ದಿನದ ಅಪರಾಧಗಳ ಪಕ್ಷಿನೋಟ 10ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:09.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ವಿನೋದ್ ಕುಮಾರ್‌ ಬಿನ್ ಮುನಿಸ್ವಾಮಿ, ಸೌತ್‌ ಗಿಲ್ಬರ್ಟ್ಸ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ  ಮಾವ ಕೆ. ಸುಬ್ರಮಣಿ ರವರು ದಿನಾಂಕ: 08-03-2020 ರಂದು  ಸಂಜೆ 6-15 ಗಂಟೆಯಲ್ಲಿ ಕೆಜಿಎಫ್- ಬಂಗಾರಪೇಟೆ ಮುಖ್ಯ ರಸ್ತೆಯ ಬದಿಯಲ್ಲಿ ನ್ಯೂ ಮಾಡೆಲ್ ಹೌಸ್ ಕಡೆಗೆ ತಿರುಗಿಸುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ವಿಜಯ್ ಕುಮಾರ್  ಅಪ್ಪಾಚಿ ದ್ವಿಚಕ್ರ ವಾಹನ ಸಂಖ್ಯೆ KA- 08 W-1211 ರ  ಹಿಂಬದಿಯಲ್ಲಿ ರಾಜ @ ರಾಜನ್ ಎಂಬುವನನ್ನು ಕುಳ್ಳಿರಿಸಿಕೊಂಡು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಸುಬ್ರಮಣಿ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸುಬ್ರಮಣಿ ಮತ್ತು ಅಪ್ಪಾಚಿ ದ್ವಿಚಕ್ರ ವಾಹನದ ಸವಾರರಿಬ್ಬರೂ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದಾಗ ಸುಬ್ರಮಣಿ, ವಿಜಯ್ ಕುಮಾರ್ ಮತ್ತು ರಾಜ @ ರಾಜನ್ ರವರಿಗೆ ಗಾಯಗಳಾಗಿರುತ್ತದೆ.

– ಇತರೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 09.03.2020 ರಂದು ಬೆಳಿಗ್ಗೆ 10.45 ಗಂಟೆಯಲ್ಲಿ ಕಾರಹಳ್ಳಿ ಕೆರೆಯ ಸಮೀಪ ಚಿಲ್ಲರೆ ಅಂಗಡಿಯ ಹಿಂಭಾಗದಲ್ಲಿ ಮುನಿವೆಂಟಪ್ಪ ಬಿನ್ ಚಿನ್ನವೀರಪ್ಪ ರವರು ಯಾವುದೇ ಅನುಮತಿ/ಪರವಾನಿಗಿ ಇಲ್ಲದೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈತನನ್ನು ಮತ್ತು  ಸ್ಥಳದಲ್ಲಿದ್ದ, 1) Bangalore Whisky 90 ml ನ 06 ಖಾಲಿ ಪಾಕೇಟ್ ಗಳು, 02 ಪ್ಲಾಸ್ಟಿಕ್ ಲೋಟಗಳು, 02 ಖಾಲಿ ವಾಟರ್ ಪ್ಯಾಕೆಟ್ ಗಳನ್ನು ಪಿ.ಎಸ್.ಐ ಶ್ರೀ. ಜಗದೀಶ್‌ ರೆಡ್ಡಿ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ 09.03.2020 ರಂದು ಬೆಳಿಗ್ಗೆ 10.00  ಗಂಟೆಯಲ್ಲಿ  ಕಾರಹಳ್ಳಿ ಬಡಾವಣೆಯ ಸಮೀಪ ಚಿಲ್ಲರೆ ಅಂಗಡಿಯ ಹಿಂಭಾಗದಲ್ಲಿ ವೆಂಕಟರಾಮಪ್ಪ ಬಿನ್ ಚಿನ್ನಸ್ವಾಮಿ ರವರು ಯಾವುದೇ ಅನುಮತಿ/ಪರವಾನಿಗಿ ಇಲ್ಲದೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈತನನ್ನು ಮತ್ತು  ಸ್ಥಳದಲ್ಲಿದ್ದ, 1) Haywards Cheers Whisky 90 ml ನ 06 ಖಾಲಿ ಪಾಕೇಟ್ ಗಳು, 02 ಪ್ಲಾಸ್ಟಿಕ್ ಲೋಟಗಳು, 02 ಖಾಲಿ ವಾಟರ್ ಪ್ಯಾಕೆಟ್ ಗಳನ್ನು ಪಿ.ಎಸ್.ಐ ಶ್ರೀ. ಜಗದೀಶ್‌ ರೆಡ್ಡಿ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

– ಹಲ್ಲೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಶಿಧರನ್‌ ಬಿನ್ ಪೂಸ್ವಾಮಿ, ಜೂಬ್ಲಿ ಹಾಲ್‌, ಆಂಡ್ರಸನ್‌ಪೇಟೆ, ಕೆ.ಜ.ಎಫ್ ರವರು ತಮ್ಮ ಅಶ್ವಿನ್ ರವರೊಂದಿಗೆ ದಿನಾಂಕ.09.03.2020 ರಂದು ಬೆಳಿಗ್ಗೆ 11.30 ಗಂಟೆಗೆ ನ್ಯಾಯಾಲಯದಿಂದ ನ್ಯಾಯಾಲಯದ ಮುಂದೆ ಪ್ಯಾಸೇಜ್ ನಲ್ಲಿ ನಡೆದುಕೊಂಡು ಹೊರಗಡೆ ಬರುತ್ತಿದ್ದಾಗ, ಆಂಡ್ರಸನ್ ಪೇಟೆ ವಾಸಿ ದಾಸ್ ಚಿನ್ನಸವಾರಿ ರವರ ಮಕ್ಕಳಾದ ಅಲ್ಬರ್ಟ್ ಮರ್ಕನಸ್, ಜಾನ್ಪಾಲ್ ಮತ್ತು  ಮೊಸೆಸ್ ರವರು ದೂರುದಾರರಿಗೆ ಅಡ್ಡ ಬಂದು ಅಶ್ವಿನ್ ರವರಿಗೆ ಅಲ್ಬರ್ಟ್ ರವರು ಕಾಲಿನಿಂದ ಒದ್ದು ಕೆಳಗೆ ಬಿಳಿಸಿದ್ದು, ದೂರುದಾರರು ಕೇಳಿದಕ್ಕೆ ಮೂರು ಜನರು ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *