ದಿನದ ಅಪರಾಧಗಳ ಪಕ್ಷಿನೋಟ 10 ನೇ ಮೇ 2019

 –ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಇಂದ್ರಮ್ಮ ಕೊಂ ರಘುಪತಿ, ಕದಿರಿಗಾನಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ ಮತ್ತು ಯಶೋದಮ್ಮ ರವರಿಗೆ ನೀರು ಹಿಡಿಯುವ ವಿಚಾರದಲ್ಲಿ ಗಲಾಟೆಗಳಾಗಿದ್ದು, ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ: 09-05-2019 ರಂದು ಬೆಳಗ್ಗೆ 10.00 ಗಂಟೆಯಲ್ಲಿ ದೂರುದಾರರು ಹಸುಗಳನ್ನು ಹಿಡಿದುಕೊಂಡು ಗ್ರಾಮದ ಗಂಗಮ್ಮ ದೇವಾಲಯದ ಬಳಿ ಹೋಗುತ್ತಿದ್ದಾಗ, ಯಶೋದಮ್ಮ ಮತ್ತು ಆಕೆಯ ಸೊಸೆ ಶಶಿ ರವರು ಏಕಾಏಕಿ ಅಡ್ಡ ಬಂದು ಕಣ್ಣಿಗೆ ಮಣ್ಣಿನ ತರಹದ ಧೂಳನ್ನು ಚಲ್ಲಿ ಕೈಗಳಿಂದ ಹೊಡೆದು ರಕ್ತಗಾಯಪಡಿಸಿದ್ದು, ಅಲ್ಲಿಗೆ ಬಂದಿದ್ದ ಯಶೋದಮ್ಮ ರವರ ಗಂಡ ವಸರಾಯಪ್ಪ ಮತ್ತು ಮಕ್ಕಳಾದ ಮಂಜುನಾಥ್ ಹಾಗೂ ಸಂತೊಷ ರವರು ಸಹ ದೂರುದಾರರನ್ನು ಕೈಗಳಿಂದ ಮತ್ತು ಕಾಲುಗಳಿಂದ ಹೊಡೆದು ಮೈಕೈ ನೋವುಂಟು ಮಾಡಿದ್ದು,  ದೂರುದಾರರ ಗಂಡ ರಘುಪತಿ ರವರು ವಿಷಯ ಗೊತ್ತಾಗಿ ಯಶೋದಮ್ಮ ರವರ ಮನೆಗೆ ಹೋಗಿ ಕೇಳಲಾಗಿ ಯಶೋದಮ್ಮ, ವಸರಾಯಪ್ಪ, ಶಶಿ, ಮಂಜುನಾಥ ಮತ್ತು ಸಂತೋಷ್ ರವರು ಗುಂಪು ಕಟ್ಟಿಕೊಂಡು ರಘುಪತಿ ರವರನ್ನು ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

 

–ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ ಬಿನ್ ವನಗುರ್ಕಪ್ಪ, ವರದಾಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಉಮಾ, 20 ವರ್ಷ ಎಂಬುವರು  ದಿನಾಂಕ 05.05.2019 ರಂದು ಬೆಳಿಗ್ಗೆ 6-00 ಗಂಟೆಯಿಂದ ಮದ್ಯಾಹ್ನ 2-00 ಗಂಟೆಯ ಮದ್ಯೆ ಮನೆಯಿಂದ ಕಾಣೆಯಾಗಿರುತ್ತಾರೆ.

–ಅಸ್ವಾಭಾವಿಕ ಮರಣ ಪ್ರಕರಣ : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಮೂರ್ತಿ ಬಿನ್ ಕೃಷ್ಣಪ್ಪ, ತಿರುಮಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಅಣ್ಣ ಸುಂದರ್ ಮೂರ್ತಿ, 36 ವರ್ಷ ರವರಿಗೆ ಮದ್ಯಪಾನ ಸೇವಿಸುವ ಅಭ್ಯಾಸವಿದ್ದು, ಮದುವೆ ಮಾಡಿಕೊಳ್ಳಲು ಯಾರೂ ಹೆಣ್ಣು ಕೊಡದೆ ಇದ್ದುದ್ದರಿಂದ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು, ಸಂದರ್‌ ಮೂರ್ತಿ ರವರು ದಿನಾಂಕ 08.05.2019 ರಂದು ರಾತ್ರಿ ಮನೆ ಪಕ್ಕದಲ್ಲಿರುವ ಹುಣಸೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಪ್ಪ ಬಿನ್ ಮುನಿಯಪ್ಪ, ಚಿಕ್ಕಹೊಸಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 08.05.2019 ರಂದು ಸಂಜೆ 4.00 ಗಂಟೆಯಲ್ಲಿ ಆಟೋ ಚಲಾಯಿಸಿಕೊಂಡು ಅಬ್ಬಿಗಿರಿ ಹೊಸಹಳ್ಳಿ ಗ್ರಾಮದ ಕೆರೆಯ ಬಳಿ ಹೋಗುತ್ತಿದ್ದಾಗ, ಕೆರೆಯ ಬಳಿ ಜನ ಜಮಾಯಿಸಿದ್ದು, ದೂರುದಾರರು ಹೋಗಿ ನೋಡಲಾಗಿ ಕೆರೆಯ ನೀರಿನಲ್ಲಿ ಅನಾಮಧೇಯ ಗಂಡಸಿನ ಶವ ಸುಮಾರು 45 ರಿಂದ 50 ವರ್ಷ ಬೋರಲಾಗಿ ಬಿದ್ದು ತೇಲುತ್ತಿರುತ್ತೆಂದು ನೀಡಿರುವ ದೂರು.

Leave a Reply

Your email address will not be published. Required fields are marked *