ದಿನದ ಅಪರಾಧಗಳ ಪಕ್ಷಿನೋಟ 10 ನೇ ಡಿಸೆಂಬರ್ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 09.12.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
    

 – ರಸ್ತೆ ಅಪಘಾತಗಳು :‍  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ ಬಿನ್ ನಾರಾಯಣಪ್ಪ, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ,  ದಿನಾಂಕ 08.12.2018 ರಂದು ಸಂಜೆ 6.30 ಗಂಟೆಯಲ್ಲಿ ಹುಣಸನಹಳ್ಳಿ ಗ್ರಾಮದ ವಾಸಿಯಾದ ಜಗದೀಶ್ ರವರು  ಹೀರೋ ಐ ಸ್ಮಾರ್ಟ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಯು-4454 ನ್ನು ಸವಾರಿ ಮಾಡಿಕೊಂಡು ಬಂಗಾರಪೇಟೆಗೆ ಹೋಗಲು ಹುಣಸನಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಮುಂದೆ ಬರುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ  ಆರೋಪಿ ಮುನಿರಾಜು ಎಂಬುವರು ಬಜಾಜ್ ಪಲ್ಸರ್  ದ್ವಿಚಕ್ರ ವಾಹನ  ಸಂಖ್ಯೆ ಕೆಎ-08-ಜೆ-6246 ರ  ಹಿಂಬದಿಯಲ್ಲಿ ಹೆಂಡತಿ ಶಿಲ್ಪ ರವರನ್ನು ಕುಳ್ಳರಿಸಿಕೊಂಡು ವಾಹನವನ್ನು ಅತಿವೇಗ & ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ಜಗದೀಶ್ ರವರ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜಗದೀಶ್, ಆರೋಪಿ ಮುನಿರಾಜು ಮತ್ತು ಶಿಲ್ಪ ರವರುಗಳು ವಾಹನಗಳ ಸಮೇತ ಕೆಳಗೆ ಬಿದ್ದಾಗ, ಜಗದೀಶ್ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಆರೋಪಿ ಮುನಿರಾಜು & ಶಿಲ್ಪ ರವರಿಗೂ ಸಹ ರಕ್ತಗಾಯಗಳಾಗಿರುತ್ತೆ.  ಜಗದೀಶ್ ರವರನ್ನು ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗಮದ್ಯೆ ರಾತ್ರಿ 10.30 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

 

 ಹಲ್ಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಧ್ಯನಾಥನ್ ಬಿನ್ ಜಯಪಾಲ್, ಹಳೇ ಓರಿಯೆಂಟಲ್‌ ಲೈನ್‌, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:09.12.2018 ರಂದು ಸಂಜೆ 6.00 ಗಂಟೆಯಲ್ಲಿ ತನ್ನ ಮಗಳೊಂದಿಗೆ ಓರಿಯೆಂಟಲ್ ಲೈನ್ ಸೀತಾನಾಯ್ಡು ರವರ ಅಂಗಡಿಯ ಬಳಿ ನಡೆದು ಹೋಗುತ್ತಿರುವಾಗ, ಅಲ್ಲಿ ನಿಂತಿದ್ದ ಅಪ್ಪುಕಿಲಿ @ ಸಂತೋಷ್ ಎಂಬುವನು ದೂರುದಾರರ ಮಗಳನ್ನು ಚುಡಾಯಿಸಿದ್ದು, ಅದನ್ನ ಪ್ರಶ್ನಿಸಿದ ದೂರುದಾರರಿಗೆ ಸಂತೋಷ್‌,  ವೇಲ್ಸ್ ಹಾಗೂ ಸತೀಶ್ ರವರು ಕೆಟ್ಟ ಮಾತುಗಳಿಂದ ಬೈದು, ಜಗಳ ಮಾಡಿ  ಚಾಕು ಮತ್ತು ಮರದ ಪೀಸಿನಿಂದ ಮತ್ತು ಕೈಗಳಿಂದ ಹೊಡೆದು ಗಾಯ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *