ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 11.09.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 12.09.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ವಸಂತಕುಮಾರಿ, ೩೩ ವರ್ಷ, ಇಂಜಿನಿಯರಿಂಗ್ ಮೆಸ್ ಕ್ವಾಟರ್ಸ್, ಮಾರಕುಪ್ಪಂ, ಕೆ.ಜಿ.ಎಫ್ ರವರು ಆರೋಪಿ ಪ್ರೇಮನಾಥ ಬಿನ್ ಗೋಪಿನಾಥ್, ಇಂಜಿನಿಯರಿಂಗ್ ಮೆಸ್ ಕ್ವಾಟರ್ಸ್, ಮಾರಕುಪ್ಪಂ ರವರನ್ನು 2004 ನೇ ಸಾಲಿನಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಇವರ ಗಂಡ ಭಾರತೀಯ ಸೇನೆಯಲ್ಲಿ ಕೆಲಸದಲ್ಲಿದ್ದು ರಜೆಯಲ್ಲಿ ಬಂದವನು ಮತ್ತೆ ಕೆಲಸಕ್ಕೆ ಹೋಗದೆ ಇದ್ದುದರಿಂದ ಕೆಲಸದಿಂದ ತೆಗೆದು ಹಾಕಿದ್ದು ಅಂದಿನಿಂದ ಗಂಡ ಪ್ರೇಮನಾಥ್ ರವರು ಫಿರ್ಯಾದಿಯನ್ನು ಕೆಲಸಕ್ಕೆ ಹೋಗುವಂತೆ ಹೊಡೆಯುವುದು, ಬೈಯ್ಯುವುದು ಮಾಡಿ ದೈಹಿಕ ಹಿಂಸೆ ನೀಡಿರುತ್ತಾನೆ. ದೂರುದಾರರ ಅತ್ತೆ ಶಂಕುತಲಾ, ಮಾವ ಗೋಪಿನಾಥ್, ಮೈದ ಗೋಕುಲ್ ನಾಥ್, ನಾದನಿ ಸುಹಾಸಿನಿ ರವರು ಚುಚ್ಚು ಮಾತುಗಳನ್ನಾಡಿ ಮಾನಸಿಕ ಹಿಂಸೆ ನೀಡಿ, ಸರಿಯಾಗಿ ಊಟ ಬಟ್ಟೆ ಕೊಡದೆ ಎಲ್ಲಾರು ದೂರುದಾರರಿಗೆ ದೈಹಿಕ ಮತ್ತು ಮಾನಸಿಕ ಕಿರುಕಳ ನೀಡಿರುತ್ತಾರೆ.