ದಿನದ ಅಪರಾಧಗಳ ಪಕ್ಷಿನೋಟ 10ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  09.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ :  02

ಉರಿಗಾಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ಸೆಲ್ವಂ, ಅಶೋಕ್‌ನಗರ, ಸಿ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:06.08.2020 ರಂದು ರಾಬರ್ಟ್ ಸನ್ ಪೇಟೆ ಗಾಂದಿ ಸರ್ಕಲ್ ಸಮೀಪವಿರುವ ಅಶೋಕನಗರ ಆಟೋ ಸ್ಟಾಂಡ್ ಬಳಿ ಆಟೋಗಳನ್ನು ಸರದಿಯಲ್ಲಿ ನಿಲ್ಲಿಸುವ ವಿಚಾರದಲ್ಲಿ ಆಟೋ ಚಾಲಕರಾದ ಪ್ರಭು ಮತ್ತು ಸರವಣ ರವರೊಂದಿಗೆ ಜಗಳ ಮಾಡಿಕೊಂಡಿದ್ದು, ದಿನಾಂಕ:09.08.2020 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ದೂರುಯದಾರರು ಕೆನಡೀಸ್ 4 ನೇ ಲೈನ್ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ,  ಪ್ರಭು ಮತ್ತು ಸರವಣ ರವರು ಕತ್ತಿ ಮತ್ತು ಕೈಗಳಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ದೂರುದಾರರಾದ ಶ್ರೀ. ಕಿರಣ್‌ ಬಿನ್ ಸರವಣ, ನಾರ್ಥ್‌ ಟ್ಯಾಂಕ್‌ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:09.08.2020 ರಂದು ರಾತ್ರಿ 8.30 ಗಂಟೆಯಲ್ಲಿ ಶ್ರೀಮತಿ ವೇಣಿ ರವರ ಮನೆಯ ಮುಂಭಾಗದಲ್ಲಿ ಇರುವಾಗ, ಅಭಿ ಆತನ ಸ್ನೇಹಿತ ಅಭಿಷೇಕ್ ಎಂಬುವರು ದೂರುದಾರರ ಬಳಿ ಬಂದು, ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು  ಅಭಿಲಾಷ್ ಗೆ ಸಫೋರ್ಟ್ ಆಗಿ ಅವರ ಮನೆಯ ಬಳಿಗೆ ಬಂದಿದ್ದೀಯಾ ಎಂದು ಬೈದು, ಚಾಕುವಿನಿಂದ ಹೊಡೆದು ರಕ್ತಗಾಯ ಮಾಡಿರುತ್ತಾರೆ.

Leave a Reply

Your email address will not be published. Required fields are marked *