ದಿನದ ಅಪರಾಧಗಳ ಪಕ್ಷಿನೋಟ 10 ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:09.07.2019 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರಾಜು ಬಿನ್ ಶ್ರೀನಿವಾಸ್, ನಾತಿಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದ್ವಿಚಕ್ರ ವಾಹನ ಪಲ್ಸರ್ ಸಂಖ್ಯೆ ಕೆಎ-08-ಎಕ್ಸ್-8255 ರಲ್ಲಿ ಸ್ನೇಹಿತ ಅರುಣ್ ರವರನ್ನು ಹಿಂಬದಿ ಕುಳ್ಳರಿಸಿಕೊಂಡು ದಿನಾಂಕ 08.07.2019 ರಂದು ಸಂಜೆ 4-00 ಗಂಟೆಗೆ ಇಂದಿರಾನಗರದಿಂದ ಬಂಗಾರಪೇಟೆಗೆ ಬರಲು ರಂಗಪ್ಪ ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಇಂಡಿಕಾ ಕಾರ್ ಸಂಖ್ಯೆ ಕೆಎ-05-ಎಂಸಿ-7666 ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಮತ್ತು ಆತನ ಸ್ನೇಹಿತ ಅರುಣ್ ವಾಹನ ಸಮೇತ ಕೆಳಗೆ ಬಿದ್ದಾಗ, ಇಬ್ಬರಿಗೂ ಗಾಯಗಳಾಗಿರುತ್ತದೆ. 

– ಮೋಸ/ವಂಚನೆ : 02

ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್ ಶರ್ಮ ಬಿನ್ ಮಿತ್ತಲಾಲ್ ಶರ್ಮ, ೧ನೇ ಕ್ರಾಸ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ಮೆ|| ಶರ್ಮ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದು,  7 ವರ್ಷಗಳಿಂದ Shanghai Yi Ting Guo International Trade Co.Ltd, China ರವರಿಂದ ಬಿದಿರು ಕಡ್ಡಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ದಿನಾಂಕ 03.08.2016 ರ ಹಿಂದ ಯಾರೋ ಆಸಾಮಿಗಳು ದೂರುದಾರರ ಇ-ಮೇಲ್ ನ್ನು ಹ್ಯಾಕ್‌ ಮಾಡಿ ಬ್ಯಾಂಕ್‌ ಖಾತೆಯನ್ನು ಬದಲಾಯಿಸಿ ಇನ್ವಾಯ್ಸ್‌ ನ್ನು ಕಳುಹಿಸಿದ್ದು, ಇದನ್ನು ನಂಬಿ ದೂರುದಾರರು ದಿನಾಂಕ 03.08.2016 ರಂದು ಕರೂರ್‌ ವೈಶ್ಯ ಬ್ಯಾಂಕ್‌, ಕೆ.ಜಿ.ಎಫ್‌ ನಿಂದ 23,18,508/- ರೂಗಳನ್ನು ವಿದೇಶಿ ವಿನಿಮಯ ಮಾಡಿ ಮೋಸ ಹೋಗಿರುತ್ತಾರೆ. 

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.09.07.2019 ರಂದು ದೂರುದಾರರಾದ ಶ್ರೀ. ಶ್ರೀಕಾಂತ್‌ ನಗರ ಸಭೆ, ಪೌರಾಯುಕ್ತರು, ರಾಬರ್ಟ್‌ಸನ್‌ಪೇಟೆ ಕೆ,.ಜಿ.,ಎಫ್‌ ರವರು ನೀಡಿದ ದೂರಿನಲ್ಲಿ  ಕೆ.ಜಿ.ಎಫ್ ನಗರದ ಮನೆಗಳು ಮತ್ತು ಖಾಸಗಿ ಸಂಸ್ಥೆಯವರು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯುವ ಸಂರ್ಧದಲ್ಲಿ ನಗರಸಭೆ ಕಛೇರಿಯಿಂದ “ನಿರಾಕ್ಷೇಪಣಾ ಪತ್ರ” ಪಡೆಯಬೇಕಾಗಿದ್ದು, ದಿನಾಂಕ.19.03.2019 ರಂದು ಮೋಹನ್ ಸತ್ಯಕುಮಾರ್ ಬಿನ್ ಎಲ್.ಸತ್ಯಕುಮಾರ್, ನಂ.120, ಅವೆನ್ಯೂ ರಸ್ತೆ, ರಾಬರ್ಟ್ ಸನ್ ಪೇಟೆ ರವರಿಗೆ “ವಿದ್ಯುತ್ ನಿರಾಕ್ಷೇಪಣಾ” ಪತ್ರವನ್ನು ನಗರ ಸಭೆ ಕಛೇರಿಯಿಂದ ನೀಡಿರುವಂತ ವಿದ್ಯತ್ ನಿರಾಕ್ಷೇಪಣಾ” ಪತ್ರವನ್ನು ದಿನಾಂಕ.10.06.2019 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕೆ.ಜಿ.ಎಫ್ ವಾಸಿಯಾದ ಆರೋಪಿ  ಅಲೆಕ್ಸ್ ಎಂಬುವರು ನಗರ ಸಭೆ ಬಳಿ ಎನ್‌ಓಸಿಯನ್ನು ವಿತರಿಸಲು ಯತ್ನಿಸುವ ಪ್ರಯತ್ನದಲ್ಲಿದ್ದಾಗ ದೂರುದಾರರು ಆರೋಪಿಯನ್ನು ವಶಕ್ಕೆ ಪಡೆದು ನೋಡಿದಾಗ, ಅಲೆಕ್ಸ್ ಎಂಬುವರು ಪೌರಾಯುಕ್ತರು ಹಾಗೂ ಪರಿಸರ ಅಭಿಯಂತರರ ಸಹಿಯನ್ನು ಅಳತೆ ಬೆಕ್ಕುಬಂದಿಯಲ್ಲಿ ವ್ಯತ್ಯಾಸ ಇತ್ಯಾದಿ ತಿದ್ದುಪಡಿ ಮಾಡಿ, ನಕಲು ಮಾಡಿ, ವಿದ್ಯುತ್ ನಿರಾಕ್ಷೇಪಣಾ ಪತ್ರವನ್ನು ಸಂಬಂಧಿಸಿದವರಿಗೆ ನೀಡಲು ಪ್ರಯತ್ನಿಸಿರುತ್ತಾರೆಂದು ದೂರು

Leave a Reply

Your email address will not be published. Required fields are marked *