ದಿನದ ಅಪರಾಧಗಳ ಪಕ್ಷಿನೋಟ 11 ನೇ ಮಾರ್ಚ್‌ 2019

 –ಹಲ್ಲೆ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ 02 ಹಲ್ಲೆಗೆ ಸಂಬಂದಿಸಿದ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಅಶ್ವಿನಿ ಕೊಂ ಚಿಟ್ಟಿಬಾಬು, ಡಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ 09-03-2019 ರಂದು ರಾತ್ರಿ 10-30 ಗಂಟೆಯಲ್ಲಿ ರಾಜನ್ ಮತ್ತು ಮಾಲತಿ ರವರು ಅರುಣ್ ರವರೊಂದಿಗೆ ಅವರ ತಾಯಿ ಸೆಲ್ವಿ ರವರನ್ನು ಅರುಣ್ ರವರು ಮನೆಯಲ್ಲಿ ಸೇರಿಸದ ವಿಷಯದಲ್ಲಿ ಅರುಣ್ ರವರ ಮನೆಯಲ್ಲಿ ಮಾತನಾಡುತ್ತಿದ್ದಾಗ, ದೂರುದಾರರು ಅಲ್ಲಿಗೆ ಹೋಗಿ ಈ ಬಗ್ಗೆ ಕೇಳಲಾಗಿ ಅರುಣ್ ರವರು ಅವರ ಮನೆಯಲ್ಲಿದ್ದ ಒಂದು ಟೀ ಪಾಯ್ ಅನ್ನು ಎತ್ತಿ ಅಶ್ವಿನಿರವರ ಮೇಲೆ ಹಾಕಿದ್ದು, ಅರುಣ್ ರವರ ಹೆಂಡತಿಯಾದ ಶ್ರೀಮತಿ ರುಬಿನಾ ರವರು ಕೈಗಳಿಂದ ಹೊಡೆದಿರುತ್ತಾರೆ.

ದೂರುದಾರರಾದ ಶ್ರೀ. ಅರುಣ್ ಬಿನ್ ಕನಕರಾಜ್, ಡಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ: 09.03.2019 ರಂದು ರಾತ್ರಿ  10-15 ಗಂಟೆಯಲ್ಲಿ  ಮನೆಯಲ್ಲಿದ್ದಾಗ ರಾಜನ್, ಚಿಟ್ಟಿಬಾಬು, ಮಾಲತಿ ಆಶ್ವಿನಿ, ಶಾಂತಿ ಬಾಯಿ ರವರು ಬಂದು ನೀವುಗಳು 2015 ನೇ ಸಾಲಿನಲ್ಲಿ ನಮಗೆ ನೀಡಿರುವ ಓಡವೆಗಳನ್ನು ವಾಪಸ್ಸು ನೀಡಲು ಹೇಳುತ್ತೀರಾ ಎಂದು ಹೇಳಿ ರಾಜನ್ ರವರು ಒಂದು ಕಬ್ಬಿಣದ ರಾಡ್ ನಿಂದ ದೂರುದಾರರ ಹಣೆಯ ಮೇಲೆ ಹೊಡೆದಿದ್ದು, ಚಿಟ್ಟಿ ಬಾಬು, ಮಾಲತಿ, ಆಶ್ವಿನಿ, ಮತ್ತು ಶಾಂತಿ ಬಾಯಿ ರವರು ದೂರುದಾರರ ಹೆಂಡತಿಯಾದ ರುಬಿನಾ ರವರನ್ನು ಕೋಲು ಮತ್ತು ಕೈಗಳಿಂದ  ಹೊಡೆದಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನರಹಿಂಹ ಬಿನ್ ಸೀತಪ್ಪ, ಬೇತಮಂಗಲ ರವರು ದಿನಾಂಕ:10.03.2019 ರಂದು  ಸಂಜೆ 5.30 ಗಂಟೆಯಲ್ಲಿ ಕರ್ನಾಟಕದ ಗಡಿ ಇರುವ ಡಾಬಾದ ಬಳಿ ಕಾರನ್ನು ನಿಲ್ಲಿಸಿದ್ದಾಗ, ವಿ.ಕೋಟೆ ಕಡೆಯಿಂದ ಆರು ಜನರು ದ್ವಿ ಚಕ್ರ ವಾಹನಗಳಲ್ಲಿ ಬಂದು,  ಕಾರನ್ನು ಪಕ್ಕಕ್ಕೆ ತೆಗೆ ಎಂದು ಹೇಳಿದ್ದು, ದೂರುದಾರರು ಕಾರಿನ ಡೋರ್ ನ ಬಳಿಗೆ ಹೋಗುವಷ್ಟರಲ್ಲಿ  ಬಿಯರ್ ಬಾಟಲ್ ನಿಂದ ಒಬ್ಬ ಆಸಾಮಿ ದೂರುದಾರರಿಗೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ. ಮತ್ತಿಬ್ಬರು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನರೇಶ್ ಬಿನ್ ಮುನಿಸ್ವಾಮಿ, ಕೆನಡೀಸ್, ಉರಿಗಾಂ, ಕೆ.ಜಿ.ಎಫ್ ರವರ  ಹೆಂಡತಿ ರಾಧ, 35 ವರ್ಷ ಮಕ್ಕಳಾದ ನಂದಿನಿ, 11 ವರ್ಷ, ನರ್ಮದಾ, 8 ವರ್ಷ, ನಂದೀಶ, 6 ವರ್ಷ ಮತ್ತು ನಂದಿತಾ, 6 ವರ್ಷ ರವರೊಂದಿಗೆ ಮನೆಯಿಂದ ಎಲ್ಲಿಯೋ ಹೋಗಿರುವವಳು ಪುನಃ ಮನೆಗೆ ಬರದೇ ಕಾಣೆಯಾಗಿರುತ್ತಾಳೆ.

 

Leave a Reply

Your email address will not be published. Required fields are marked *