ದಿನದ ಅಪರಾಧಗಳ ಪಕ್ಷಿನೋಟ 10 ನೇ ಏಪ್ರಿಲ್‌ 2019

 –ರಸ್ತೆ ಅಪಘಾತಗಳು : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.09-04-2019 ರಂದು ದೂರುದಾರರಾದ  ಶ್ರೀಮತಿ. ರೇಣುಕ ಕೋಂ  ಮಂಜುನಾಥ, ಹುದುಕುಳ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ.06-04-2019 ರಂದು ದೂರುದಾರರ ಗಂಡ ಮಂಜುನಾಥ್ ರವರು ಯುಗಾದಿ ಹಬ್ಬಕ್ಕೆಂದು ದೊಡ್ಡವಲಗಮಾದಿ ಗ್ರಾಮಕ್ಕೆ ಬಂದು, ಹಬ್ಬ ಮುಗಿಸಿಕೊಂಡು ದಿನಾಂಕ.07-04-2019 ಹುದುಕುಳ ಗ್ರಾಮಕ್ಕೆ ವಾಪಸ್ ಹೋಗಲು ಸಂಜೆ ಸುಮಾರು 5-00 ಗಂಟೆಯಲ್ಲಿ ದೊಡ್ಡವಲಗಮಾದಿ ಗ್ರಾಮದಿಂದ ಅವರ ದ್ವಿಚಕ್ರ ವಾಹನ ಸಂಖ್ಯೆ KA05-HJ-4264 ನ್ನು ಚಲಾಯಿಸಿಕೊಂಡು ದೊಡ್ಡವಲಗಮಾದಿ-ಸಿಂಗರಹಳ್ಳಿ ರಸ್ತೆ, ದೊಡ್ಡವಲಗಮಾದಿ ಗ್ರಾಮದಿಂದ ಹೋಗುತ್ತಿದ್ದಾಗ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಗಂಡ ಮಂಜುನಾಥ್ ರವರ ದ್ವಿಚಕ್ರ ವಾಹನಕ್ಕೆ ಅಪಘಾತಪಡಿಸಿದ ಪರಿಣಾಮ  ರಕ್ತಗಾಯಗಳಾಗಿರುತ್ತದೆ.

 – ಕೊಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಪಾರ್ಥಸಾರಥಿ, ಪಿಚ್ಚಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮನೆ ಮುಂದೆ ದಿನಾಂಕ:09.04.2019 ರಂದು ರಾತ್ರಿ 8.30 ಗಂಟೆಯಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ಪ್ರಯುಕ್ತ ಶುದ್ದಮಾಡುವ ಸಲುವಾಗಿ ದೂರುದಾರರ ಅಕ್ಕ ಗೀತಾ  ಮನೆಯ ಮುಂದೆ ಕಟ್ಟಿ ಹಾಕಿದ್ದ ಕುರಿಯನ್ನು ಬೇರೆ ಕಡೆ ಕಟ್ಟುವಂತೆ ಆರೋಪಿ ಆಂಜಿಗೆ ಹೇಳಿದಾಗ, ಆತನು ಆಕೆಯನ್ನು ಕೆಟ್ಟಮಾತುಗಳಿಂದ ಬೈಯ್ಯುತ್ತಿದ್ದಾಗ, ದೂರುದಾರರು ಮನೆಯಿಂದ ಹೊರಗೆ ಬಂದಾಗ ಆತನಿಗೂ ಸಹಾ ಕೆಟ್ಟಮಾತುಗಳಿಂದ ಬೈದಿದ್ದು, ಪಕ್ಕದ ಮನೆಯಲ್ಲಿದ್ದ ದೂರುದಾರರ ಅತ್ತೆ ಕೃಷ್ಣವೇಣಿ, 50 ವರ್ಷ ರವರು ಅಲ್ಲಿಗೆ ಬಂದಿದ್ದು,  ಆರೋಪಿ ಆಂಜಿ ರವರು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು ಕೈ ಮುಷ್ಟಿಯಿಂದ ಹೊಡೆಯಲು ಹೋಗಿದ್ದು, ಆಗ ಕೃಷ್ಣವೇಣಿ ಅಡ್ಡ ಹೋದಾಗ ಎದೆಯ ಮೇಲೆ ಏಕಾಏಕಿ ಬಲವಾಗಿ ಗುದ್ದಿದ್ದರಿಂದ ಆಕೆ ಪ್ರಜ್ಞೆ ತಪ್ಪಿ ಕುಸಿದು ಕೆಳಗೆ ಬಿದ್ದು ಮೃತಪಟ್ಟಿರುತ್ತಾಳೆ.

 

 

– ಇತರೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಭಾಸ್ಕರ್ ಬಿನ್ ರಾಜು, ಚಾಮರಾಜಪೇಟೆ ಕಾಲೊನಿ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರಿಗೂ ಹಾಗೂ ಲೂರ್ದನಗರದ ವಾಸಿಗಳಾದ ಸ್ಟ್ಯಾಂಡ್ಲಿ, ವಿಕ್ರಮ್, ವಿನೋದ್, ಶಿವ, ಸ್ಟಾಲಿನ್ ಎಂಬುವರಿಗೆ ಗಲಾಟೆಗಳಾಗಿ ಪ್ರಕರಣ ದಾಖಲಾಗಿದ್ದು, ದಿನಾಂಕ 09.04.2019 ರಂದು ಸಂಜೆ 4.30 ಗಂಟೆಗೆ ಡಿಸಿಲ್ವಾ ಮತ್ತು ಆಂಥೋಣಿ ರವರು ಲೂರ್ದನಗರದಲ್ಲಿರುವ ದೂರುದಾರರ ವೆಲ್ಡಿಂಗ್ ಅಂಗಡಿ ಬಳಿ ಹೋಗಿ  ಕೇಸು ವಾಪಸ್ಸು ತೆಗೆದುಕೊ ಇಲ್ಲದಿದ್ದರೆ ಮುಗಿಸಿಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ.

 

– ಅಸ್ವಾಭಾವಿಕ ಮರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಯಶೋದಮ್ಮ, ವಿನಾಯಕ ಲೇಔಟ್, ಹೊಸಕೋಟೆ ತಾಲ್ಲೂಕು ರವರ ಮಗನಾದ ಶ್ರೀನಿವಾಸ, 27 ವರ್ಷ, ಎಂಬುವರು ಮಾಡಿರುವ ಸಣ್ಣ ಪುಟ್ಟ ಸಾಲವನ್ನು ತೀರಿಸಲಾಗದೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗಯಪ್ಸೆಗೊಂಡು ದಿನಾಂಕ 09-04-2019 ರಂದು ಮದ್ಯಾಹ್ನ ಮರವಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಗುಡ್ಡದ ಬಳಿ ಬೇವಿನ ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

Leave a Reply

Your email address will not be published. Required fields are marked *