ದಿನದ ಅಪರಾಧಗಳ ಪಕ್ಷಿನೋಟ 11ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್‌  ಜಿಲ್ಲೆಯ ವಿವಿಧ ಪೊಲೀಸ್‌  ಠಾಣೆಗಳಲ್ಲಿ ದಿನಾಂಕ 10.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 02

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 10.11.2020 ರಂದು ಈ ಕೇಸಿನ ಪಿರ್ಯಾದಿ ವಸಂತಯ್ಯ, ಕುಂದರಸನಹಳ್ಳಿ ಗ್ರಾಮ ಬಂಗಾರಪೇಟೆ ತಾಲ್ಲೂಕು ರವರು ಕೂಲಿ ಕೆಲಸಕ್ಕೆ ವ್ಯಾಪನಹಳ್ಳಿಗೆ(TN) ತನ್ನ ದ್ವಿಚಕ್ರ ವಾಹನ ಸಂಖ್ಯೆ KA-08-Y-7417, TVS XL 100 ರಲ್ಲಿ ಬೆಳಿಗ್ಗೆ ಸುಮಾರು 9.00 ಗಂಟೆ ಸಮಯದಲ್ಲಿ ಕದರಿನತ್ತ ಗ್ರಾಮದ ಸರ್ಕಾರಿ ಶಾಲೆಯ ಬಳಿ ಥಾರ್ ರಸ್ತೆಯಲ್ಲಿ ಹೋಗುತ್ತಿರುವಾಗ ಎದರುಗಡೆಯಿಂದ HERO HONDA SPLENDOR ದ್ವಿಚಕ್ರ ವಾಹನ ಸಂಖ್ಯೆ: TN-24-C-4068 ರ ಸವಾರ ಆತನ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ಪಿರ್ಯಾದಿಯ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ಪಿರ್ಯಾದಿಯು ವಾಹನ ಸಮೇತ ಕೆಳಗೆ ಬಿದ್ದು,  ಬಲಕಾಲು, ತಲೆಗೆ ರಕ್ತಗಾಯವಾಗಿರುತ್ತೆ, ಬಲ ಕಣ್ಣು ಊದಿಕೊಂಡಿದ್ದು ಮತ್ತು ಕೈಗಳು ತರುಚಿಕೊಂಡಿರುತ್ತದೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.11.2020 ರಂದು  ಸಂಜೆ 4.00 ಗಂಟೆ ಸಮಯದಲ್ಲಿ  ಈ ಕೇಸಿನ ದೂರುದಾರರಾದ ವೆಂಕಟೇಶ, ರಾಮಸಾಗರ, ಬೇತಮಂಗಲ ರವರ ತಂದೆ ಕೃಷ್ಣಪ್ಪ , ೬೦ ವರ್ಷ  ರವರು ಮತ್ತು ವೆಂಕಟಮ್ಮ ೫೫ ವರ್ಷ, ರವರೊಂದಿಗೆ  ಅವರ ದ್ವಿಚಕ್ರ ವಾಹನ  ಸಂಖ್ಯೆ ಕೆ.ಎ 04-ಇಸಿ-5174 ರಲ್ಲಿ  ಬೇತಮಂಗಲಕ್ಕೆ ಹೋಗಿ ಬರುತ್ತೇನೆ  ಅಂತ  ಹೇಳಿ ದ್ವಿಚಕ್ರ ವಾಹನವನ್ನು  ಚಾಲನೆ ಮಾಡಿಕೊಂಡು  ಹೋಗಿ ನಂತರ ಗ್ರಾಮಕ್ಕೆ ವಾಪಸ್ಸು ಬರಲು  ಬೇತಮಂಗಲ – ವಿ.ಕೋಟೆ ಮುಖ್ಯರಸ್ತೆ  ರಾಮಸಾಗರ  ಕ್ರಾಸ್  ಬಳಿ  ಸಂಜೆ 6.30 ಗಂಟೆಯಲ್ಲಿ ಬರುತ್ತಿದ್ದಾಗ  ವಿ.ಕೋಟೆ ಕಡೆಯಿಂದ  ಸರ್ಕಾರಿ ಬಸ್ ಸಂಖ್ಯೆ ಕೆಎ-07-ಎಪ್-1535 ರ ಚಾಲಕ ಬಸ್ ಅನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾದಿ ತಂದೆ ಮತ್ತು ತಾಯಿ ರವರು  ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ  ಡಿಕ್ಕಿ  ಹೊಡೆದ ಪರಿಣಾಮ  ಇಬ್ಬರೂ ವಾಹನ ಸಮೇತ  ಬಿದ್ದು ಕೃಷ್ಣಪ್ಪ ರವರ ಕಾಲುಗಳಿಗೆ ಮತ್ತು ತಲೆಗೆ  ತೀವ್ರವಾದ ರಕ್ತ ಗಾಯಗಳು ಆಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ. ಪಿರ್ಯಾದಿ ತಾಯಿ ವೆಂಕಟಮ್ಮ ರವರಿಗೆ  2 ಕಾಲುಗಳಿಗೆ  ರಕ್ತಗಾಯವಾಗಿರುತ್ತೆ.

ಅಸ್ವಾಭಾವಿಕ ಮರಣ ಪ್ರಕರಣ :  01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗುಣಶೇಖರನ್ ಬಿನ್ ಸಂಪಂಗಿ, ಪೈಪ್‌ ಲೈನ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಮಗನಾದ ಶ್ರೀಕಾಂತ್, 30 ವರ್ಷ ರವರು ಬೆಂಗಳೂರಿನಲ್ಲಿ ಜಿಮ್ ಕೋಚ್ ಆಗಿ ಕೆಲಸ ಮಾಡಿಕೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿ ಇದ್ದು, 3 ತಿಂಗಳಿಂದ ಆತನಿಗೆ ವಿಪರೀತ ಹೊಟ್ಟೆನೋವು ಬಂದು ರಕ್ತಭೇದಿಯಾಗುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09.11.2020 ರಂದು ರಾತ್ರಿ 8:30 ಗಂಟೆಗೆ ಶ್ರೀಕಾಂತ್‌ ರವರು ಮನೆಯ ಬೆಡ್ ರೂಮ್ ನಲ್ಲಿನ ಮೇಲ್ಚಾವಣಿಗೆ ಅಳವಡಿಸಿದ್ದ ಫ್ಯಾನ್ ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *