ದಿನದ ಅಪರಾಧಗಳ ಪಕ್ಷಿನೋಟ 10ನೇ ಸೆಪ್ಟೆಂಬರ್‍ 2017

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 09.09.2017  ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕೊಲೆ : ಇಲ್ಲ 

ಕೊಲೆ  ಪ್ರಯತ್ನ : ಇಲ್ಲ

ಡಕಾಯತಿ : ಇಲ್ಲ

ಸುಲಿಗೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ (ಸರಗಳ್ಳತನ) ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪ್ರೇಮಾ ಕೋಂ ಶ್ರೀಧರ್‍, ಕೆ.ಎಸ್.ಆರ್‍.ಟಿ.ಸಿ ಡಿಪೋ ಹತ್ತಿರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್  ರವರು ದಿನಾಂಕ 09-09-2017 ರಂದು ರಾತ್ರಿ 08-45 ಗಂಟೆಗೆ  ತನ್ನ ಅತ್ತೆಯೊಂದಿಗೆ ರಾಬರ್ಟ್ ಸನ್ ಪೇಟೆಯ   ಮದ್ದಯ್ಯ ಕಲ್ಯಾಣ ಮಂಟಪದ ಎದುರು ನಡೆದುಕೊಂಡು ಹೋಗುತ್ತಿದ್ದಾಗ, ಹಿಂದುಗಡೆಯಿಂದ ಒಂದು ಟಿವಿಎಸ್ ಮೋಟರ್ ಸೈಕಲ್ ನಲ್ಲಿ ಯಾರೋ ಇಬ್ಬರು ಅಪರಿಚಿತರು ಬಂದು ಮುಂದೆ ಹೋಗದಂತೆ ತಡೆದು, ವಾಹದ ಹಿಂಬದಿ ಕುಳಿತಿದ್ದವನು  ದೂರುದಾರರರ ಕತ್ತಿನಲ್ಲಿದ್ದ 24 ಗ್ರಾಂ ತೂಕದ ಬಂಗಾರದ ಚೈನನ್ನು ಕಿತ್ತುಕೊಂಡಿದ್ದು,  ಅದರ ಒಂದು ಭಾಗ  ಸುಮಾರು 3 ಗ್ರಾಂ ತೂಕದ  ಚೈನ್ ತುಂಡಾಗಿ ಅಲ್ಲಿಯೇ ಬಿದ್ದಿದ್ದು, ಇನ್ನುಳಿದ 21 ಗ್ರಾಂ ತೂಕದ ಸುಮಾರು 50,000/- ರೂ ಬೆಲೆ ಬಾಳುವ ಸರವನ್ನು ಕಸಿದುಕೊಂಡು ಪರಾರಿಯಾಗಿರುತ್ತಾರೆ.

ಕನ್ನ ಕಳುವು : ಇಲ್ಲ

ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶ್ಯಾಮಲ, ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್, ಬಂಗಾರಪೇಟೆ ಪೊಲೀಸ್ ಠಾಣೆ ರವರು ನೀಡಿದ ದೂರಿನಲ್ಲಿ, ದಿನಾಂಕ:09.09.2017 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ದೂರುದಾರರು ನಗರ ಗಸ್ತು ಕರ್ತವ್ಯದಲ್ಲಿ ಪಲವತಿಮ್ಮನಹಳ್ಳಿಯ ರಾಮಚಂದ್ರಪ್ಪ ರವರ ನ್ಯೂ ಹಾರಿಜ್ಹಾನ್ ಸ್ಕೂಲ್ ಪಕ್ಕದಲ್ಲಿರುವ ಜಮೀನಿನಲ್ಲಿ ಹೋಗುತ್ತಿರುವಾಗ, ಸದರಿ ಜಮೀನಿನಲ್ಲಿ  ಯಾರೋ ಕಳ್ಳರು ಸುಮಾರು 15 ದಿನಗಳ ಹಿಂದೆ ಶ್ರೀಗಂಧದ ಮರವನ್ನು ಕಟಾವು ಮಾಡಿ ಅಲ್ಲಿಯೇ ಬಿಟ್ಟಿದ್ದು, ಪಕ್ಕದಲ್ಲಿದ್ದ ಇನ್ನೋಂದು ಮರವನ್ನು ಅರ್ದ ಕಟಾವುಮಾಡಿ ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾರೆ.

ರಸ್ತೆ ಅಪಘಾತಗಳು : ಇಲ್ಲ

ಮೋಸ/ವಂಚನೆ ಪ್ರಕರಣಗಳು : ಇಲ್ಲ

ದೊಂಬಿ : ಇಲ್ಲ

ಜೂಜಾಟ ಕಾಯ್ದೆ : ಇಲ್ಲ

ಅಪಹರಣ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

 ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರದ ಶ್ರೀ. ಮುನಿಸ್ವಾಮಿರೆಡ್ಡಿ ಬಿನ್ ಮುನಿರೆಡ್ಡಿ, ಬೂಡದಿಮಿಟ್ಟ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ-09-09-2017 ರಂದು ಬೆಳಗ್ಗೆ 10.00 ಗಂಟೆಯಲ್ಲಿ ತನ್ನ ಬಾಬತ್ತು ಸರ್ವರೆಡ್ಡಿಹಳ್ಳಿ ಗ್ರಾಮದ ಜಮೀನು ಸರ್ವೆ ನಂಬರ್ 42/06 ರಲ್ಲಿನ 0.30 ಗುಂಟೆ ಜಮೀನಿನಲ್ಲಿ ಬೇಲಿ ಹಾಕಲು ಕಲ್ಲು ಕೂಚಗಳನ್ನು ನಾಟಿ ಮಾಡುತ್ತಿದ್ದಾಗ, ಬೂಡದ ಮಿಟ್ಟೆ ಗ್ರಾಮದ  ಪಾಪಿರೆಡ್ಡಿ ಬಿನ್ ಗಂಟ್ಲರೆಡ್ಡಿ, ಕಾಂತಮ್ಮ ಕೊಂ ಪಾಪಿರೆಡ್ಡಿ, ರಘುರಾಮರೆಡ್ಡಿ ಬಿನ್ ಗಂಟ್ಲರೆಡ್ಡಿ ರವರು ಆಕ್ರಮವಾಗಿ ದೂರುದಾರರ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕೂಚಗಳನ್ನು ಹಾಕದಂತೆ ಅಡ್ಡಿಪಡಿಸಿ,  ಹಸುಗಳನ್ನು ಜಮೀನಿನಲ್ಲಿ ಬಿಟ್ಟು ರಾಗಿ ಬೆಳೆಯನ್ನು ಮೇಯಿಸಿ ನಷ್ಟ ಮಾಡಿದ್ದು, ದೂರುದಾರರು ಕೇಳಿದ್ದಕ್ಕೆ  ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.


ಇತರೆ : ಇಲ್ಲ

ಅಕ್ರಮ ಮದ್ಯ ಮಾರಾಟ : ಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಶೇಖರ್‍ ಬಿನ್ ವೆಂಕಟಪ್ಪ, ಕಾರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ  ಹೆಂಡತಿ ವರಲಕ್ಷ್ಮೀ , 28 ವರ್ಷ ಮತ್ತು  8 ವರ್ಷದ ಮಗಳು ಕುಮಾರಿ ಮೌನಿಷ ಇಬ್ಬರೂ ಕಾರಹಳ್ಳಿ ಸಮೀಪವಿರುವ ಸುಬ್ರಮಣಿ ತೋಟದಲ್ಲಿ ನೌಕೋಲು ಗಡ್ಡೆಗಳನ್ನು ಕಿತ್ತುಕೊಂಡು  ಮೌನಿಷ ಕಾಲನ್ನು ತೊಳೆಯಲು ಕೃಷಿ ಹೊಂಡಾದಲ್ಲಿ ಹೋಗಿದ್ದು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ಆಕೆಯನ್ನು ಕಾಪಾಡಲು ವರಲಕ್ಷ್ಮೀ ರವರು ಹೋದಾಗ ಅವರು ಸಹ ಕಾಲು ಜಾರಿ ಕೃಷಿ ಹೊಂಡಾದಲ್ಲಿ ಬಿದ್ದು ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *