ದಿನದ ಅಪರಾಧಗಳ ಪಕ್ಷಿನೋಟ 09 ನೇ ಏಪ್ರಿಲ್‌ 2019

 – ಜೂಜಾಟ ಕಾಯ್ದೆ : 01

  ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಪ್ರರಕಣ ದಾಖಲಾಗಿರುತ್ತದೆ,  ದೂರದಾರರಾದ ಶ್ರೀ. ಪಿಎಸ್‌‌ಐ, ಕಾಮಸಮುದ್ರಂ ರವರಿಗೆ ಬಂದ ವರ್ತಮಾನದ ಮೇರೆಗೆ ದಿನಾಂಕ 07.04.2019 ರಂದು ಸಂಜೆ 4.00 ಗಂಟೆಯಲ್ಲಿ ‘ಕಾಮಸಮುದ್ರಂ ಪೊಲೀಸ್ ಠಾಣಾ ಸರಹದ್ದಿನ ಚಿಂತಗುಮ್ಮನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯಾರೋ ಜನರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿಪಂದ್ಯದ ಜೂಜಾಟವನ್ನು ಆಡುತ್ತಿರುತ್ತಾರೆಂದು’ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯರೊಂದಿಗೆ ಚಿಂತಗುಮ್ಮನಹಳ್ಳಿ ಗ್ರಾಮದ ಅರಣ್ಯ ಪ್ರದೇಶದ ಬಳಿ ಹೋಗಿ ನೋಡಿದಾಗ ಅರಣ್ಯ ಪ್ರದೇಶ  4 ಕೋಳಿ ಹುಂಜಗಳನ್ನು ಬಳಸಿಕೊಂಡು ಕೋಳಿ ಗೆಲ್ಲುತ್ತೆ 500 ರೂ ಎಂತಲೂ ಮತ್ತೊಬ್ಬ ಈ ಕೋಳಿ ಸೋಲುತ್ತೆ 1000 ರೂ ಎಂದು ಕೂಗುತ್ತಾ ಪಂದ್ಯವನ್ನು ಆಡುತ್ತಿದ್ದ ಆರೋಪಿಗಳಾದ ವೆಂಕಟೇಶಪ್ಪ, ಸುಬ್ರಮಣಿ, ಚಲಪತಿ, ಬಸವರಾಜ್‌ ಮತ್ತು ಜಯಪ್ಪ ಎಂಬುವರನ್ನು ಹಿಡಿದುಕೊಂಡು ವಿಚಾರಿಸಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು ಅವರ ಬಳಿ ಇದ್ದ 1750/- ರೂಗಳನ್ನು ಪಂಚರ ಸಮಕ್ಷಮ ಕಾನೂನು ಕ್ರಮ ಜರುಗಿಸಿರುತ್ತಾರೆ.

 

 – ಹಲ್ಲೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08.04.2019 ರಂದು ದೂರುದಾರರಾದ ಶ್ರೀ. ಮಂಜುನಾಥ ಬಿನ್‌ ಮುನಿಸ್ವಾಮಿ, ದೊಡ್ಡಕಾರಿ ಗ್ರಾಮ ರವರು ನೀಡಿದ ದೂರಿನಲ್ಲಿ.  ದಿನಾಂಕ-05-04-2019 ರಂದು ರಾತ್ರಿ 10 30 ಗಂಟೆಯಲ್ಲಿ ದೊಡ್ಡಕಾರಿ ಗ್ರಾಮದ ನಾಗಚಾರಿ ಜಮೀನಿನಲ್ಲಿ ಆರೋಪಿ  ಮುನಿವೆಂಕಟೇಗೌಡ ರವರು ಜೆಸಿಬಿ ಮೂಲಕ ದೂರುದಾರರು ಅಳವಡಿಸಿರುವ ನೀರಿನ ಪೈಪನ್ನು ಕಿತ್ತು ನಾಶ ಪಡಿಸಿರುತ್ತಾರೆ. ದೂರುದಾರರು ಕೇಳಿದ್ದಕ್ಕೆ ಆರೋಪಿ ಕಲ್ಲಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.

 

– ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಶ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08.04.2019 ರಂದು ದೂರುದಾರರಾದ ಶ್ರೀ ಅಮರೇಶ್‌ ಬಿನ್‌ ಸೊಣ್ಣಪ್ಪ  ಕೆಸರನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ 07.04.2019 ರಂದು ದೂರುದಾರರು ಅವರ ಗ್ರಾಮದಲ್ಲಿದ್ದಾಗ ಅವರಿಗೆ ತಿಳಿದ ವಿಚಾರದಲ್ಲಿ ಗ್ರಾಮ ಪಕ್ಕದ ನೀಲಗಿರಿ ತೋಪಿನಲ್ಲಿ ಯಾರೋ ಒಂದು ಗಂಡಸಿನ ಮೃತದೇಹವು ಮಲಗಿಕೊಂಡ ಸ್ಥಿತಿಯಲ್ಲಿ ಇರುವುದಾಗಿ ತಿಳಿರುತ್ತಾರೆ. ದೂರುದಾರರು ಸ್ಥಳಕ್ಕೆ ಹೋಗಿ ನೋಡಿದಾಗ ನೀಲಗಿರಿ ತೋಪಿನಲ್ಲಿ  ಸುಮಾರು 50 ರಿಂದ 55 ವರ್ಷ ವಯಸ್ಸುಳ್ಳ ಒಬ್ಬ ಅನಾಮಧೇಯ ಗಂಡಸಿನ ಮೃತದೇಹವು ಮಲಗಿಕೊಂಡಿರುವ ಸ್ಥಿತಿಯಲ್ಲಿ ಮೃತಟ್ಟಿರುವುದು ಕಂಡು ಬಂದಿದ್ದು, ಎತ್ತರ ಸುಮಾರು 5.7 ಅಡಿಗಳು, ತೆಳ್ಳನೆಯ ಬಿಳಿ ಮತ್ತು ಕಪ್ಪು ಮಿಶ್ರಿತ ಕೂದಲುಳ್ಳ ಗಡ್ಡ, ತಲೆಯ ಮೇಲೆ ಬಿಳಿ ಮತ್ತು ಕಪ್ಪು ಮಿಶ್ರಿತ ಕೂದಲು, ಬಾಯಿ ಅರೆವಾಸಿ ತೆರೆದಿರುತ್ತೆ, ಬಿಳಿಯ ಬಣ್ಣದ ತುಂಬು ತೋಳಿನ ಷರ್ಟು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಮೃತನು ಯಾವುದೋ ಖಾಯಿಲೆಯಿಂದ ಬಳಲಿ ಅಥವಾ ಬೇರಾವುದೋ ಕಾರಣದಿಂದಲೋ, ಆಶ್ರಯವಿಲ್ಲದೇ  ಮೃತಪಟ್ಟಿರುತ್ತಾರೆ. ಮೃತನ ವಿಳಾಸ ತಿಳಿದು ಬಂದಿರುವುದಿಲ್ಲ. ಸದರಿ ಮೃತದೇಹವನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆ ಶೀತಲ ಶವಾಗಾರದಲ್ಲಿ ಇಡಲಾಗಿದೆ. ಮೃತನ ಬಗ್ಗೆ ವಿಷಯ ತಿಳಿದು ಬಂದಲ್ಲಿ ಪಿಎಸ್‌‌ಐ ಬಂಗಾರಪೇಟೆ ರವರನ್ನು ಸಂರ್ಪಕಿಸುವುದು

Leave a Reply

Your email address will not be published. Required fields are marked *