ದಿನದ ಅಪರಾಧಗಳ ಪಕ್ಷಿನೋಟ 11 ನೇ ಸೆಪ್ಟೆಂಬರ್‌ 2019

– ಸಾಧಾರಣ ಕಳ್ಳತನ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ಗೋವಿಂದರಾಜ್, ೧ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ.09.09.2019 ರಂದು ರಾತ್ರಿ 11.30 ಗಂಟೆಗೆ ಮನೆಯ ಮುಂಭಾಗಿಲು ತೆರೆದು ಗ್ರೀಲ್ಸ್ ಬಾಗಿಲಿಗೆ ಬೀಗ ಹಾಕಿಕೊಂಡು ಮಲಗಿಕೊಂಡಿದ್ದು, ಬೆಳಗ್ಗೆ 6.30 ಗಂಟೆಗೆ ನೋಡಿದಾಗ ಬೆಡ್ ರೂಂ ನಲ್ಲಿದ್ದ ಗಾಡ್ರೆಜ್ ಬೀರುವಿನಲ್ಲಿದ್ದ 46 ಗ್ರಾಂ ತೂಕದ ಬಂಗಾರದ ಒಡವೆಗಳು ಬೆಲೆ 1,38,000/- ರೂ ಹಾಗೂ ನಗದು 12,000/- ರೂಗಳನ್ನು ಯಾರೋ ಕಳ್ಳರು  ಮಹಡಿ ಮನೆಯ ಗ್ರೀಲ್ಸ್ ಬಾಗಿಲು ಮೂಲಕ ಕೆಳ ಮನೆಯೊಳಗೆ ಪ್ರವೇಶಿಸಿ  ಕಳವುಮಾಡಿಕೊಂಡು ಹೋಗಿರುತ್ತಾರೆ. 

– ರಸ್ತೆ ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸತ್ಯಕುಮಾರ್‌ ಬಿನ್ ಮುರುಗನ್, ಸಂಜಯ್‌ಗಾಂಧಿನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ಮತ್ತು ಸ್ನೇಹಿತ ಲೋಕೇಶ್ ರವರು ಸೂಪರ್ XL ದ್ವಿಚಕ್ರ ವಾಹನ ಸಂಖ್ಯೆ KA-08-S-6061  ದಲ್ಲಿ ಮಾರಿಕುಪ್ಪಂ ಗ್ರಾಮಕ್ಕೆ ಹೊಗಿ ದಿನಾಂಕ 10.09.2019 ರಂದು ಮದ್ಯಾಹ್ನ 14.30 ಗಂಟೆಗೆ ಸ್ನೇಹಿತರಾದ ಅರ್ಜುನ್, ಸಂತೋಷ್, ವಿಜಯ್ ರವರೊಂದಿಗೆ ಮಾರಿಕುಪ್ಪಂ ಗ್ರಾಮದ ಅಶ್ವತ್ ಕಟ್ಟೆಯ ಬಳಿ ನಿಂತು ಮಾತನಾಡಿಕೊಂಡು, ದ್ವಿಚಕ್ರ  ವಾಹನವನ್ನು ಮುಂದಕ್ಕೆ ಚಲಾಯಿಸುತಿದ್ದಂತೆ ಆಂಡ್ರಸನ್ ಪೇಟೆ ಕಡೆಯಿಂದ ಪ್ಯಾಸೆಂಜರ್ ಆಟೋ ಸಂಖ್ಯೆ KA-04-C-9395 ವಾಹನದ ಚಾಲಕ ಆಟೋವನ್ನು ಅತಿವೇಗ ಅಜಾಗುರಕತೆಯಿಂದ ಚಾಲಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ, ಲೋಕೇಶ್, ಸಂತೋಷ್, ಅರ್ಜುನ್ ಮತ್ತು ವಿಜಯ್ ರವರಿಗೆ ರಕ್ತಗಾಯಗಳಾಗಿರುತ್ತೆ.

– ಹಲ್ಲೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮ ಬಿನ್ ಲಕ್ಷ್ಮಯ್ಯ ಶೆಟ್ಟಿ, ಘಟ್ಟಮಾದಮಂಗಲ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು  ಆರೋಪಿಗಳಾದ ಗೋಪಿನಾಥ್‌, ಶಾಂತಮ್ಮ ಮತ್ತು ಬಾಬುಶೇಟ್ಟಿ ರವರಿಗೂ ಮನೆಯ ಮುಂಬಾಗ ಜಾಗದ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ 10.09.2019 ರಂದು ಮದ್ಯಾಹ್ಮ 1.30 ಗಂಟೆಯಲ್ಲಿ ಆರೋಪಿಗಳು ದೂರುದಾರರೊಂದಿಗೆ ಜಗಳಮಾಡಿ, ಕಬ್ಬಿಣದ ಸುತ್ತಿಗೆ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಉಷಾ, ಮರದಘಟ್ಟ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಕ್ಕಳಾದ ಕು.ತೇಜ, 10 ವರ್ಷ, ಕು.ರಕ್ಷಿತಾ, 08 ವರ್ಷ, ನಾರಾಯಣಸ್ವಾಮಿ  ರವರ ಮಗನಾದ 08 ವರ್ಷದ ಧನುಷ್, ರವಿರೆಡ್ಡಿ   ರವರ ಮಕ್ಕಳಾದ 09 ವರ್ಷದ ರೋಹಿತ್, 10 ವರ್ಷದ ಕು. ವೈಷ್ಣವಿ, ಆನಂದ ಕುಮಾರ್ ರವರ ಮಗಳಾದ 11 ವರ್ಷದ ಕು.ವೀಣಾ ರವರು ದಿನಾಂಕ 10.09.2019 ರಂದು ಮದ್ಯಾಹ್ನ 3.00  ಗಂಟೆಗೆ ಗಣಪತಿಯನ್ನು ಕೆರೆ ನೀರಿನಲ್ಲಿ ಬಿಡಲು ಹೋಗಿ 06 ಜನ ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *