ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 11.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕೊಲೆ ಪ್ರಯತ್ನ : 01
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನವೀನ್ ಬಿನ್ ಪ್ರೇಮ್ ಕುಮಾರ್, ನಾರ್ಥ್ ಗಿಲ್ಬರ್ಟ್ಸ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ದಿನಾಂಕ: 10.08.2020 ರಂದು ಸಂಜೆ 5.00 ಗಂಟೆಗೆ 1ನೇ ಸಾಮಿಲ್ ಲೈನಿನಲ್ಲಿರುವ ಅವರ ಅಜ್ಜಿಯ ಮನೆಯ ಮುಂದೆ ಇದ್ದಾಗ, ಚಿಕ್ಕು, ರಾಹುಲ್, ಅಭಿಷೇಕ್ ಮತ್ತು ಅರವಿಂದ್ ರವರು ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ದೂರುದಾರರ ಬಳಿ ಬಂದು ಕೆಟ್ಟ ಮಾತುಗಳಿಂದ ಬೈದು, ಲಾಂಗ್, ಕತ್ತಿ, ಕಲ್ಲು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ರಾಮಚಂದ್ರಪ್ಪ, ಮುಷ್ಟ್ರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಹೆಂಡತಿ ಶ್ರೀಮತಿ ಸುಕನ್ಯ, 20 ವರ್ಷ ರವರು ದಿನಾಂಕ 10.08.2020 ರಂದು ಮಧ್ಯಾಹ್ನ 12.45 ಗಂಟೆಗೆ ಮನೆಯಿಂದ ಹೋದವರು ಮನೆಗೆ ವಾಪಸ್ ಬರದೆ ಕಾಣೆಯಾಗಿರುತ್ತಾರೆ.