ದಿನದ ಅಪರಾಧಗಳ ಪಕ್ಷಿನೋಟ 11 ನೇ ಆಗಸ್ಟ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:10.08.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ಹಲ್ಲೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಶಾಂತಮ್ಮ ಕೊಂ ತಂಗರಾಜ್, ಎಂ.ಆರ್ ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮನೆಯ ಪಕ್ಕದಲ್ಲಿ 6 ತಿಂಗಳ ಹಿಂದೆ ಮನೆಯ ರಿಪೇರಿ ಕೆಲಸಕ್ಕಾಗಿ ಸ್ವಲ್ಪ ಮರಳನ್ನು ಹಾಕಿದ್ದು ದಿನಾಂಕ 09.08.2019 ರಂದು ರಾತ್ರಿ 10.30 ಗಂಟೆಯಲ್ಲಿ ರಮೇಶ್ ಬಿನ್ ಲಕ್ಷ್ಮಯ್ಯು ಎಂಬಾತನು ದೂರುದಾರರಿಗೆ ಮರಳು ಇಲ್ಲಿ ಏಕೆ ಹಾಕಿದ್ದು, ಎಂದು ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಬ್ಬಿಣದ ಗಡಾರಿಯಿಂದ ಹೊಡೆದು ಗಾಯಪಡಿಸಿರುತ್ತಾನೆ.

– ಅಕ್ರಮ ಮದ್ಯ ಮಾರಾಟ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.08.2019 ರಂದು ಸಂಜೆ 4.30 ಗಂಟೆಯಲ್ಲಿ ಮರಗಲ್ ಗ್ರಾಮದ ವೆಂಕಟಮ್ಮ ರವರು ತನ್ನ ಮನೆಯ ಹಿಂಭಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು, ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಪಿ.ಎಸ್.ಐ ದಯಾನಂದ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿಯನ್ನು ಮತ್ತು ಆಕೆಯ ವಶದಲ್ಲಿದ್ದ Haywards Cheers Whisky 90 ml ನ 08 ಪಾಕೇಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *