ದಿನದ ಅಪರಾಧಗಳ ಪಕ್ಷಿನೋಟ 11ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:10.07.2019 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂಪತ್‌ ಕುಮಾರ್ ಬಿನ್ ಮುನಿಯಪ್ಪ, ಸಿದ್ದನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಅಣ್ಣನಾದ ರಮೇಶ ರವರು ದಿನಾಂಕ 11.07.2019 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ ಟಿಎನ್-40-ಸಿ-3576 ನ್ನು ಚಲಾಯಿಸಿಕೊಂಡು ಹೋಗಿ, ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ಶಿವನಂಜಪ್ಪ ರವರ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ಕಾರ್ ಸಂಖ್ಯೆ ಕೆಎ-04-ಎಂಎಫ್-9638 ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರ್‌ನ್ನು ಚಲಾಯಿಸಿಕೊಂಡು ಹೋಗಿ, ಹಿಂಬದಿಯಿಂದ ರಮೇಶ್ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದ ಪ್ರಯುಕ್ತ, ರಮೇಶ ವಾಹನ ಸಮೇತ ಕೆಳಗೆ ಬಿದ್ದು, ತೀವ್ರ ಸ್ವರೂಪ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. 

–ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಜುಳಾ ಕೊಂ ಹರೀಶ್, ದೇಶಿಹಳ್ಳಿ, ಬಂಗಾರಪೇಟೆ ರವರು 8 ವರ್ಷಗಳ ಹಿಂದೆ ಹರೀಶ್ ರವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು,  2 ವರ್ಷಗಳಾದ ನಂತರ ಗಂಡ ಆಗಾಗ್ಗೆ ಸಾಂಸಾರಿಕ ವಿಚಾರದಲ್ಲಿ ಗಲಾಟೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುವುದು ಮಾಡುತ್ತಿದ್ದು, ದಿನಾಂಕ 10/07/2019 ರಂದು ಹರೀಶ್ ಟಿ.ವಿ ತರುತ್ತೇನೆಂದು ಹೇಳಿ 3000/- ರೂ ತೆಗೆದುಕೊಂಡು ಹೋಗಿ ಟಿ.ವಿ ತರದೇ ಮನೆಗೆ ವಾಪಸ್ಸು ಬಂದಿದ್ದು, ದೂರುದಾರರು ಇದನ್ನು ಕೇಳಿದ್ದಕ್ಕೆ  ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

– ಇತರೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬಾಬು ಬಿನ್ ಮುನಿಸ್ವಾಮಿ, ಮುಗಲಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಸ್ವಾಧೀನದಲ್ಲಿರುವ ಜಮೀನು ಸರ್ವೆ ನಂ 171 ವಿಚಾರದಲ್ಲಿ ಸೂಲಿಕುಂಟೆ ಗ್ರಾಮದ ವರದರಾಜು ಎಂಬುವರೊಂದಿಗೆ ತಕರಾಗಿದ್ದು, ದಿನಾಂಕ 19.04.2019 ರಿಂದ 20.04.2019 ರ ಮದ್ಯೆ ದೂರುದಾರರನ್ನು ಆರೋಪಿ ವರದರಾಜು ರವರು ಜಮೀನು ಬಿಡಬೇಕೆಂದು ಕೆಟ್ಟ ಮಾತುಗಳಿಂದ ಬೈದು, ಹೊಡೆದು ಪ್ರಾಣಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ.

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಡಾ|| ಸುರೇಂದ್ರ ಅಶೋಕ್ ಪನ್ಸಂಬಾಲ್, ಎಸ್ಟೇಟ್‌ ಆಫೀಸರ್‌, ಬಿ.ಜಿ.ಎಂ.ಎಲ್, ಕೆ.ಜಿ.ಎಫ್ ರವರು ಮತ್ತು ಅವರ ಸಿಬ್ಬಂದಿಯವರು ದಿನಾಂಕ 10-07-2019 ರಂದು ಬೆಳಿಗ್ಗೆ 10-00 ಗಂಟೆಗೆ  ಆರೋಪಿ ಸುರೇಶ್ ರವರು ಎಸ್ ಟಿ ಬ್ಲಾಕ್ ಮನೆ ನಂ 155 ನ್ನು ಪುನರ್ ನಿರ್ಮಾಣ ಮಾಡುತ್ತಿದ್ದನ್ನು ನಿಲ್ಲಿಸಿ, ಸ್ದಳದಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಲು ಸೂಚಿಸಿದಾಗ, ಸುರೇಶ್ ದೂರದಾರರನ್ನು ಮತ್ತು ಅವರ ಜೊತೆಯಲಿದ್ದವರನ್ನು ಕೆಟ್ಟ ಮಾತುತಳಿಂದ ಬೈದು ಕೈಗಳಿಂದ ತಳ್ಳಿ, ಬೆದರಿಕೆ ಹಾಕಿ ದೂರುದಾರರು ಮಾಡುತ್ತಿದ್ದ ಸರ್ಕಾರಿ ಕೆಲಸಕ್ಕೆ ಅಡ್ಡ ಪಡಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಶೀಲಮ್ಮ ಕೊಂ ನಾರಾಯಣಪ್ಪ, ಯಲೇಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಶಿರೀಷ ಎನ್., 34 ವರ್ಷ ಎಂಬುವರನ್ನು ರಾಜು ಎಂಬುವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ದಿನಾಂಕ 07/07/2019 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸುನಿಲ್ ಎಂಬುವನೊಂದಿಗೆ  1 ಲಕ್ಷದಷ್ಟು ಬಂಗಾರದ ಒಡವೆಗಳು, 20,000/- ರೂ ನಗದು ಹಣವನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾಳೆ. 

Leave a Reply

Your email address will not be published. Required fields are marked *