ದಿನದ ಅಪರಾಧಗಳ ಪಕ್ಷಿನೋಟ 12ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 11.05.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕನ್ನ ಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೊಹಮ್ಮದ್ ಶಿಹಾಬುದ್ದೀನ್‌ ಬಿನ್ ಅಬ್ಬಾಸ್‌, ಬಾಲಕೃಷ್ಣ ಲೇಔಟ್‌, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಆಂಡ್ರಸನ್ ಪೇಟೆ ಚಾಮರಾಜಪೇಟೆ ವೃತ್ತದಲ್ಲಿರುವ ಪ್ರಿನ್ಸ್ ಮೆಡಿಕಲ್ ಸ್ಟೋರ್  ಗೆ ಬೀಗವನ್ನು ದಿನಾಂಕ 10.05.2020 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 11.05.2020  ರಂದು ಬೆಳಿಗ್ಗಿನ ಜಾವ 3.00 ಗಂಟೆಯ ಮದ್ಯೆ  ಯಾರೋ  ಕಳ್ಳರು ಕಿತ್ತು, ಒಳಪ್ರವೇಶಿಸಿ ಮೆಡಿಕಲ್ ಸ್ಟೋರ್ ನಲ್ಲಿಟ್ಟಿದ್ದ ಸುಮಾರು 23,230/- ರೂ ಬೆಲೆ ಬಾಳುವ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುರೇಶ್‌ ಕುಮಾರ್‌ ಬಿನ್ ಅರ್‍ಪುದರಾಜ್‌, ಫ್ಯಾಂಕ್‌ ಅಂಡ್‌ ಕೋ, ಮಾರಿಕುಪ್ಪಂ, ಕೆ.ಜಿ.ಎಫ್ ರವರ  ಮಾವ ಥಾಮಸ್.ಜಿ.ರಾಜನ್ ರವರು ದಿನಾಂಕ 10.05.2020 ರಂದು ಬೆಳಿಗ್ಗೆ 11:30 ಗಂಟೆಗೆ  ಡಿಯೋ ದ್ವಿಚಕ್ರ ವಾಹನ  ಸಂಖ್ಯೆ ಕೆ.ಎ-08, ಕ್ಯೂ-7437 ರಲ್ಲಿ ದೂರುದಾರರ ಮಗಳು ರೈಜಲ್ ಜೋಸ್ನಾ ರವರನ್ನು ಹಿಂದುಗಡೆ ಕುಳಿಸಿಕೊಂಡು ಬಿ.ಎಂ ರಸ್ತೆಯ ಮೆರ್ಟನರಿ ಆಸ್ವತ್ರೆಯ ಬಳಿ ಹೋಗುತ್ತಿದ್ದಾಗ, ಟಾಟಾ ACE ವಾಹನ ಸಂಖ್ಯೆ ಕೆ.ಎ-08.5456 ರ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಥಾಮಸ್.ಜಿ.ರಾಜನ್ ರವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಥಾಮಸ್.ಜಿ.ರಾಜನ್ ಮತ್ತು  ರೈಜಲ್ ಜೋಸ್ನಾ ರವರಿಗೆ ರಕ್ತ ಗಾಯಗಳಾಗಿರುತ್ತೆ.

– ರಸ್ತೆ ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 10.05.2020 ರಂದು ಬೆಳಿಗ್ಗೆ ಸುಮಾರು 9-45 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಸುಬ್ರಮಣಿ, ಲಕ್ಕನಹಳ್ಳಿ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ರೂಪ, ೨೬ ವರ್ಷ. ಬನಹಳ್ಳಿ ಗ್ರಾಮ, ಟೇಕಲ್‌, ಕೋಲಾರ ರವರನ್ನು  ತನ್ನ ಅಳಿಯ ತಿಮ್ಮರಾಜು ಬಿನ್ ನಾರಾಯಣಪ್ಪ,  ರವರು KA 08-K-8534 BAJAJ PLATINA ದ್ವಿ ಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಕಾಮಸಮುದ್ರಂ ಠಾಣಾ ಸರಹದ್ದಿನ ಬಲಮಂದೆ-ಯಳೇಸಂದ್ರ ರಸ್ತೆಯಲ್ಲಿ ಸದರಿ ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದ ಪರಿಣಾಮ ರೂಪ ರವರು ಸದರಿ ದ್ವಿ ಚಕ್ರ ವಾಹನದಿಂದ ಕೆಳಗೆ ಬಿದ್ದು, ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ, ಕೈಗಳಿಗೆ ಮತ್ತು ಕಾಲುಗಳಿಗೆ ತರಚಿದ ಗಾಯಗಳಾಗಿ ಕೋಲಾರದ ಆರ್,ಎಲ್ ಜಾಲಪ್ಪ ಅಸ್ಪತೆಯಲ್ಲಿ I.C.U ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 11.05.2020 ರಂದು ಮದ್ಯಾಹ್ನ ಸುಮಾರು 3-00 ಗಂಟೆಗೆ ರೂಪ ರವರು ಮೃತಪಟ್ಟಿರುತ್ತಾರೆ.

– ಇತರೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ  ಸರ್ಕಾರಿ ಕರ್ತವ್ಯ ನಿರ್ವಹಣೆ ಮಾಡಲು ಅಡ್ಡಿಉಂಟುಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ಪಿರ್ಯಾದಿದಾರರು ಸೀತರಾಮಪ್ಪ, ಕಿರುಮಂದೆ, ತೊಪ್ಪನಹಳ್ಳಿ ಕಾಮಸಮುದ್ರ ರವರು ಅರಣ್ಯ ಇಲಾಖೆಯ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದಲ್ಲಿ ಕಾಮಸಮುದ್ರಂ ಪ್ಲಾಂಟೆಷನ್ ಬ್ಲಾಕ್ ನಂ 05 ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಾಮಸಮುದ್ರಂ ಪ್ಲಾಂಟೆಷನ್ ಬ್ಲಾಕ್ ನಂ 05 ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಸುಮಾರು 500 ಮೀಟರ್ ದೂರದಲ್ಲಿ ಆರೋಪಿಗಳಾದ ಗೋವಿಂದಪ್ಪ, ಮಂಜುನಾಥ್, ತಿಮ್ಮಕ್ಕ ಬೀಮಗಾನಹಳ್ಳಿ ಗ್ರಾಮ ವಾಸಿ ರವರ ಜಮೀನು ಮತ್ತು ಮನೆ ಇದ್ದು, ಆರೋಪಿಗಳು ಈಗ್ಗೆ 10 ವರ್ಷಗಳಿಂದ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಮರಗಳನ್ನು ಕಟಾವು ಮಾಡಿ ಮಾರಾಟ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರು ಮತ್ತು ಅವರ ಮೇಲಾಧಿಕಾರಿಗಳಿಗೆ ಮರ ಕಡಿಯದಂತೆ ತಾಕೀತು ಮಾಡಿದ್ದರು. ನಂತರ ದಿನಾಂಕ 11.05.2020 ರಂದು ಬೆಳಿಗ್ಗೆ 7.00 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರು ಕರ್ತವ್ಯದಲ್ಲಿ ಅರಣ್ಯ ಪ್ರದೇಶದ ಪ್ಲಾಂಟೆಷನ್ ಬ್ಲಾಕ್ ನಂ 05 ರಲ್ಲಿ ಸುತ್ತಾಡುತ್ತಿರುವಾಗ ಆರೋಪಿಗಳು ಚಿಗರೆ ಮರಗಳನ್ನು ಕಡಿಯುತ್ತಿದ್ದು ಪಿರ್ಯಾದಿದಾರರು ಪ್ರಶ್ನಿಸಲಾಗಿ ಆರೋಪಿ ಗೋವಿಂದಪ್ಪ ಮತ್ತು ಆರೋಪಿ ಮಂಜುನಾಥ್ ರವರು ನೀಲಗಿರಿ ದೊಣ್ಣೆಗಳಿಂದ ಪಿರ್ಯಾದಿಯ ಕತ್ತಿನ ಮೇಲೆ, ಭುಜಗಳ ಮೇಲೆ, ಸೊಂಟದ ಮೇಲೆ ಹೊಡೆದಿದ್ದು ಉಳಿದ ಆರೋಪಿಗಳು ಕೈಗಳಿಂದ ಪಿರ್ಯಾದಿಯ ತಲೆಗೆ, ಮುಖಕ್ಕೆ , ಹೊಟ್ಟಗೆ ಗುದ್ದಿ ಮೈ ನೋವುಂಟುಪಡಿಸಿ ಕರ್ತವ್ಯಕ್ಕೆ ಅಡ್ಡಿಪಿಡಿಸಿ,  ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ರಾಮಣ್ಣ, ಚಿಕ್ಕಅಂಕಾಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗ ಜಯಕುಮಾರ್, 23 ವರ್ಷ ರವರು  ದಿನಾಂಕ 11.05.2020 ರಂದು ಬೆಳಗ್ಗೆ 7.30 ಗಂಟೆಯಲ್ಲಿ ತಾಯಿ ಸುಮ ರವರೊಂದಿಗೆ ತೋಟದ ಬಳಿ ಹೋಗಿದ್ದು, ತೋಟದಲ್ಲಿ ಜಯಕುಮಾರನಿಗೆ  ಹೃದಯಾಘಾತವಾಗಿ ರಕ್ತ ವಾಂತಿಯಾಗಿದ್ದು, ಚಿಕಿತ್ಸೆಗಾಗಿ ಅಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಜಯಕುಮಾರ್ ರವರು ಮೃತಪಟ್ಟಿರುತ್ತಾರೆ.

ದೂರುದಾರರಾದ ಶ್ರೀಮತಿ. ಸುಭಾಷಿಣಿ, ಬ್ಯಾಡಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ಆಂಜಪ್ಪ ಬಿನ್ ಲೇಟ್ ಮುನಿವೆಂಕಟಪ್ಪ, 30 ವರ್ಷ ರವರು ದಿನಾಂಕ 04.05.2020 ರಂದು ಸಂಜೆ 6.30 ಗಂಟೆಯಲ್ಲಿ ಮಧ್ಯಸೇವನೆ ಮಾಡಿಕೊಂಡು ಬಂದು, ಸಂಸಾರದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು, ಮನೆಯನ್ನು ಬಿಟ್ಟು ಹೋಗಿ, ಹೊನ್ನೇನಹಳ್ಳಿ ಗ್ರಾಮದ ರಘುಪ್ರಸಾದ್ ರವರ ನೀಲಗಿರಿ ತೋಪಿನಲ್ಲಿ ಹೊಂಗೆ ಮರದ ಕೊಂಬೆಗೆ ಡ್ರಿಪ್ಸ್ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 

Leave a Reply

Your email address will not be published. Required fields are marked *