ದಿನದ ಅಪರಾಧಗಳ ಪಕ್ಷಿನೋಟ 11ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 10.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪರಮೇಶ್ವರ ಬಿನ್ ಶಿವಪ್ಪ, ಪಾಪಿರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ 10.09.2020 ರಂದು  ಮಧ್ಯಾಹ್ನ 3.45 ಗಂಟೆಯಲ್ಲಿ  ಹೋಂಡಾ ಆಕ್ಟೀವ ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಬಂದು ರಾಜಪೇಟೆ ರಸ್ತೆಯ  ಅಂಬಲಾಲ್  ಸೇಟ್ ಎಂಬುವವರ   ಮಾವಿನ ತೋಪಿನ ಬಳಿ ಮೂತ್ರ ವಿರ್ಸಜನೆ ಮಾಡಲು  ದ್ವಿಚಕ್ರವಾಹನವನ್ನು ರಸ್ತೆಯ  ಎಡಬದಿಯ ಪುಟ್ಬಾತ್ ಮೇಲೆ ನಿಲ್ಲಿಸುತ್ತಿದ್ದಂತೆ, ದೂರುದಾರರ   ಹಿಂಬದಿಯಿಂದ ಮುನಿರತ್ನಂ ಬಿನ್ ರಾಜಪ್ಪ  ವಾಸ ಜಂಗಾಳಪಲ್ಲಿ ಗ್ರಾಮ, ಆಂದ್ರ ಪ್ರದೇಶ  ರವರು  ದ್ವಿಚಕ್ರವಾಹನ ಸಂಖ್ಯೆ AP-03 BN-2496 ರ ವಾಹನವನ್ನು ಚಲಾಯಿಸಿಕೊಂಡು ಬಂದು  ದೂರುದಾರರನ್ನು ನೋಡಿ ಮಾಸ್ಕ್ ಖರೀದಿಸಲು, ರಸ್ತೆಯ ಪಕ್ಕದಲ್ಲಿ ವಾಹನ  ನಿಲ್ಲಿಸಿ,  ದೂರುದಾರರನ್ನು ಮಾಸ್ಕ್ ಕೇಳುತ್ತಿದ್ದಂತೆ  ರಾಜಪೇಟೆ  ರಸ್ತೆಯ  ಕಡೆಯಿಂದ  ಸಪಾರಿ ಕಾರ್ ವಾಹನ ಸಂಖ್ಯೆ KA-05 ME-1326  ರ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಮತ್ತು ಮುನಿರತ್ನಂ  ರವರ ದ್ವಿ ಚಕ್ರ ವಾಹನಗಳಿಗೆ  ಹಿಂದುಗಡೆಯಿಂದ  ಡಿಕ್ಕಿ ಪಡಿಸಿ  ವಾಹನ ನಿಲ್ಲಿಸದೆ ಹೊರಟು ಹೋಗಿದ್ದು, ದೂರುದಾರರಿಗೆ ಮತ್ತು ಮುನಿರತ್ನಂ ರವರಿಗೆ ಗಾಯಗಳಾಗಿರುತ್ತದೆ.

 

ಇತರೆ01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-10-09-2020 ರಂದು  ಸಂಜೆ 5-30 ಗಂಟೆಯಲ್ಲಿ ನಾಗಶೆಟ್ಟಿಹಳ್ಳಿ ಗ್ರಾಮದ ಸಮೀಪ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದ ರವಿಕುಮಾರ್ ಮತ್ತು ಗಣೇಶ್, ಇಬ್ಬರೂ ವಾಸ ನಾಗಶೆಟ್ಟಿಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರನ್ನು ಹಾಗೂ ಸ್ಥಳದಲ್ಲಿದ್ದ  1) 02 ORIGINAL CHOICE  WHISKY 90 ML. ಖಾಲಿ  TETRA  ಪ್ಯಾಕೇಟ್ಗಳು  2) 02 ಪ್ಲಾಸ್ಟಿಕ್   ಗ್ಲಾಸ್ ಗಳು  3)ಎರಡು ಖಾಲಿ ವಾಟರ್ ಪ್ಯಾಕೇಟ್ಗಳನ್ನು ಪಿ.ಎಸ್.ಐ ಶ್ರೀ ನವೀನ್ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *