ದಿನದ ಅಪರಾಧಗಳ ಪಕ್ಷಿನೋಟ 11ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 10.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಿಜಿಯಮ್ಮ ಕೊಂ ಕೃಷ್ಣಪ್ಪ, ಬ್ಯಾಡಬೆಲೆ ಗ್ರಾಮ, ಬಂಗಾರಪೇಟ ತಾಲ್ಲೂಕು ರವರ ಮಗಳಾದ ಕು. ವೀಣಾ, 22 ವರ್ಷ ರವರು ದಿನಾಂಕ 09-02-2021 ರಂದು ಸಂಜೆ 5-00 ಗಂಟೆಯಲ್ಲಿ ಬಂಗಾರಪೇಟೆಗೆ ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  03

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನದಿಯಾ, ಎಂ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್‌ ರವರ ಗಂಡ ಸಂಪತ್ ಕುಮಾರ್, 44 ವರ್ಷ ರವರು ಕುಡಿತಕ್ಕೆ ಹಣವಿಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09.02.2021 ರಂದು ಸಂಜೆ 6.30 ಗಂಟೆಯಲ್ಲಿ ಮನೆಯ ಹಾಲ್‌ನಲ್ಲಿ ಮೇಲ್ಚಾವಣಿಗೆ ಅಳವಡಿಸಿರುವ ತರಾಯಿಗೆ ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಜಯರಾಮಪ್ಪ ಬಿನ್ ವೆಂಕಟೇಶಪ್ಪ, ಅಲಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಹೆಂಡತಿ ಶ್ರೀಮತಿ ಲಕ್ಷ್ಮಮ್ಮ, 60 ವರ್ಷ ರವರಿಗೆ ಐದು ವರ್ಷಗಳಿಂದ ಹೊಟ್ಟೇನೋವು ಬರುತ್ತಿದ್ದು, ಚಿಕಿತ್ಸೆಯನ್ನು ಕೊಡಿಸುತ್ತಿದ್ದರೂ ಸಹ ಗುಣಮುಖವಾಗಿರುವುದಿಲ್ಲವಾದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09.02.2021 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಯಲ್ಲಿ ಯಾವುದೋ ಒಂದು ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು, ಕೂಡಲೇ ಲಕ್ಷ್ಮಮ್ಮ ರವರನ್ನು ಚಿಕಿತ್ಸೆಗೆ ಕೋಲಾರ ಆರ್.ಎಲ್ ಹಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10.02.2021 ರಂದು ಬೆಳಿಗ್ಗೆ 7.20 ಗಂಟೆಗೆ ಮೃತಪಟ್ಟಿರುತ್ತಾರೆ.

ದೂರುದಾರರಾದ ಶ್ರೀಮತಿ. ಸೆಲ್ವಿ, ಕೆರೆಕೋಡಿ, ಬಂಗಾರಪೇಟೆ ರವರ ಮಗಳಾದ ನಿಶಾಂತಿ, 30 ವರ್ಷ ರವರು ಆರು ತಿಂಗಳಿನಿಂದ ಹೊಟ್ಟೇನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರು ಸಹ ಗುಣಮುಖವಾಗದೇ ಇದ್ದುದರಿಂದ ಬಾದೆ ತಾಳಲಾಗದೇ ದಿನಾಂಕ 08.02.2021 ರಂದು ಯಾವುದೋ ವಿಷವನ್ನು ಸೇವಿಸಿದ್ದು, ಕೂಡಲೇ ಕೋಲಾರ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10.02.2021 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ನಿಶಾಂತಿ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *