ದಿನದ ಅಪರಾಧಗಳ ಪಕ್ಷಿನೋಟ 10ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 09.09.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 10.09.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರತ್ನಮ್ಮ ಕೊಂ ರಾಮಯ್ಯ, ಕುಪ್ಪಸ್ವಾಮಿ ಮೊದಲಿಯಾರ್‌ ಲೇಔಟ್, ಬಂಗಾರಪೇಟೆ ರವರ ಮಗಳಾದ ಸಾಯಿಸಿಂಧು,  27 ವರ್ಷ ಎಂಬುವರು ಸರವಣನ್ ಬಿನ್ ಸ್ವಾಮಿನಾಥನ್ ಎಂಬುವರನ್ನು ಪ್ರೀತಿಸಿ, ಮದುವೆ ಮಾಡಿಕೊಂಡಿದ್ದು, ದಿನಾಂಕ 09.09.2020 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಸಾಯಿಸಿಂಧು ರವರು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಆಕೆಯ ಮಗಳಾದ ಕಿರಣ್ಯಶ್ರೀ ರವರನ್ನು ಕರೆದುಕೊಂಡು ಹೋಗಿದ್ದು, ಆದರೆ ದೂರುದಾರರ ಅಳಿಯ ಸರವಣನ್ ರವರು ಮಗುವನ್ನು ಕರೆದುಕೊಂಡು ಹೋಗುವುದು ಬೇಡ, ಚಳಿಯಿದೆ ಎಂದು ಹೇಳಿ ಮನೆಗೆ ಕರದುಕೊಂಡು ಬಂದಿದ್ದು, ಇದರಿಂದ ಸಾಯಿಸಿಂಧು ರವರು ಕೋಪಗೊಂಡು ದಿನಾಂಕ 09.09.2020 ರಂದು ರಾತ್ರಿ ಬಂಗಾರಪೇಟೆಯ ಕಾರೋನೇಶನ್ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಆಕೆಯ ಮಗಳಾದ ಕಿರಣ್ಯಶ್ರೀ, 3 1/2 ವರ್ಷ ರವರನ್ನು ವೇಲ್ ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿ, ಸಾಯಿಸಿಂಧು ರವರೂ ಸಹ ಮನೆಯ ಮೇಲ್ಛಾವಣಿಯ ಕಂಬಿಗೆ ಹಗ್ಗದಿಂದ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 

– ಸಾಧಾರಣ ಕಳ್ಳತನ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.09-09-2020 ರಂದು  ರಾತ್ರಿ 8-00 ಗಂಟೆಗೆ  ಬೆಮಲ್ ನಗರ ಪೊಲೀಸ್ ಠಾಣಾ ಸರಹದ್ದು ಟೋಲ್ ಗೇಟ್ ಸರ್ಕಲ್ ನ ಕಬಾಬ್ ಅಂಗಡಿ ಬಳಿ ಸತೀಶ್, ಟಿ.ಸಿ ಪಾಳ್ಯ, ಬೆಂಗಳೂರು ಮತ್ತು ವಿನೋದ್ ಕುಮಾರ್‌, ದಾಸರಹೊಸಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ಎರಡು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ನಿಂತಿದ್ದವರು ಶ್ರೀ. ಸುನಿಲ್ ಕುಮಾರ್ , ಸಿ.ಪಿ.ಸಿ. 59, ಬೆಮಲ್ ನಗರ ಪೊಲೀಸ್ ಠಾಣೆ ಮತ್ತು ಶ್ರೀ. ಸಿದ್ದು ಸುಂಟ್ಯಾನ, ಸಿ.ಪಿ.ಸಿ. 14 ಉರಿಗಾಂ ಪೊಲೀಸ್ ಠಾಣೆ ರವರನ್ನು ಕಂಡು ಅನುಮಾನಾಸ್ಪದವಾಗಿ ನಡೆದುಕೊಂಡಿದ್ದರಿಂದ, ಅವರನ್ನು  ವಿಚಾರಿಸುತ್ತಿದ್ದಾಗ, ಬಜಾಜ್ ಸಿ.ಟಿ. 100 ಮತ್ತು ಹೋಂಡ ಡಿಯೋ 4ಜಿ ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದ್ದು, ಅವರನ್ನು ಹಿಡಿದುಕೊಂಡು ವಿಚಾರಿಸಲಾಗಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *