ದಿನದ ಅಪರಾಧಗಳ ಪಕ್ಷಿನೋಟ 11 ನೇ ಏಪ್ರಿಲ್‌ 2019

  – ಹಲ್ಲೆ : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 10.04.2019 ರಂದು ದೂರುದಾರರಾದ ಶ್ರೀ. ರಾಹುಲ್‌ ಬಿನ್‌ ಅಪ್ಪು  ಪಂಡಾರಂ ಲೈನ್‌ ರವರು ನೀಡಿದ ದೂರಿನಲ್ಲಿ ದೂರುದಾರರು  ಚಾಮರಾಜಪೇಟೆಯ ವಾಸಿ ಬಾಸ್ಕರ್ ರವರ ವೆಲ್ಡಿಂಗ್ ಶಾಪ್ ಗೆ ಕೂಲಿ ಕೆಲಸಕ್ಕೆ ಹೋಗಿ ಒಂದು ದಿನಕ್ಕೆ 350/- ರೂಪಾಯಿಗಳ ಲೆಕ್ಕದಲ್ಲಿ ಮೂರು ದಿನಗಳು ಕೆಲಸ ಮಾಡಿರುತ್ತಾನೆಂದು, ಬಾಸ್ಕರ್ ರವರು ದೂರುದಾರರಿಗೆ ಮೂರು ದಿನಗಳಿಗೆ ಸೇರಿ 350/- ರೂಪಾಯಿಗಳ ಕೂಲಿ ಹಣ ಕೊಟ್ಟು ಉಳಿದ ಹಣವನ್ನು ಕೊಡದಿದ್ದರಿಂದ ಕೊಲಿ ಮಾಡಿದ ಹಣವನ್ನು ಕೇಳಿದ್ದಕ್ಕೆ ಕೆಟ್ಟಮಾತುಗಳಿಂದ ಬೈದು ಹೊಡೆದು ರಕ್ತಗಾಯಪಡಿಸಿರುತ್ತಾರೆ.

 

– ಜನತಾ ಪ್ರಾತಿನಿಧ್ಯ ಅಧಿನಿಯಮ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಜನತಾ ಪ್ರಾತಿನಿಧ್ಯ ಅಧಿನಿಯಮ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 10-04-2019 ರಂದು ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ ತಂಡ-1 ರ ಶ್ರೀ. ಸುರೇಶ್ .ಹೆಚ್ ಬಿನ್ ಹಾಲಪ್ಪ, ಉಪನಿರ್ಧೇಶಕರು, ಕೆ.ಜಿ.ಎಫ್. ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್-3 ರ ಶ್ರೀನಿವಾಸಲು ಜಿ.ಬಿನ್ ಗೋಪಾಲಕೃಷ್ಣ, ರೇಷ್ಮೆ ವಿಸ್ತರಣಾಧಿಕಾರಿಗಳು, ರೇಷ್ಮೆ ಇಲಾಖೆ, ಬೇತಮಂಗಲ ರವರು ನೀಡಿದ ದೂರಿನಲ್ಲಿ ದಿನಾಂಕ.09-04-2019 ರಂದು ಸಂಜೆ ತಮಗೆ ವಾಟ್ಸಪ್ ನಲ್ಲಿ ವೀಡಿಯೋ ಬಂದಿದ್ದು, ಸದರಿ ವೀಡಿಯೋ ಕೆ.ಜಿ.ಎಫ್. 146 ಎಫ್.ಎಸ್.ಟಿ ಟೀಮ್ ವಾಟ್ಸಪ್ ಗ್ರೂಪ್ ನಲ್ಲಿ ಬಂದಿರುತ್ತದೆ. ಸದರಿ ವೀಡಿಯೋದಲ್ಲಿ ಬೆಮಲ್ ಕಾರ್ಖಾನೆ ಕಾರ್ಮಿಕರು ಪ್ರತಿಭಟನೆ ಮಾಡುತ್ತಿರುವುದು ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಸ್. ಮುನಿಸ್ವಾಮಿ ರವರು ಮಾತನಾಡುತ್ತಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡುಬಂದಿರುತ್ತದೆ. ಸದರಿ ವಿಚಾರದ ಬಗ್ಗೆ ಪರಿಶೀಲಿಸಲು ಸುರೇಶ್ ಮತ್ತು ಶ್ರೀನಿವಾಸ್ .ಜಿ. ರವರು ಬೆಮಲ್ ಕಾರ್ಖಾನೆ ಗೇಟ್ ಬಳಿ ಬೇಟಿ ನೀಡಿ ಅಲ್ಲಿನ ಕಾರ್ಮಿಕರನ್ನು ವಿಚಾರಿಸಿದಾಗ ದಿನಾಂಕ.09-04-2019 ರಂದು ಬೆಳಿಗ್ಗೆ ಸುಮಾರು 06-00 ರಿಂದ 07-00 ಗಂಟೆಯ ಸಮಯದಲ್ಲಿ ಬೆಮಲ್ ಕಾರ್ಖಾನೆಯ ನೌಕರರು ಕಾರ್ಖಾನೆಯ ಗೇಟ್ ನ ಎಡಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದರು ಹಾಗೂ ಬಲಭಾಗದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಎಸ್. ಮುನಿಸ್ವಾಮಿ ಹಾಗೂ ಸಂಪಂಗಿ ರವರು ಮತಯಾಚನೆ ಮಾಡುತ್ತಿದ್ದು ಸದರಿ ಸಮಯದಲ್ಲಿ ಎಸ್.ಮುನಿಸ್ವಾಮಿ ರವರು ಪ್ರತಿಭಟನೆ ಮಾಡುತ್ತಿದ್ದ ಬೆಮಲ್ ನೌಕರರನ್ನು ಮಾತನಾಡಿಸುತ್ತಾ “ ನಾನು ಮಾತ್ರ ಕ್ಯಾಂಡಿಡೇಟ್ ಆಗಿಲ್ಲ ಎಂದಿದ್ದರೆ ಎರಡು ಬಿಡುತಾ ಇದ್ದೆ “ ಎಂದು ಹೇಳಿರುವುದು ಕಂಡುಬಂದಿರುತ್ತದೆ. ಸದರಿ ಘಟನೆ ಸಮಯದಲ್ಲಿ ಬೆಮಲ್ ಕಾರ್ಖಾನೆಯ ಗುತ್ತಿಗೆ ನೌಕರರು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದು, ಹಾಗೂ ಬಿ.ಜೆ.ಪಿ. ಅಭ್ಯರ್ಥಿಯಾದ ಎಸ್.ಮುನಿಸ್ವಾಮಿ ರವರು ಆ ರೀತಿಯಾಗಿ ಹೇಳಿಕೆ ನೀಡಿದ್ದು ವಾಟ್ಸಪ್ ವೀಡಿಯೋ ಆಧಾರದ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ಈ ವಿಚಾರದ ಬಗ್ಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಿರುತ್ತಾರೆ.

 

Leave a Reply

Your email address will not be published. Required fields are marked *