ದಿನದ ಅಪರಾಧಗಳ ಪಕ್ಷಿನೋಟ 10ನೇ ಅಕ್ಟೋಬರ್‌ 2019

– ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಂದೀಶ್‌ ಬಿನ್ ಸತ್ಯನಾರಾಯಣಚಾರಿ, ಸ್ವರ್ಣನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ:-06.10.2019 ರಂದು ರಾತ್ರಿ 8.00 ಗಂಟೆಗೆ ದ್ವಿಚಕ್ರ ವಾಹನ ಹಿರೋ ಸ್ಪೆಂಡರ್ ಪ್ಲಸ್ ಸಂಖ್ಯೆ KA 08 Q 6582 ನ್ನು ಮನೆಯ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿ,  ನಂತರ ರಾತ್ರಿ 8.30 ಗಂಟೆಗೆ ನೋಡಲಾಗಿ, ಸದರಿ 15,೦೦೦/- ರೂ ಬೆಲೆ ಬಾಳುವ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರತ್ತದೆ. ದೂರುದಾರರಾದ ಶ್ರೀ. ಆಂಜನೇಯಮೂರ್ತಿ, ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ಮುನಿವೆಂಕಟಪ್ಪ ಬಿನ್ ಲೇಟ್ ಮುನಿಯಪ್ಪ, 55 ವರ್ಷ ರವರು ದಿನಾಂಕ 09.10.2019 ರಂದು ಮದ್ಯಾಹ್ನ 3.30 ಗಂಟೆಯಿಂದ 4.30 ಗಂಟೆ ಮದ್ಯೆ ಬಂಗಾರಪೇಟೆಯಿಂದ ಬೆಂಗನೂರು ಬಳಿಯಿರುವ ಅವರ ಹೊಲದ ಕಡೆಗೆ ಹೋಗಲು ಟಿವಿಎಸ್ ಎಕ್ಸೆಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಸ್-8902  ನ್ನು ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ದೇಶಿಹಳ್ಳಿ ಕೆರೆ ಸಮೀಪದ ಕಾಲುದಾರಿಯಲ್ಲಿ  ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದಿದ್ದರಿಂದ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ್ ಬಿನ್ ವೆಂಕಟೇಶಪ್ಪ, ಮುದುಗುಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 08.10.2019 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ವೇಲು ರವರ ಮನೆಯ ಬಳಿ ಚಿಂತಗುಮ್ಮನಹಳ್ಳಿ ವಾಸಿಯಾದ ವೆಂಕಟೇಶಪ್ಪ @ ಗಂಟ್ಲಪ್ಪ ರವರ ಮನೆಯವರು ಪಲ್ಲಕ್ಕಿಯ ಬಳಿ ಗಲಾಟೆ ಮಾಡುತ್ತಿದ್ದರಿಂದ ದೂರುದಾರರು ಗಲಾಟೆ ಮಾಡುವುದು ಬೇಡ ಎಂತಾ ಹೇಳಿದ್ದಕ್ಕೆ, ಹರೀಶ್ ಮತ್ತು ಸೋಮಶೇಖರ್‌ ರವರು ಕೈಗಳಿಂದ ಮತ್ತು ಕೋಲಿನಿಂದ  ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

– ಇತರೆ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:09-10-2019 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ದೂರುದಾರರಾದ ಶ್ರೀ. ನಾರಾಯಣಸ್ವಾಮಿ, ಎ.ಎಸ್.ಐ ರವರು ಡಿ.ಸಿ.ಐ.ಬಿ. ವಿಭಾಗದ ಸಿಬ್ಬಂದಿ ರಮೇಶ್‌ ಮತ್ತು ಚಂದ್ರಶೇಖರ್‌ ರವರೊಂದಿಗೆ  ಆಲದಮರದ ಸರ್ಕಲ್ ಬಳಿ ಇದ್ದಾಗ, ಕೆ.ಜಿ.ಎಫ್. ಕಡೆಯಿಂದ ಭಾಸ್ಕರ್‌ ರೆಡ್ಡಿ ರವರು ಅಶೋಕ್ ಲೈಲಾಂಡ್ ಡಸ್ಟ್ ವಾಹನ ಸಂಖ್ಯೆ ಕೆ.ಎ.08-9461 ರಲ್ಲಿ ಅನಧೀಕೃತವಾಗಿ ಪಡಿತರ ಅಕ್ಕಿ ಮೂಟೆಗಳನ್ನು ತುಂಬಿಸಿಕೊಂಡು ಬರುತ್ತಿದ್ದನ್ನು ತಡೆದು ವಿಚಾರಿಸಲಾಗಿ, ಜಯರಾಮರೆಡ್ಡಿ ರವರು ಕಳುಹಿಸಿಕೊಟ್ಟಿದ್ದು, ದಾಸರಹೊಸಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ವಸೀವುಲ್ಲಾ ರೈಸ್ ಮಿಲ್ ಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರಿಂದ ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗುರುಮೂರ್ತಿ ಬಿನ್ ಬಾಲಪ್ಪ, ಇಂದಿರಾ ಆಶ್ರಯ ಬಡಾವಣೆ, ಬಂಗಾರಪೇಟೆ ರವರ ಮಗಳಾದ ಶ್ರೀಮತಿ ಲಾವಣ್ಯ, 22 ವರ್ಷ ಎಂಬಾಕೆಯು ತನ್ನ ಮಗುವನ್ನು ಕರೆದುಕೊಂಡು ದಿನಾಂಕ:08.09.2019 ರಂದು ಬೆಳಗ್ಗೆ 10.30 ಗಂಟೆಗೆ ಕಂಪ್ಯೂಟರ್ ಕ್ಲಾಸ್ ಗೆ  ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *