ದಿನದ ಅಪರಾಧಗಳ ಪಕ್ಷಿನೋಟ 11ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 10.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಹೇಶ್ವರಿ ಕೊಂ ರಂಗನಾಥ್‌, ಕು‌ಪ್ಪಸ್ವಾಮಿ ಮೊದಲಿಯಾರ್‌ ಲೇಔಟ್, ಬಂಗಾರಪೇಟೆ ರವರ ಗಂಡ  ರಂಗನಾಥ್, ವಯಸ್ಸು 49 ವರ್ಷ ರವರು ದಿನಾಂಕ 30.11.2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸಿಂದು, ಎನ್.ಟಿ. ಬ್ಲಾಕ್, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್ ರವರ ಮಗಳಾದ ಜೆನೀಫರ್, 16 ವರ್ಷ ರವರಿಗೆ ಹೊಟ್ಟೆನೋವು ಬರುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 10.12.2020 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಮನೆಯ ಮೇಲ್ಚಾವಣಿಯ ಪೈಪಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *