ದಿನದ ಅಪರಾಧಗಳ ಪಕ್ಷಿನೋಟ 11ನೇ ಅಕ್ಟೋಬರ್‌ 2019

– ಕನ್ನ ಕಳುವು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂಪಂಗಿ ಬಿನ್ ಧರ್ಮಲಿಂಗಂ, ಕ್ರಿಕೆಟ್‌ ಬ್ಲಾಕ್‌ ಮಾಡೆಲ್ ಹೌಸ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ   ತನ್ನ ಹೆಂಡತಿ ದಿನಾಂಕ 18.09.2019 ರಂದು ಬೆಳಿಗ್ಗೆ 8.30 ಗಂಟೆಗೆ ಮನೆಗೆ ಬೀಗ ಡೋರ್ ಲಾಕ್ ಅಳವಡಿಸಿ ಅಂಗಡಿಗೆ ಹೋಗಿ ರಾತ್ರಿ 9.00 ಗಂಟೆಗೆ ವಾಪಸ್ಸು ಬಂದು ನೋಡುವಷ್ಟರಲ್ಲಿ ಮನೆಯ ಹಿಂಭಾಗದ ಬಾಗಿಲು ತೆರೆದು, ಬೀರುವಿನಲ್ಲಿದ್ದ 198 ಗ್ರಾಂ ಬಂಗಾರದ ಒಡವೆಗಳು ಬೆಲೆ 3,96,000/- ರೂ ಬಾವಳುವುದನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.10.2019 ರಂದು ಸಂಜೆ 4.00 ಗಂಟೆಯಲ್ಲಿ ಐಯಪಲ್ಲಿ ಐಯಪಲ್ಲಿ ಕೆರೆ ಅಂಗಳದಲ್ಲಿ ಬಳಿ ೧. ರಾಮಚಂದ್ರಪ್ಪ, ಬೇತಮಂಗಲ, ೨. ಸಂತೋಷ್‌, ಬ್ಯಾಟರಾಯನಹಳ್ಳಿ, ೩. ನಾಗರಾಜ್, ಬ್ಯಾಟರಾಯನಹಳ್ಳಿ, ೪. ಪ್ರಭಾಕರ, ಬೇತಮಂಗಲ ಮತ್ತು ೫. ಮುನಿಯಪ್ಪ, ಬ್ಯಾಟರಾಯನಹಳ್ಳಿ ಗ್ರಾಮ ರವರು ಇಸ್ವೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ಪಿ.ಎಸ್.ಐ ಶ್ರೀ. ಸುನೀಲ್‌ ಕುಮಾರ್‌ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಗಳನ್ನು ಮತ್ತು 4,100.00 ರೂಗಳನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 03

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಭಾಕರ್‌ರೆಡ್ಡಿ ಬಿನ್ ಕೋದಂಡರೆಡ್ಡಿ, ಯರ್‍ರನಾಗನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ 4 ತಿಂಗಳ ಹಿಂದೆ ತೀರಿಕೊಂಡಿದ್ದು, ಇದರಿಂದ ದೂರುದಾರರ  ತಾಯಿ ರಾಮಕ್ಕ, 75 ವರ್ಷ ರವರು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ.10.10.2019 ರಂದು ಸಂಜೆ 5.00 ಗಂಟೆಯಲ್ಲಿ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿಕೊಂಡಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಅರುಣಾ, ನಾಗನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 05.10.2019 ರಂದು ಸಂಜೆ 7.30 ಗಂಟೆಯಲ್ಲಿ ಮನೆಯಲ್ಲಿ ಗ್ಯಾಸ್ ಮೇಲೆ ಅಡುಗೆ ಮಾಡಲು ನೀರು ಇಟ್ಟು ಬೇರೆ ಕೆಲಸದಲ್ಲಿದ್ದಾಗ, ದೂರುದಾರರ ಮಗನಾದ 3 ವರ್ಷದ  ಸಂದೀಪ್ ಕುಮಾರ್  ಬಿಸಿ ನೀರನ್ನು ಆಕಸ್ಮಿಕವಾಗಿ ಮೈ ಮೇಲೆ ಎಳೆದುಕೊಂಡಿದ್ದರಿಂದ ಎರಡೂ ಕಾಲು, ಹೊಟ್ಟೆ ಹಾಗೂ ಕೈಗಳ ಮೇಲೆ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10.10.2019 ರಂದು ಬೆಳಿಗ್ಗೆ 3.00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ.

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.08-10-2019 ರಂದು  ಮಧ್ಯಾಹ್ನ ಸುಮಾರು 3-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶಶಿಕಲಾ, ಎಸ್‌.ಟಿ.ಬ್ಲಾಕ್, ಚಾಂಪಿಯನ್ ರೀಪ್ಸ್ ರವರ  ಗಂಡನಾದ ಮೂರ್ತಿ ಬಿನ್ ಲೇಟ್ ತಂಗರಾಜ್, ವಯಸ್ಸು 44 ವರ್ಷ ರವರು ಬೆಮಲ್ ನಗರದ, ಹೆಚ್.ಪಿ.ನಗರದಲ್ಲಿರುವ ವಿಜಯಲಕ್ಷ್ಮಿ ಎಂಬುವರ ಮನೆಯ ಹಿಂದುಗಡೆ ಗೋಡೆಗೆ ಏಣಿಯನ್ನು ಹಾಕಿಕೊಂಡು ಪೈಂಟಿಂಗ್ ಕೆಲಸ ಮಾಡುತ್ತಿರುವಾಗ, ಆಕಸ್ಮಿಕವಾಗಿ ಏಣಿಯಿಂದ ಕಾಲು ಜಾರಿ ಕೆಳಗೆ ಬಿದ್ದಾಗ, ಮೂರ್ತಿ ರವರಿಗೆ ಬಲಕಿವಿಯ ಬಳಿ ರಕ್ತಗಾಯವಾಗಿ, ಕಿವಿಯಲ್ಲಿ ರಕ್ತ ಬಂದಿದ್ದು, ಆತನನ್ನು ಚಿಕಿತ್ಸೆಗೆ ಬೆಮಲ್ ನಗರ ಸಂಭ್ರಮ್ ಆಸ್ಪತ್ರೆ, ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆ ಹಾಗೂ ಬೆಂಗಳೂರು ಗಿರಿನಗರದಲ್ಲಿರುವ ಪಲ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲುಪಡಿಸಿ ಚಿಕಿತ್ಸೆ ಕೊಡಿಸಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ದಿನಾಂಕ.09-10-2019 ರಂದು ಸಂಜೆ ಸುಮಾರು 6-30 ಗಂಟೆಯಲ್ಲಿ ಮೂರ್ತಿ ರವರನ್ನು ಪಲ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಡಿಸ್ಸಾರ್ಜ್ ಮಾಡಿಸಿಕೊಂಡು ಆಂಬುಲೆನ್ಸ್ ನಲ್ಲಿ ಆಂದ್ರಪ್ರದೇಶದ ಕುಪ್ಪಂ PES ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ರಾತ್ರಿ ಸುಮಾರು 10-20 ಗಂಟೆಯಲ್ಲಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *