ದಿನದ ಅಪರಾಧಗಳ ಪಕ್ಷಿನೋಟ 10 ನೇ ಜೂನ್‌ 2019

 –ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗರತ್ನಮ್ಮ ಕೊಂ ನಾರಾಯಣಸ್ವಾಮಿ, ಕ್ಯಾಸಂಬಳ್ಳ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ  09.06.2019 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಮನೆ ಬಳಿ ಇರುವಾಗ ಅದೇ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ, ಸೀತಮ್ಮ, ಮುನಿಯಮ್ಮ, ಲಕ್ಷ್ಮಮ್ಮ ಮತ್ತು ಅಬ್ಬಣ್ಣ ರವರು ಅಲ್ಲಿಗೆ ಬಂದು ದೂರುದಾರರನ್ನು ಕುರಿತು “ನಮ್ಮ ಅಜ್ಜಿ ಬಳಿ ಯಾಮಾರಿಸಿ ಜಮೀನನ್ನು ಪಡೆದು ಕೊಂಡಿದ್ದೀರಿ” ಎಂದು ಹೇಳಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಲ್ಲಿನಿಂದ  ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *