ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:10.02.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕನ್ನಕಳುವು : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಗಲು ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಪ್ರಮೀಳಾ ಕೊಂ ಜಯಪಾಲ್, ಶ್ರೀರಾಮನಗರ ಬಡಾವಣೆ, ಉರಿಗಾಂಪೇಟೆ, ಕೆ.ಜಿ.ಎಫ್ ರವರು ದಿನಾಂಕ 10.02.2020 ರಂದು ಮದ್ಯಾಹ್ನ 12-10 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಂಜುನಾಥನಗರ ರಸ್ತೆಯಲ್ಲಿನ ಅಂಗಡಿಗೆ ಹಾಲು ತರಲು ಹೋಗಿ, ಮದ್ಯಾಹ್ನ 12-45 ಗಂಟೆಗೆ ಮನೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಮನೆಯ ಡೋರ್ ಲಾಕ್ ನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ರೂಮಿನಲ್ಲಿದ್ದ ಗಾಡ್ರೇಜ್ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ 164 ಗ್ರಾಂ ತೂಕದ ಬಂಗಾರದ ಒಡವೆಗಳು ಬೆಲೆ 4,92,000/- ರೂ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.
– ಜೂಜಾಟ ಕಾಯ್ದೆ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.02.2020 ರಂದು ಸಂಜೆ 5.30 ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಯಳೇಸಂದ್ರ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ನೀಲಗಿರಿ ತೋಪಿನಲ್ಲಿ ಚಿಕ್ಕಯಳೇಸಂದ್ರ ಗ್ರಾಮದ ವಾಸಿಗಳಾದ ಪೂಜಾರಪ್ಪ, ಚಿರಂಜೀವಿ, ಆಂಜಪ್ಪ ಮತ್ತು ಸುರೇಶಪ್ಪ ರವರುಗಳು ಯಾವುದೇ ಪರವಾನಿಗೆಯಿಲ್ಲದೇ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿ.ಎಸ್.ಐ ಶ್ರೀ ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ನಗದು 2,480-00 ರೂ ಹಾಗೂ 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
– ಹಲ್ಲೆ : 04
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಜಯ್ ಬಿನ್ ಆನಂದ್ ರಾಜ್, ಸೇಠ್ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ಮತ್ತು ದೂರುದಾರರ ಚಿಕ್ಕಪ್ಪನ ಮಗನಾದ ಕುಮರೇಶನ್ ರವರು ದಿನಾಂಕ: 09.02.2020 ರಂದು ರಾತ್ರಿ 9.00 ಗಂಟೆಯಲ್ಲಿ ದೂರುದಾರರ ಮನೆಯ ಬಳಿ ಇದ್ದಾಗ, ಅಜಿತ್ ರವರನ್ನು ಆರ್.ಡಿ ಬ್ಲಾಕ್ ನಲ್ಲಿರುವ ಅವರ ಅತ್ತೆಯ ಮನೆ ಬಳಿ ಪಳಿನಿ ಮತ್ತು ಮದನ್ ರವರು ಹೊಡೆಯುತ್ತಿರುವುದು ತಿಳಿದು, ಅಲ್ಲಿ ಹೋಗಿ ಕೇಳುವಷ್ಟರಲ್ಲಿ ದೋಣ್ಣೆ ಮತ್ತು ಕೈಗಳಿಂದ ದೂರುದಾರರಿಗೆ ಮತ್ತು ಕುಮರೇಶನ್ ರವರಿಗೆ ಹೊಡೆದು ರಕ್ತಗಾಯಪಡಿಸಿ, ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ್ ಬಿನ್ ವೆಂಕಟೇಶಪ್ಪ, ಕೀರ್ತಿಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಕವಿತಾ ರವರನ್ನು ತನಿಮಡಗು ಗ್ರಾಮದ ವಾಸಿ ರಾಜೇಂದ್ರ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಕವಿತಾ ರವರಿಗೆ ಅತ್ತೆ ವರಮ್ಮ, ನಾಧಿನಿ ಮಂಜುಳಾ ಮತ್ತು ಮಂಜುಳಾ ರವರ ಗಂಡ ವೆಂಕಟೇಶಪ್ಪ ರವರು ಜಗಳ ಮಾಡಿರುವ ವಿಚಾರವನ್ನು ಕೇಳಲು ದೂರುದಾರರು ದಿನಾಂಕ 08.02.2020 ರಂದು ಬೆಳಿಗ್ಗೆ 10.00 ಗಂಟೆಗೆ ತನಿಮಡಗು ಗ್ರಾಮದ ಮಂಜುಳಾ ರವರ ಮನೆಯ ಬಳಿ ಹೋಗಿ ಕೇಳುತ್ತಿದಂತೆ ವರಮ್ಮ, ಮಂಜುಳಾ ಮತ್ತು ವೆಂಕಟೇಶಪ್ಪ ರವರು ಕಲ್ಲು, ದೊಣ್ಣೆ ಮತ್ತು ಕೈಗಳಿಂದ ಹೊಡೆದು ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.
ಉರಿಗಾಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.
ದೂರುದಾರರಾದ ಶ್ರೀ. ಜಯಕುಮಾರ್ ಬಿನ್ ಚಿನ್ನಯ್ಯ, ಕೆನಡೀಸ್ ಆಂದ್ರ ಲೈನ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:10.02.2020 ರಂದು ಮದ್ಯಾಹ್ನ 12.45 ಗಂಟೆಯಲ್ಲಿ ಕೆನಡೀಸ್ ಲೈನಿನ್ ಮುಖ್ಯ ರಸ್ತೆಯಲ್ಲಿರುವಾಗ, ಜಗನ್ ರವರು ಒಂದು ಕಬ್ಬಿಣದ ರಾಡಿನ ಸಮೇತ ಬಂದು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ರಾಡಿನಿಂದ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಚೋಕು ಎಂಬುವನ ಆಟೋದಲ್ಲಿ ದೂರುದಾರರನ್ನು ಕುಳ್ಳಿರಿಸಿಕೊಂಡು ಸೌತ್ ಟ್ಯಾಂಕ್ ಬ್ಲಾಕ್ ಮಾರ್ಗವಾಗಿ ಪಿಟ್ಟರ್ಸ್ ಬ್ಲಾಕ್ ಗೆ ಹೋಗುವ ದಾರಿಯಲ್ಲಿ ಮುಳ್ಳು ಗಿಡಗಳ ಮದ್ಯೆ ಆಟೋದಿಂದ ಕೆಳಗಿಳಿಸಿ ಕೈಗಳಿಂದ ಹೊಡೆದು ಅಲ್ಲಿಂದ ಪರಾರಿಯಾಗಿರುತ್ತಾರೆ.
ದೂರುದಾರರಾದ ಶ್ರೀ. ಕಾರ್ತಿಕ್ ಪ್ರಭಾಕರ್ ಬಿನ್ ಆನಂದರಾಜ್, ಎನ್.ಟಿ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:08.02.2020 ರಂದು ರಾತ್ರಿ 8.30 ಗಂಟೆಯಲ್ಲಿ ದ್ವಿಚಕ್ರವಾಹನದಲ್ಲಿ ಉರಿಗಾಂ ಸತ್ತಾರ್ ಸರ್ಕಲ್ ಕಡೆಯಿಂದ ಸಗಾಯರಾಜ್ ರವರ ಸೈಕಲ್ ಶಾಫ್ ಬಳಿ ವಾಹನವನ್ನು ತಿರುಗಿಸುತ್ತಿದ್ದಾಗ, ಅಲ್ಲಿದ್ದ ಗೋಪಿ ದೂರುದಾರರನ್ನು ಕರೆದು, ಏಕೆ ನಿಮ್ಮ ತಾಯಿಯನ್ನು ಬೈದುತ್ತೀಯಾ ಎಂದು ಕೇಳಿದ್ದು, ಅದಕ್ಕೆ ದೂರುದಾರರು ನನ್ನ ತಾಯಿಯನ್ನು ಬೈದರೆ ನಿನಗೇನು ಎಂದು ಹೇಳಿದ್ದಕ್ಕೆ ಗೋಪಿ ಕೈ ಮುಷ್ಟಿಯಿಂದ ದೂರುದಾರರ ಬಾಯಿಯ ಮೇಲೆ ಗುದ್ದಿ ರಕ್ತಗಾಯಪಡಿಸಿದ್ದು, ಜಗಳ ಬಿಡಿಸಲು ಬಂದ ದೂರುದಾರರ ಅತ್ತೆ ಕೃಷ್ಣವೇಣಿ ರವರಿಗೂ ಗೋಪಿ ಕಪಾಳಕ್ಕೆ ಹೊಡೆದಿರುತ್ತಾನೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದಾಸ್ ಬಿನ್ ಜ್ಞಾನ ಪ್ರಕಾಶ್, ಪಾರಾಂಡಹಳ್ಳಿ, ಕೆ.ಜಿ.ಎಫ್ ರವರ ಮಗಳಾದ ಸಂಗೀತಾ, 24 ವರ್ಷ ರವರು ದಿನಾಂಕ.09.02.2020 ರಂದು ಮದ್ಯಾಹ್ನ 1.30 ಗಂಟೆಯಿಂದ 2.45 ಗಂಟೆಯ ಮದ್ಯೆ ಮನೆಯಿಂದ ಕಾಣೆಯಾಗಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಚಿತ್ರಾ, ವೆಸ್ಲಿನ್ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರ ಅಕ್ಕ ಶ್ರೀಮತಿ ಗೌತಮಿ ರವರಿಗೆ ಥೈರಾಯಿಡ್ ಖಾಯಿಲೆ ಇದ್ದು ಹಾಗೂ ಅತಿಯಾದ ಹೊಟ್ಟೆನೋವು ಬರುತ್ತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ವಾಸಿಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆಹೊಂದಿ ದಿನಾಂಕ:10.02.2020 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲ್ಚಾವಣಿಯ ರೀಪರ್ ಗೆ ಓಣಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.