತಿಗಿರಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಕೆಎ-08 ಎಲ್-9501 ಹೀರೋ ಹೋಂಡ ದ್ವಿಚಕ್ರವಾಹನವನ್ನು ದಿನಾಂಕ 11.02.2021 ರಂದು ಸಂಜೆ 17.15 ಗಂಟೆಯಲ್ಲಿ ಬಾಲಚಂದರ್ ಟಾಕೀಸ್ ಬಳಿ ಇರುವ ನಾರಾಯಣಪ್ಪ ಮೋಟಾರ್ ರಿವೈಂಡಿಂಗ್ ಶಾಪ್ ಬಳಿ ನಿಲ್ಲಿಸಿ ಪಕ್ಕದಲ್ಲಿಯೇ ಇದ್ದ ಟೀ ಅಂಗಟಿಯಲ್ಲಿ ಟೀ ಕುಡಿಯುತ್ತಿದ್ದಾಗ, ಯಾರೋ ಒಬ್ಬ ವ್ಯಕ್ತಿ ದೂರುದಾರರ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದು, ಕೂಡಲೇ ದೂರುದಾರರು ಓಡಿ ಹೋಗಿ ದ್ವಿಚಕ್ರ ವಾಹನವನ್ನು ಮತ್ತು ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಹೆಸರು ಕೇಳಲಾಗಿ ಗಂಗಾದರ್ ಬಿನ್ ವೆಂಕಟರಾಮಪ್ಪ, ಸಂಜಯ್ ಗಾಂದೀನಗರ, ಬಂಗಾರಪೇಟೆ ಎಂದು ತಿಳಿಸಿದ್ದು, ಠಾಣೆಯಲ್ಲಿ ಹಾಜರುಪಡಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

– ಅಬಕಾರಿ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 11.02.2021 ರಂದು 16.15 ಗಂಟೆಯಲ್ಲಿ ರಾಜೇಶ್ವರಿ ಕೋಂ ಲೇಟ್ ನಾರಾಯಣಸ್ವಾಮಿ, ಸೂಲಿಕುಂಟೆ ಗ್ರಾಮದ ಅವರ ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರಿಗೆ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ದೂರುದಾರರಾದ ಶ್ರೀ. ಜಗದೀಶ್ ರೆಡ್ಡಿ  ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿದ್ದ, 1) ಅರ್ದಂಬರ್ದ ಮಧ್ಯವಿರುವ Haywards Cheers Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ Haywards Cheers Whisky 90 ml ನ 02 ಪಾಕೇಟ್ ಗಳು, ಖಾಲಿಯಾಗಿರುವ 06 ನೀರಿನ ಪಾಕೆಟ್ ಗಳು, ತುಂಬಿರುವ 04 ನೀರಿನ ಪಾಕೆಟ್ ಗಳು,, 03 ಪ್ಲಾಸ್ಟಿಕ್ ಲೋಟಗಳಲ್ಲಿ ಅರ್ದಂಬರ್ಧ ಮಧ್ಯ & ನೀರಿದ್ದು, ಬಿದ್ದು ಹೋಗಿರುವುದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆಂಜನಪ್ಪ ಬಿನ್ ರಾಮಸ್ವಾಮಿ, ಕಾರಹಳ್ಳಿ, ಬಂಗಾರಪೇಟೆ ರವರ  ಮಗನಾದ ಶಾಂತಕುಮಾರ್ ಎಸ್.ಜಿ, 25 ವರ್ಷ ರವರು ದಿನಾಂಕ 08.02.2021 ರಂದು ಮದ್ಯಾಹ್ನ 1-00 ಗಂಟೆಗೆ ಕೆಲಸಕ್ಕೆ ಬೆಂಗಳೂರಿಗೆ ಹೋಗಿದ್ದು, ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

ರಸ್ತೆ ಅಪಘಾತಗಳು : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಲಪತಿ ಬಿನ್ ನಂಜಪ್ಪ, ವೆಂಗಸಂದ್ರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗ ವಿ.ಸಿ ಬಾಬಣ್ಣ, ಸೊಸೆ ಅರ್ಚನ, ಮೊಮ್ಮಗ ವಸುಂಧರ್ ರವರು ದಿನಾಂಕ-07-02-2021 ರಂದು ರಾತ್ರಿ 8.00 ಗಂಟೆಯಲ್ಲಿ ದ್ವಿಚಕ್ರವಾಹನ ಸಂಖ್ಯೆ ಕೆ.ಎ-08-ವಿ-6111  ಹಿರೋ ಡ್ರೀಮ್ ಯುಗಾ ದಲ್ಲಿ  ಬೇತಮಂಗಲ ಕೋಲಾರ ಮುಖ್ಯರಸ್ತೆ ಚಿಗರಾಪುರ ಗೇಟ್ ಮುಂದೆ ಹೋಗುತ್ತಿದ್ದಾಗ, ಕೋಲಾರ ಕಡೆಯಿಂದ ಸ್ಪೆಂಡರ್ ದ್ವಿಚಕ್ರ ವಾಹನ ಸಂಖ್ಯೆ  ಕೆ.ಎ.-07-ಎಲ್-6974 ರ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಾಲನೆ ಮಾಡಿಕೊಂಡು  ದೂರುದಾರರ ಮಗ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಬಾಬಣ್ಣ, ಅರ್ಚನ ರವರಿಗೆ  ರಕ್ತಗಾಯಗಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶೋಭಾ ಕೊಂ ಸುಂದರ್‌ರಾಜ್‌, ಎಸ್.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್ ರವರ ತಮ್ಮ ಸುರೇಶ್ ಬಾಬು, 56 ವರ್ಷ ರವರು ದಿನಾಂಕ 10.02.2021 ರಂದು ರಾತ್ರಿ 10.30 ಗಂಟೆಯಲ್ಲಿ ಕಾರಹಳ್ಳಿ ಸಮೀಪವಿರುವ ಹಂದಿಮಾಂಸದ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ದ್ವಿಚಕ್ರ ವಾಹನ ಟಿವಿಎಸ್ ಫಿಯರೋ ಸಂಖ್ಯೆ ಕೆಎ-01-ಯು-3505 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸುರೇಶ್ ಬಾಬು ರವರಿಗೆ ಡಿಕ್ಕಿಪಡಿಸಿದ ಪರಿಣಾಮ, ಸುರೇಶ್ ಬಾಬು ರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಬಾಬು ರವರು ದಿನಾಂಕ 11.02.2021 ರಂದು ಬೆಳಗಿನ ಜಾವ 2.00 ಗಂಟೆಗೆ ಮೃತಪಟ್ಟಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  02

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುರೇಶ್ ಬಿನ್ ವೆಂಕಟಪ್ಪ, ತಮಟಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗ ನವೀನ್ ಕುಮಾರ್, 20 ವರ್ಷ ರವರಿಗೆ ಆಗಾಗ ಹೊಟ್ಟೆನೋವು ಬರುತ್ತಿದ್ದು, ಆಸ್ಪತ್ರೆಗಳಲ್ಲಿ ಔಷದಿಯನ್ನು ಕೊಡೆಸಿದ್ದು ಹೊಟ್ಟೆನೋವು ಸಂಪೂರ್ಣವಾಗಿ ಗುಣವಾಗದೇ ಇದ್ದು ದಿನಾಂಕ 09.02.2021 ರಂದು ರಾತ್ರಿ 10.00 ಗಂಟೆಯಲ್ಲಿ ನವೀನ್ ಕುಮಾರ್ ರವರು ಹೊಟ್ಟೆನೋವಿನ ಬಾದೆಗೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷಸೇವನೆ ಮಾಡಿದ್ದು,  ಚಿಕಿತ್ಸಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲೀಸದೇ ದಿನಾಂಕ 11.02.2021 ರ ಬೆಳಗ್ಗಿನ ಜಾವ 01.45 ಗಂಟೆಗೆ ಮೃತಪಟ್ಟಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್ ಬಿನ್ ವೆಂಕಟರಾಮಪ್ಪ, ತಿರುಮಲಪಿಚ್ಚಗುಂಟ್ಲಪಲ್ಲಿ, ಆಂದ್ರಪ್ರದೇಶ ರವರ ಮಗಳಾದ ಲಿಖಿತ, 23 ರವರನ್ನು ಮೂರು ವರ್ಷಗಳ ಹಿಂದೆ ಕಣಿಂಬೆಲೆ ಗ್ರಾಮದ ಶ್ರೀನಿವಾಸ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, 2 ವರ್ಷಗಳಿಂದ ಲಿಖಿತ ರವರಿಗೆ ಅತಿಯಾದ ಹೊಟ್ಟೇನೋವು ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರೂ ಸಹ ವಾಸಿಯಾಗದೇ ಇದ್ದುದರಿಂದ ಲಿಖಿತ ರವರು ದಿನಾಂಕ 04.02.2021 ರಂದು ಬೆಳಿಗ್ಗೆ ಬಂಗಾರಪೇಟೆಯಿಂದ ಕಣಿಂಬೆಲೆ ಗ್ರಾಮಕ್ಕೆ ಹೋಗುವಾಗ ಯಾವುದೋ ವಿಷವನ್ನು ಸೇವಿಸಿದ್ದು, ಚಿಕಿತ್ಸೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 11.02.2021 ರಂದು ಬೆಳಿಗ್ಗೆ 10.30 ಗಂಟೆಗೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *