ದಿನದ ಅಪರಾಧಗಳ ಪಕ್ಷಿನೋಟ 11ನೇ ಮಾರ್ಚ್‌ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 10.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 01

          ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08.03.2021 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಚಂದ್ರಶೇಖರ್‍, ೩೪ ವರ್ಷ, ಆಲಗಾನಹಳ್ಳಿ ಬಂಗಾರಪೇಟೆ ರವರು ತಮ್ಮ ವಡವೆಗಳನ್ನು ಬಂಗಾರಪೇಟೆ ಪಟ್ಟಣದಲ್ಲಿರುವ ಇಂಡಿಯನ್ ಬ್ಯಾಂಕ್ ನಲ್ಲಿ ಗಿರಿವಿ ಇಟ್ಟು 2,50,000-00 ರೂಗಳನ್ನು ಬ್ಯಾಂಕ್ ನಲ್ಲಿ ತೆಗೆದುಕೊಂಡು, ತನ್ನ ದ್ವಿಚಕ್ರ ವಾಹನ ಆಕ್ಟಿವಾ ಹೋಂಡಾದ ಡಿಕ್ಕಿಯಲ್ಲಿ ಹಣ ಮತ್ತು ಸುಮಾರು 15 ಗ್ರಾಂ ತೂಕದ ಬಂಗಾರದ ವಡವೆಗಳು(ಎರಡು ಉಂಗುರಗಳು)ನ್ನು ಇಟ್ಟುಕೊಂಡು, ಅಲ್ಲಿಯೇ ಇರುವ ಕಬ್ಬಿಣದ ಅಂಗಡಿಗೆ ಹೋಗಿ ಬಂದು, ನಂತರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಆರ್.ಎಂ.ಸಿ ಚೆಕ್‍ಪೋಸ್ಟ್ ಬಳಿಯಿರುವ ತನ್ನ ಹೋಟೆಲ್ ಹತ್ತಿರ ಹೋಗಿ ನಿಲ್ಲಿಸಿ, ಗಾಡಿಯಲ್ಲಿ ನೋಡಿದಾಗ ಹಣ ಮತ್ತು ವಡವೆಗಳು ಕಾಣಿಸಲಿಲ್ಲ. ಯಾರೋ ಕಳ್ಳರು ನಗದು ಹಣ 2,50,000-00 ರೂ ಮತ್ತು ಸುಮಾರು 30,000-00 ರೂ ಬೆಲೆ ಬಾಳುವ ಬಂಗಾರದ ಎರಡು ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *