ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿದಿನಾಂಕ 08.06.2020 ರಂದು ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.
– ವ್ಯಕ್ತಿಕಾಣೆಯಾಗಿರುವಪ್ರಕರಣಗಳು: 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಿರಾವ್ ಬಿನ್ ನಾರಾಯಣರಾವ್, ೨ನೇ ಬ್ಲಾಕ್, ಬೇತಮಂಗಲ ರವರ ಹೆಂಡತಿ ರೆಡ್ಡೆಮ್ಮ, 36 ವರ್ಷ ರವರು ಮನೆಯಲ್ಲಿ ದೂರುದಾರರೊಂದಿಗೆ ಸಂಸಾರದ ವಿಚಾರದಲ್ಲಿ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದು, ದಿನಾಂಕ-07-06-2020 ರಂದು ಬೆಳಿಗ್ಗೆ-10-00 ಗಂಟೆಯಲ್ಲಿ ದೂರುದಾರರು ವ್ಯಾಪಾರಕ್ಕೆಂದು ಹೋಗಿ ಮದ್ಯಾಹ್ನ 1-00 ಗಂಟೆಗೆ ಮನೆಗೆ ಬಂದಾಗ ದೂರುದಾರರ ಹೆಂಡತಿ ರೆಡ್ಡೆಮ್ಮ 36 ವರ್ಷ, ಮಗಳು ಹೇಮಾವತಿ 16 ವರ್ಷ ಮತ್ತು ತೇಜು 14 ವರ್ಷ ರವರು ಮನೆಯಿಂದ ಕಾಣೆಯಾಗಿರುತ್ತಾರೆ.