– ರಸ್ತೆ ಅಪಘಾತಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09-12-2019 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಈ ಕೇಸಿನ ದೂರುದಾರರು ಶ್ರೀನಿವಾಸ, ಅಂಬೇಡ್ಕರ್ ನಗರ, ತಾಯಲೂರು, ಮುಳಬಾಗಿಲು ರವರು ತನ್ನ ದ್ವಿ ಚಕ್ರ ವಾಹನ ಹೀರೋ ಗ್ಲಾಮರ್ ಸಂಖ್ಯೆ ಕೆಎ-07-ಇಎ-7984 ರಲ್ಲಿ ಬಂಗಾರಪೇಟೆ ಗಾಂದಿನಗರದಲ್ಲಿರುವ ತನ್ನ ತಂಗಿ ಮನೆಗೆ ಬಂದು ವಾಪಸ್ಸು ತನ್ನ ತಂಗಿ ಮಗ ಪ್ರೇಮನಾಥ್ ರವರನ್ನು ಕರೆದುಕೊಂಡು ಕೋಲಾರದ ಕಡೆ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬಂಗಾರಪೇಟೆ ಕೋಲಾರ ಮುಖ್ಯ ರಸ್ತೆ ಓಂಕಾರ ಕ್ಷೇತ್ರದ ಬಳಿ ಗಾಲ್ಪ್ ಕಡೆ ಹೋಗುವ ರಸ್ತೆ ತಿರುವಿನಲ್ಲಿ ಕೆಎ-51-ಎಂಜೆ-501 ರ ಕಾರಿನ ಚಾಲಕ ಯಾವುದೇ ಸಿಗ್ನಲ್ ತೋರಿಸದೇ ಇಂಡಿಕೇಟರ್ ಹಾಕದೆ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಪ್ರೇಮನಾಥ್ ರವರು ಕೆಳಗೆ ಬಿದ್ದು ಎಡಕಾಲಿನ ತೊಡೆ ಮೂಳೆ ಮುರಿದಿರುತ್ತದೆ ಮತ್ತು ಮೊಣಕಾಲಿನ ಕೆಳಗೆ, ಎಡ ಮುಂಗೈ ಹಿಂದೆ ರಕ್ತ ಗಾಯಗಳಾಗಿರುತ್ತದೆ. ಪಿರ್ಯಾದಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ.
– ಸಾಧಾರಣ ಕಳ್ಳತನ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.11.2019 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಈ ಕೇಸಿನ ದೂರುದಾರರು ರಮೇಶ್, ಅಕ್ಕಚಮ್ಮ ಕಲ್ಯಾಣ ಮಂಟಪದ ಹಿಂದೆ, ಬಂಗಾರಪೇಟೆ, ರವರು ಮನೆಯ ಬಳಿ ಇರುವ ಪಾರ್ಕ್ ಬಳಿ ನೆರಳಿನಲ್ಲಿ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-01, ಹೆಚ್ ಎ-168. ಇಂಜಿನ್ ಸಂ JC44E5701797, CHASIS NO ME4JC448MC7701841 ಅನ್ನು ನಿಲ್ಲಿಸಿ ಮನೆಗೆ ಹೋಗಿ ಊಟ ಮಾಡಿಕೊಂಡು 2-30 ಗಂಟೆಗೆ ಪಾರ್ಕ್ ಬಳಿ ಬಂದು ನೋಡಲಾಗಿ ದ್ವಿಚಕ್ರ ವಾಹನ ಕಾಣಿಸದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂದಾಜು ಬೆಲೆ 30000/- ರೂಗಳಾಗಿರುತ್ತದೆಂದು ದೂರು ನೀಡಿರುತ್ತಾರೆ.