ದಿನದ ಅಪರಾಧಗಳ ಪಕ್ಷಿನೋಟ 12ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಚ 11.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಕು. ರಮಣಿ ಬಿನ್ ಸಾಮ್‌ ರಾಜ್‌, ಎಫ್‌ ಬ್ಲಾಕ್‌, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ  ತಂದೆ ಸಾಮ್ ರಾಜ್, 70 ವರ್ಷ ರವರು ದಿನಾಂಕ 10.03.2020 ರಂದು ರಾತ್ರಿ 08-30 ಗಂಟೆಯಲ್ಲಿ   ಊಟ ಮಾಡಿ ಮಂಚದ ಮೇಲೆ ಮಲಗಿಕೊಂಡಿದ್ದು, ದಿನಾಂಕ 11.03.2020 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ದೂರುದಾರರ ತಂದೆ  ಸಾಮ್‌ ರಾಜ್‌ ರವರು ನೆಲದ ಮೇಲೆ ಬಿದ್ದಿದ್ದು, ಕೂಡಲೇ ಚಿಕಿತ್ಸೆ ಸಲುವಾಗಿ ಕೆ.ಜಿ.ಎಫ್ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *