ದಿನದ ಅಪರಾಧಗಳ ಪಕ್ಷಿನೋಟ 12ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 11.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 11.11.2020 ರಂದು ಬೆಳಿಗ್ಗೆ ಸುಮಾರು 11.11 ಗಂಟೆಯಲ್ಲಿ ಈ ಕೇಸಿನ ಪಿರ್‍ಯಾದಿದಾರರಾದ ಮನೋಹರ ಬಾಬು, ಐತಂಡಹಳ್ಳಿ ಬಂಗಾರಪೇಟೆ ರವರ ದೊಡ್ಡಪ್ಪನ ಮಗನಾದ ರವಿಕುಮಾರ್, 42 ವರ್ಷ ರವರು ಬಂಗಾರಪೇಟೆ-ಕೋಲಾರ ಮುಖ್ಯರಸ್ತೆಯಲ್ಲಿರುವ ಹಳೆಯ ಕೋರ್ಟ್ ಮುಂಭಾಗದ ಥಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾವುದೋ ಒಂದು ದ್ವಿಚಕ್ರ ವಾಹನ ಸವಾರನು ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರವಿಕುಮಾರ್ ರವರಿಗೆ ಡಿಕ್ಕಿಪಡಿಸಿದ್ದರಿಂದ ರವಿಕುಮಾರ್ ರವರಿಗೆ ಎಡಗಾಲು ಮುರಿದಿದ್ದು, ರಕ್ತಗಾಯವಾಗಿರುತ್ತದೆ ಹಾಗೂ ತಲೆಯಲ್ಲಿ ಊದಿಕೊಂಡಿರುತ್ತದೆ. ಕೂಡಲೇ ಗಾಯಾಳು ರವಿಕುಮಾರ್ ರವರನ್ನು ಚಿಕಿತ್ಸೆಗೆ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ರವಿಕುಮಾರ್ ರವರಿಗೆ ಅಪಘಾತದಿಂದ ಉಂಟಾಗಿದ್ದ ತೀವ್ರ ಸ್ವರೂಪದ ರಕ್ತಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ ಸುಮಾರು 3.15 ಗಂಟೆಗೆ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ  ಪಿರ್ಯಾದಿದಾರರಾದ ಚಂದ್ರ ಶೇಖರ್‍, ಮಾಮೊಡುಗು ಗ್ರಾಮ, ಚಿತ್ತೂರು ಜಿಲ್ಲೆ ಆಂದ್ರ ಪ್ರದೇಶ ರವರ  1 ನೇ ಮಗಳಾದ ಯಶಸ್ವಿನಿ. ಸಿ 19 ವರ್ಷ ರವರು 8 ವರ್ಷಗಳಿಂದ ಬೇತಮಂಗಲ ಹಳೇ ಬಢಾವಣೆಯಲ್ಲಿ ಅವರ ತಾತ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದು ಮುಳಬಾಗಿಲುನಲ್ಲಿರುವ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾಳೆ. ಈಗ ನರ್ಸಿಂಗ್ ಪರೀಕ್ಷೆಗಳು ನಡೆಯುತ್ತಿದ್ದರಿಂದ  ದಿನಾಂಕ-10-11-2020 ರಂದು ಬೆಳಿಗ್ಗೆ 7.30 ಗಂಟೆಗೆ ಎಂದಿನಂತೆ ಪರೀಕ್ಷೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ.

ಸಾಧಾರಣ ಕಳ್ಳತನ : 01

   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕುರಿ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶಂಕರ್‍ ರೆಡ್ಡಿ, ಗಣ್ಣೇರಹಳ್ಳಿ ಗ್ರಾಮ, ಬೇತಮಂಗಲ ಮನೆ ಮುಂದೆ ಒಂದು ಶೆಡ್ ಹಾಕಿಕೊಂಡು ತನ್ನ  ಜೀವನಾದಾರಕ್ಕೆ 6 ಟಗರು ಕುರಿಗಳನ್ನು ಅಲ್ಲಿ ಕಟ್ಟಿ ಹಾಕಿಕೊಂಡು ಅವುಗಳಿಗೆ ಮೇವನ್ನು ಹಾಕಿ ಸಾಕಿ ಕೊಂಡಿರುತ್ಥಾರೆ. ಈಗಿರುವಲ್ಲಿ ಪಿರ್ಯಾದಿ ದಿನಾಂಕ-11-11-2020 ರಂದು ಸಂಜೆ ಸುಮಾರು 4.00 ಸಮಯದಲ್ಲಿ ಕುರಿಗಳಿಗೆ  ಹುಲ್ಲನ್ನು ಹಾಕಿ ತಮ್ಮ ತೋಟದ ಬಳಿ ಹೋಗಿ ನಂತರ 5.30 ಗಂಟೆಗೆ ವಾಪಸ್ಸು ಶೆಡ್ ಬಳಿ ಬಂದು ನೋಡಲಾಗಿ 5 ಕುರಿಗಳು ಮಾತ್ರ ಇದ್ದು 1 ಬಿಳಿ ಮತ್ತು ಕಪ್ಪು ಬಣ್ಣದ ಮಿಶ್ರಿತ ಟಗರು ಕುರಿ ಕಾಣಿಸದೇ ಇದ್ದು   ಸದರಿ  ಟಗರು ಕುರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಟಗರು ಕುರಿಯ ಬೆಲೆ ಸುಮಾರು 15.000/- ರೂ ಆಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ಪಿರ್ಯಾದಿ ಶ್ರೀಮತಿ ಸುಭದ್ರ ದೇವಿ, ಪಿಓ ಬ್ಲಾಕ್, ಮಾರಿಕುಪ್ಪಂ ರವರ ಗಂಡನಾದ ದಿನಗರನ್ 47 ವರ್ಷ, ರವರಿಗೆ ಸುಮಾರು ವರ್ಷಗಳಿಂದ ಗ್ಯಾಸ್ಟ್ರಿಕ್ ತೊಂದರೆಯಿದ್ದು ಗ್ಯಾಸ್ಟ್ರಿಕ್ ಜೊತೆಗೆ ಆಗಾಗ ಹೊಟ್ಟೆ ನಾವು ಬರುತ್ತಿದ್ದರಿಂದ ವೈದ್ಯರಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿ ಅಲ್ಸರ್ ಇರುವುದಾಗಿ ತಿಳಿಸಿದ್ದು ಪ್ರತಿ ದಿನ ಮಾತ್ರೆಗಳನ್ನು ಸೇವಿಸುತ್ತಿದ್ದರು ದಿನಾಂಕ 11.11.2020 ರಂದು ಬೆಳಿಗ್ಗೆ 06.00 ಗಂಟೆಗೆ ಪಿರ್ಯಾದಿಯ ಗಂಡನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪಿರ್ಯಾದಿ ಶೌಚಾಲಯಕ್ಕೆ ಮನೆಯ ಹೊರಗೆ ಮಲ ವಿಸರ್ಜನೆಗೆ ಹೋಗಿ ಮನೆಗೆ ವಾಪಸ್ಸು ಬೆಳಗ್ಗೆ 07.00 ಗಂಟೆಗೆ ಬಂದು ನೋಡಲಾಗಿ ದಿನಗರನ್ ರವರು ಮನೆಯ ಬೆಡ್ ರೂಂನ ಮೇಲ್ಚಾವಣಿಯ ಕಬ್ಬಿಣದ ಪೈಪಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ನೇತಾಡುತ್ತಿದ್ದು ನೇಣಿನಿಂದ ಇಳಿಸಿ ಸ್ವಲ್ಪ ಉಸಿರಾಡುತ್ತಿದ್ದರಿಂದ ಚಿಕಿತ್ಸೆ ಬಗ್ಗೆ ಕೆಜಿಎಫ್ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *