ದಿನದ ಅಪರಾಧಗಳ ಪಕ್ಷಿನೋಟ 11ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಚ10.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ದೊಂಬಿ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶ್ಯಾಮಲಮ್ಮ ಕೊಂ ಸೊಲ್ಲಾಪುರಿ, ಅಡಂಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ ಮತ್ತು ರಮೇಶ್‌, ಹನುಮಂತ, ಪ್ರಕಾಶ್‌, ಸುಬ್ರಮಣಿ, ಸುಬ್ಬು, ರಾಮಚಂದ್ರ ರವರಿಗೆ  ವೈಮನಸ್ಸುಗಳಿದ್ದು ದಿನಾಂಕ-09-03-2020 ರಂದು  ಬೆಳಿಗ್ಗೆ 8.00 ಗಂಟೆಯಲ್ಲಿ ದೂರುದಾರರು ಮತ್ತು ಅವರ ತಾಯಿ ತಿಮ್ಮರಾಜು ರವರ ಮನೆ ಮುಂದೆ  ನಡೆದುಕೊಂಡು ಹೋಗುತ್ತಿದ್ದಾಗ,  ರಮೇಶ್‌, ಹನುಮಂತ, ಪ್ರಕಾಶ್‌, ಸುಬ್ರಮಣಿ, ಸುಬ್ಬು, ರಾಮಚಂದ್ರ ರವರು ಬಂದು ದೂರುದಾರರ ಮೇಲೆ ಜಗಳ ಮಾಡಿ, ಕೆಟ್ಟಮಾತುಗಳಿಂದ ಬೈದು ಕೈಗಳಿಂದ ಹೊಡೆದಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಗುರುವನಬೋವಿ, ಚಿಕ್ಕ ಎಳೇಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 10.03.2020 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಎದುರುಗಡೆ ಇರುವ ಆಲದಮರದ ಕೆಳಗೆ ಚೀಟಿ ಕೂಗುತ್ತಿದ್ದಾಗ, ಜಗದೀಶ್‌ ಎಂಬುವರು ಚೀಟಿ ಕರೆಯಲು ಬಂದಿದ್ದು, ದೂರುದಾರರು ನೀನು ಚೀಟಿಯಲ್ಲಿ ಇಲ್ಲ ಚೀಟಿ ಕರೆಯಬೇಡ ಎಂತ ಹೇಳಿದ್ದಕ್ಕೆ ದೂರುದಾರರೊಂದಿಗೆ ಜಗಳ ಮಾಡಿದ್ದು, ಅಗ್ಗಿರಾಮಪ್ಪ, ಶಾಂತಕುಮಾರ್‌, ಬೆಂಗಳೂರಪ್ಪ, ಗುರಪ್ಪ ಮತ್ತು ಪೊಂಡಮ್ಮ  ರವರು ಏಕಾಏಕಿ ದೂರುದಾರರೊಂದಿಗೆ ನಾವು ಚೀಟಿ ಕೂಗುತ್ತೇವೆ ನೀನು ಯಾರು ಕೇಳಲು ಎಂತ ಜಗಳ ಮಾಡಿ ಕೈಗಳಿಂದ ಮತ್ತು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀ.ಲಕ್ಷ್ಮಮ್ಮ ಕೊಂ ಅಗ್ಗಿರಾಮಪ್ಪ, ಚಿಕ್ಕ ಎಳೇಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 10.03.2020 ರಂದು ಬೆಳಿಗ್ಗೆ  ಚಿಕ್ಕ ಯಳೇಸಂದ್ರ ಗ್ರಾಮದಲ್ಲಿರುವ ಓಂಶಕ್ತಿ ದೇವಾಲಯದ ಬಳಿ ಚೀಟಿಯನ್ನು ಕರೆಯುತ್ತಿದ್ದಾಗ, ಅಮಾಸನಬೋಮಿ ರವರು ದೂರುದಾರರನ್ನು ಕೆಟ್ಟಮಾತುಗಳಿಂದ ಬೈಯುತ್ತಿದ್ದು, ದೂರುದಾರರು ಕೇಳಿದ್ದಕ್ಕೆ ಕಾಲಿನಿಂದ ಒದ್ದು ಗಾಯವನ್ನುಂಟು ಮಾಡಿರುತ್ತಾರೆ. ನಂತರ ಚಿಕ್ಕಣ್ಣ, ಮುನಿಯಿಪ್ಪ, ನಿರ್ಮಲಾ, ಪೂಜಾರಿ, ಬೈಯಮ್ಮ, ಮಂಜು, ಮುನಿಯಮ್ಮ, ಕವಿತಾ, ವೆಂಕಟೇಶ್‌, ಗಂಗಮ್ಮ ಮತ್ತು ಕೃಷ್ಣ ರವರು ದೂರುದಾರರೊಂದಿಗೆ ಮತ್ತು ದೂರುದಾರರ ಮಗನಾದ ಶರತ್ ಕುಮಾರ್ ರವರೊಂದಿಗೆ ಗಲಾಟೆ ಮಾಡಿ,  ಕೈಗಳಿಂದ ಹೊಡೆದಿರುತ್ತಾರೆ.

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.03.2020 ರಂದು ಸಂಜೆ 4.15 ಗಂಟೆಯಲ್ಲಿ ದೊಡ್ರಹಳ್ಳಿ ಗ್ರಾಮದಲ್ಲಿರುವ ಚಿಲ್ಲರೆ ಅಂಗಡಿಯೊಂದರ ಹಿಂಭಾಗದಲ್ಲಿ, ರೇಣುಕಾ ಎಂಬುವರು ಯಾವುದೇ ಅನುಮತಿ/ಪರವಾನಿಗಿ ಇಲ್ಲದೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈಕೆಯನ್ನು ಮತ್ತು ಸ್ಥಳದಲ್ಲಿದ್ದ 1) Haywards Whisky 90 ml ನ 06 ಖಾಲಿ ಪಾಕೇಟ್ ಗಳು, 02 ಪ್ಲಾಸ್ಟಿಕ್ ಲೋಟಗಳು, 02 ಖಾಲಿ ವಾಟರ್ ಪ್ಯಾಕೆಟ್ ಗಳು ಮತ್ತು ಅರ್ಧ ನೀರಿರುವ ಕಿನ್ಲೇ ವಾಟರ್ ಬಾಟೆಲ್ ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *