ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 10.05.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ್ ಬಿನ್ ವೆಂಕಟೇಶಪ್ಪ, ಘಟ್ಟಮಾದಮಂಗಲ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ.10.05.2020 ರಂದು ಮದ್ಯಾಹ್ನ 3-00 ಗಂಟೆಗೆ ಕಾರು ಸಂಖ್ಯೆ:ಕೆ.ಎ.08-ಎಂ 7168 ಎಸ್-ಪ್ರೆಸ್ಸೊ ರನ್ನು ಬಿ.ಎಂ. ರಸ್ತೆಯಲ್ಲಿ ಮೆಟರ್ನಟಿ ಆಸ್ವತ್ರೆ ಮುಂದೆ ಯೂಟರ್ನ್ ಮಾಡುತ್ತಿದ್ದಾಗ, ಸೂರಜ್ ಮಲ್ ಸರ್ಕಲ್ ಕಡೆಯಿಂದ ಕೆ.ಎ.17-ಈ.ಪಿ7189 ಅವೇಂಜರ್ ದ್ವಿಚಕ್ರ ವಾಹನವನ್ನು ಮಗಿ ಎಂಬುವನು ಅತಿವೇಗ ಮತ್ತು ಅಜಾರುಕತೆಯಿಂದ ಚಲಾಯಿಸಿಕೊಂಡು ಬಂದು ದೂರದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು, ಆರೋಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು, ದ್ವಿಚಕ್ರ ವಾಹನವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದು, ಕಾರಿನ ಬಲಭಾಗದ ಹಿಂದಿನ ಡೋರ್ ರನ್ನಿಂಗ್ ಬೋರ್ಡ್ ಮತ್ತು ಡೋರ್ ಪಕ್ಕ ಹಾಗೂ ದ್ವಿಚಕ್ರ ವಾಹನದ ಮುಂದಿನ ಭಾಗ ಜಕಂಗೊಂಡಿರುತ್ತೆ.
– ಹಲ್ಲೆ : 01
ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಯಲಕ್ಷ್ಮೀ ಕೊಂ ಶಿವರಾಜ್, ಎಸ್.ಟಿ ಬ್ಲಾಕ್, ಚಾಂಪಿಯನ್ರೀಫ್ಸ್, ಕೆ.ಜಿ.ಎಫ್ ರವರು ದಿನಾಂಕ 10.05.2020 ರಂದು ರಾತ್ರಿ 8-30 ಗಂಟೆಯಲ್ಲಿ ಡಬ್ಲೂ ಬ್ಲಾಕ್ ನಲ್ಲಿ ಇರುವ ಮುತ್ತುಕುಮಾರ್ ರವರ ಮೆನಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಕುಳಿತ್ತಿದ್ದ ಕೆ.ಎನ್.ಜೆ.ಎಸ್ ಬ್ಲಾಕ್ ವಾಸಿಗಳಾದ ಬೋತ್, ದೊರೆ, ಜೀ, ಮತ್ತು ಶರತ್ ರವರು ದೂರುದಾರರ ಬಳಿ ಬಂದು “ನಿನ್ನ ಮಗ ಪ್ರವೀಣ್ ರವರನ್ನು ಹೊಡೆಯದೆ ಬಿಡುವುದಿಲ್ಲ ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ಕೋಲಿನಿಂದ ಹೊಡಿದಿದ್ದು, ಜಗಳ ಬಿಡಿಸಲು ಬಂದ ಕರ್ಲಿನಾ ರವರಿಗೂ ಸಹ ಹೊಡೆದು ಪ್ರಾಣ ಬೇದರಿಕೆ ಹಾಕಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮೀ ಕೊಂ ನಾಗರಾಜ, ನ್ಯೂಟೌನ್, ಬೇತಮಂಗಲ ರವರ ಮಗಳು ಕು|| ವೆನ್ನಿಲ. ಎನ್, 20 ವರ್ಷ ರವರು ದಿನಾಂಕ-09-05-2020 ರಂದು ರಾತ್ರಿ 08.40 ಗಂಟೆಯಲ್ಲಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮನ್ನುಬಾಯಿ, ದೊಡ್ಡಪನ್ನಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ವೆಂಕೋಬರಾವ್, 62 ವರ್ಷ ರವರಿಗೆ ಪೈಲ್ಸ್ ಖಾಯಿಲೆ ಇದ್ದು ಚಿಕಿತ್ಸೆ ಕೊಡಿಸಿದರೂ ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10.05.2020 ರಂದು ಬೆಳಿಗ್ಗೆ 7-00 ಗಂಟೆಗೆ ವೆಂಕಟಪುರ ಅರಣ್ಯ ಪ್ರದೇಶಕ್ಕೆ ಹೋಗಿ ಒಂದು ಕಾಡು ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.