ದಿನದ ಅಪರಾಧಗಳ ಪಕ್ಷಿನೋಟ 10ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:09.02.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ  ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೂರ್ಯ ಪ್ರಕಾಶ್‌ ಬಿನ್ ಜಾರ್ಜ್‌, ಮಸ್ಕಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 08.02.2020 ರಂದು  ರಾತ್ರಿ 10.30  ಗಂಟೆಯಲ್ಲಿ ಮಸ್ಕಂ ಎ. ಬ್ಲಾಕ್ ನಲ್ಲಿರುವ ಸರವಣ  ಎಂಬುವವರ ಅಂಗಡಿಗೆ  ಹೋಗುತ್ತಿದ್ದಾಗ,  ಅಲ್ಲಿ ನಿಂತಿದ್ದ ಬಾಬು, ಸಂಜಯ್‌ ಮತ್ತು ಪ್ರಸನ್ನ ರವರುಗಳು ಕೆಟ್ಟ ಮಾತುಗಳಿಂದ  ಬೈದು ಯಾವುದೋ ಒಂದು ಚೂಪಾದ ಆಯುಧದಿಂದ ಕೈಗಳಿಂದ  ಹೊಡೆದು  ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *