ದಿನದ ಅಪರಾಧಗಳ ಪಕ್ಷಿನೋಟ 09 ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:08.07.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ಕನ್ನ ಕಳುವು :  01

      ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀಮತಿ.ಸೀತಾಲಕ್ಷ್ಮೀ ಕೋಂ. ಲೇಟ್.ರಾಮಚಂದ್ರರೆಡ್ಡಿ, ದಿನ್ನಕೊತ್ತೂರು ಗ್ರಾಮ, ಬಂಗಾರಪೇಟೆ ರವರು ತನ್ನ ಹಾಗೂ ತನ್ನ ಮಗಳ ಒಡವೆಗಳು ಸದರಿ ಮನೆಯಲ್ಲಿದ್ದ ಕಬ್ಬಿಣ ಪೆಟ್ಟಿಗೆಯಲ್ಲಿಟ್ಟಿದ್ದು, ದಿನಾಂಕ: 05/06/2019 ರಂದು ರಾತ್ರಿ ದೂರುದಾರರು ಮನೆಯ ಹಾಲ್ ನಲ್ಲಿ ಮಲಗಿದ್ದು, ಬೆಳಿಗ್ಗೆ ಎಂದಿನಂತೆ ಎದ್ದು ಕಬ್ಬಿಣದ ಪೆಟ್ಟಿಗೆಯನ್ನು ತೆರೆದಾಗ ರೂ. 11,000/- ರೂ ನಗದು ಹಣ ಮತ್ತ ಸುಮಾರು 10,00,000/- ರೂ ಬೆಲೆ ಬಾಳುವ ಚಿನ್ನಾಭರಣಗಳು ಕಳುವಾಗಿರುತ್ತೆಂದು ದೂರು ನೀಡಿರುತ್ತಾರೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಮಾಡಿರುವವರನ್ನು ಹಿಡಿದು ಪ್ರಕರಣ ದಾಖಲಿಸಿರುತ್ತಾರೆ.  ಮುಖ್ಯಪೇದೆಗಳಾದ ಬಿ.ಎಸ್.ವೇಣುಗೋಪಾಲ್ ಮತ್ತು ಬಿ.ವಿ.ವೆಂಕಟೇಶಪ್ಪ ರವರು ದಿನಾಂಕ: 08/07/2019 ರಂದು ಬೆಳಿಗ್ಗೆ 11.30 ಗಂಟೆಗೆ ಬಂಗಾರಪೇಟೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಕಡೆ ಗಸ್ತು ಮಾಡುತ್ತಿದ್ದಾಗ, 1) ಸುರೇಂದ್ರ ಬಿನ್ ಲೇಟ್ ನಾರಾಯಣಪ್ಪ, 4ನೇ ಕ್ರಾಸ್, ವಿಜಯನಗರ, ಬಂಗಾರಪೇಟೆ ಮತ್ತು ಕಲ್ಯಾಣ್ ಕುಮಾರ್ ಬಿನ್ ಬಾಬು, ಕಾರಹಳ್ಳಿ, ಬಂಗಾರಪೇಟೆ ರವರು ಪಲ್ಸರ್ 220 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು, ಗಸ್ತಿನಲ್ಲಿ ಪೊಲೀಸರನ್ನು ಕಂಡು ದ್ವಿಚಕ್ರ ವಾಹನದ ಸಮೇತ ಓಡಿ ಹೋಗಲು ಪ್ರಯತ್ನಿಸಿದ್ದು, ಆಗ ಅನುಮಾನದಿಂದ ಅವರನ್ನು ಸುತ್ತುವರೆದು ಹಿಡಿದು ವಿಚಾರಿಸಲಾಗಿ, ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ. 

–ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಅಶ್ವಿನಿ ಕೊಂ ಮಂಜುನಾಥ, ದೇಶಿಹಳ್ಳಿ, ಬಂಗಾರಪೇಟೆ ರವರು ದಿನಾಂಕ 31/05/2019 ರಂದು ಮಂಜುನಾಥ ರವರೊಂದಿಗೆ ಮದುವೆಯಾಗಿದ್ದು, ಆಗಾಗ ಸಂಸಾರದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಗಂಡ ಮಂಜುನಾಥ, ಗಂಡನ ಅಕ್ಕ ರಾಧ, ಅತ್ತೆ ಸರಸ್ವತಮ್ಮ  ಮತ್ತು ಮಾವ ಕೆಂಪಣ್ಣ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು,  2 ವರ್ಷಗಳ ಹಿಂದೆ ಮಂಜುನಾಥ  ದೂರುದಾರರೊಂದಿಗೆ ಜಗಳ ಮಾಡಿ, “ನಿಮ್ಮ ತವರು ಮನೆಯಲ್ಲಿ ಇರು ಬೇರೆ ಮನೆ ಮಾಡಿ ಕರೆದುಕಂಡು ಹೋಗುತ್ತೇನೆ” ಎಂದು ಹೇಳಿ ತವರು ಮನೆಯಲ್ಲಿ ಬಿಟ್ಟು ಹೋಗಿ ಆಗಾಗ ಮನೆಗೆ ಬಂದು ಹೋಗುತ್ತಿದ್ದು, ದಿನಾಂಕ 03/07/2019 ರಂದು ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ದೂರುದಾರರನ್ನು ಗಂಡನ ಮನೆಯಲ್ಲಿ ಬಿಟ್ಟು ಹೋಗಿದ್ದು, ದಿನಾಂಕ 07/07/2019 ರಂದು ರಾತ್ರಿ 8-30 ಗಂಟೆಯಲ್ಲಿ ದೂರುದಾರರ ಗಂಡನ ಮನೆಯವರು ಜಗಳ ಮಾಡಿ, ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು, ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 –ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಕೆಂಪಣ್ಣ, ದೇಶಿಹಳ್ಳಿ, ಬಂಗಾರಪೇಟೆ ರವರು 6 ವರ್ಷಗಳ ಹಿಂದೆ ಅಶ್ವಿನಿ ರವರನ್ನು ಮದುವೆಯಾಗಿದ್ದು, 3 ತಿಂಗಳ ನಂತರ ಅಶ್ವಿನಿ ಅವರ ತವರು ಮನೆಯಲ್ಲಿ ವಾಸವಾಗಿದ್ದು, ದಿನಾಂಕ 03-07-2019 ರಂದು ಹಿರಿಯರು ಸೇರಿ ಅಶ್ವಿನಿಯನ್ನು ದೂರುದಾರರ ಮನೆಯಲ್ಲಿ ಬಿಟ್ಟು ಹೋಗಿದ್ದು, ಅಶ್ವಿನಿರವರು ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಒತ್ತಾಯ ಮಾಡಿ ಗಲಾಟೆ ಮಾಡುತ್ತಿದ್ದು, ದಿನಾಂಕ 07.07.2019 ರಂದು ರಾತ್ರಿ 8-30 ಗಂಟೆಯಲ್ಲಿ ಅಶ್ವಿನಿರವರು ದೂರುದಾರರೊಂದಿಗೆ ಆಸ್ತಿ ತನಗೆ ಮಾಡಿಕೊಡು ಎಂದು ಗಲಾಟೆ ಮಾಡಿ ಕೈಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾಳೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಿಶೋರ್‌ ರೆಡ್ಡಿ, ಸರ್ವರೆಡ್ಡಿಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ ಕೋದಂಡರೆಡ್ಡಿ, 55 ವರ್ಷ ರವರು ಸುಮಾರು 7 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತಿದ್ದು, ಚಿಕಿತ್ಸೆ ಕೊಡಿಸಿದರೂ ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ದಿನಾಂಕ 07-07-2019 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ಕೊದಂಡರೆಡ್ಡಿ  ರವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಹೊಟ್ಟೆ ನೋವು ಜಾಸ್ತಿ ಆಗಿ  ತೋಟಕ್ಕೆ  ಹೊಡೆಯಲು ತಂದು ಇಟ್ಟಿದ್ದ  ಔಷದಿಯನ್ನು  ಕುಡಿದಿದ್ದು, ಚಿಕಿತ್ಸೆಗೆ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ  ದಾಖಲು ಮಾಡಿದ್ದು, ದಿನಾಂಕ-08-07-2019 ರಂದು ರಾತ್ರಿ 12.29 ಗಂಟೆಗೆ  ಚಿಕಿತ್ಸೆ ಫಲಕಾರಿಯಾಗದೇ ಕೋದಂಡರೆಡ್ಡಿ ರವರು ಮೃತ ಪಟ್ಟಿರುತ್ತಾರೆ. 

Leave a Reply

Your email address will not be published. Required fields are marked *