ದಿನದ ಅಪರಾಧಗಳ ಪಕ್ಷಿನೋಟ 10ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 09.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು :‍ 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಜಪತಿ ಬಿನ್ ಗಣಪತಿ, ಅಂಬೇಡ್ಕರ್‌ ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ. 28-06-2018 ರಂದು ಸಂಜೆ 6-10 ಗಂಟೆಯಲ್ಲಿ  ಬೆಮಲ್ ಮೈನ್ ಗೇಟ್ ಬಳಿ ಇದ್ದಾಗ, ನಾಗೇಶ್ ಬಿನ್ ಗೋವಿಂದರಾಜ್, 59 ವರ್ಷ, ಅಂಬೇಡ್ಕರ್‌ ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ಆಲದಮರದ ಕಡೆಯಿಂದ ಪಲ್ಸರ್ ದ್ವಿಚಕ್ರ ವಾಹನ ಸಂಖ್ಯೆ KA08-U.7576 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಮಲ್ ಕಾರ್ಮಿಕ ಸಂಘದ ಕಛೇರಿ ಮುಂಭಾಗ ರಸ್ತೆಯಲ್ಲಿ ವಾಹನವನ್ನು ನಿಯಂತ್ರಿಸಲಾಗದೆ ಆಯತಪ್ಪಿ ವಾಹನ ಸಮೇತ ಕೆಳಗಡೆ ಬಿದ್ದಾಗ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲು ಪಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09-07-2018 ರಂದು ಬೆಳಗಿನ ಜಾವ 02-15 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಸೀನಪ್ಪ, ಕುಂದರಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮೊಬೈಲ್‌‌ ಕಳೆದು ಹೋಗಿದ್ದು,  ಆರೋಪಿ ಮಂಜುನಾಥ ರವರು ತೆಗೆದುಕೊಂಡು ಹೋಗಿರುತ್ತಾರೆಂದು ದೂರುದಾರರು ಹೇಳಿಕೊಂಡಿರುವುದಾಗಿ ಆರೋಪಿ ಮಂಜುನಾಥ್‌ ಆಗಾಗ ದೂರುದಾರರೊಂದಿಗೆ ಜಗಳ ಮಾಡುತ್ತಿದ್ದು, ದಿನಾಂಕ 08.07.2018 ರಂದು ರಾತ್ರಿ 9.00 ಗಂಟೆಯಲ್ಲಿ ದೂರುದಾರರು ಗ್ರಾಮದ ರಸ್ತೆಯಲ್ಲಿ ನಿಂತಿದ್ದಾಗ, ಮಂಜುನಾಥ, ಶಿವಕುಮಾರ್, ದೇವರಾಜ್ ಮತ್ತು ಸೀನಪ್ಪ ರವರು ಏಕಾಏಕಿ ದೂರುದಾರರ ಬಳಿ ಹೋಗಿ ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಗಾಯಗಳನ್ನುಂಟು ಮಾಡಿ,  ಪ್ರಾಣಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *