ದಿನದ ಅಪರಾಧಗಳ ಪಕ್ಷಿನೋಟ 11ನೇ ಫೆಬ್ರವರಿ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 10.02.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಕ್ರಮ ಮದ್ಯ ಮಾರಾಟ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ದಿನಾಂಕ: 10/02/2018 ರಂದು ಬೇತಮಂಗಲ ಪೊಲೀಸ್ ಠಾಣೆ ಸರಹದ್ದು ಜಯಮಂಗಲ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ:10.02.2018 ರಂದು ಮದ್ಯಾಹ್ನ ಸುಮಾರು 03.30 ಗಂಟೆ ಸಮಯದಲ್ಲಿ ಪಿ.ಎಸ್.ಐ., ಬೇತಮಂಗಲ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಬೇತಮಂಗಲ ಪೊಲಿಸ್ ಠಾಣಾ ಸರಹದ್ದು ಜಯಮಂಗಲ ಗ್ರಾಮದಲ್ಲಿ ಶ್ರೀನಿವಾಸಗೌಡ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ, ಶ್ರೀನಿವಾಸಗೌಡ ಬಿನ್ ಈರಪ್ಪ, ವಯಸ್ಸು 38 ವರ್ಷ, ಜಯಮಂಗಲ ಗ್ರಾಮ ಇವರು ತನ್ನ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಆಗ ಸಮವಸ್ತ್ರದಲ್ಲಿದ್ದ ಪೋಲಿಸರನ್ನು ಮತ್ತು ಜೀಪನ್ನು ನೋಡಿ ಸ್ಥಳದಲ್ಲಿದ್ದ ಸಾರ್ವಜನಿಕರು ಸ್ಥಳದಿಂದ ಪರಾರಿಯಾಗಿರುತ್ತಾರೆ, ಅಂಗಡಿಯಲ್ಲಿದ್ದ ಶ್ರೀನಿವಾಸಗೌಡನನ್ನು ಸುತ್ತುವರಿದು ಹಿಡಿದು ಅಲ್ಲಿದ್ದ ಮದ್ಯಪಾನದ ಪಾಕೆಟ್ ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಹಿಂತಿರುಗಿ ಬಂದು ಶ್ರೀನಿವಾಸಗೌಡ ರವರ ವಿರುದ್ಧ ಪೊಲೀಸರೇ ಸ್ವತಃ ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿರುತ್ತಾರೆ.

– ರಸ್ತೆ ಅಪಘಾತಗಳು :‍ 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಟಿ.ಎಸ್.ಎ. ರಾಕ್ ಬಿನ್ ದಾಸ್, ಎನ್.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಮಗ ಇಮ್ಯಾನುಯಲ್, 18 ವರ್ಷ ಎಂಬುವನು ದಿನಾಂಕ:09-02-2018 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಆತನ ಸ್ನೇಹಿತ ಜಾನ್ ಸುರೇಶ್ ರವರೊಂದಿಗೆ  ಹೋಂಡಾ ಲೀವಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಯು-7889 ರಲ್ಲಿ ಕೆ.ಜಿ.ಎಫ್ ಕ್ಲಬ್ ಬಳಿ ಬರುತ್ತಿದ್ದಾಗ, ಎದುರುಗಡೆಯಿಂದ ಮಹೀಂದ್ರಾ ಮ್ಯಾಕ್ಸಿಮೋ ಟೆಂಪೋ ಸಂಖ್ಯೆ ಕೆಎ-07-ಎ-326 ರ ಚಾಲಕ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇಮ್ಯಾನುಯಲ್ ರವರ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಇಮ್ಯಾನುಯಲ್ ಮತ್ತು  ಜಾನ್ ಸುರೇಶ್ ರವರಿಗೆ ರಕ್ತಗಾಯಗಳಾಗಿರುತ್ತೆ.

Leave a Reply

Your email address will not be published. Required fields are marked *