ದಿನದ ಅಪರಾಧಗಳ ಪಕ್ಷಿನೋಟ 09 ನೇ ಡಿಸೆಂಬರ್‌ 2017

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 08.12.2017 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

  ಕೊಲೆ : ಇಲ್ಲ

ಕೊಲೆ  ಪ್ರಯತ್ನ : ಇಲ್ಲ

ಡಕಾಯತಿ : ಇಲ್ಲ

ಸುಲಿಗೆ : ಇಲ್ಲ

ಕನ್ನ ಕಳುವು : ಇಲ್ಲ

ಸಾಧಾರಣ ಕಳ್ಳತನ : ಇಲ್ಲ

– ರಸ್ತೆ ಅಪಘಾತಗಳು :‍ 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08-12-2017 ರಂದು  ದೂರುದಾರರಾದ ಶ್ರೀ. ವಿಶ್ವನಾಥ್‌ ಬಿನ್‌ ಗೌರೀಶಯ್ಯ  ಕುಪ್ಪಸ್ವಾಮಿ ಲೇ ಔಟ್‌ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:08.12.2017 ರಂದು ಮದ್ಯಾಹ್ನ ಸುಮಾರು 1-30 ಗಂಟೆಗೆ ನಾಯಕರಹಳ್ಳಿ ಬಂಗಾರಪೇಟೆ ಮುಖ್ಯೆ ರಸ್ತೆಯ ಸ್ವಾಮಿ ವಿವೇಕಾನಂದ ಶಾಲೆಯ ಮುಂಭಾಗ ದೂರುದಾರರು  ದ್ವಿಚಕ್ರ ವಾಹನ ಸಂಖ್ಯೆ KA 08- R-8958 ನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಬಂಗಾರಪೇಟೆ ಕಡೆಯಿಂದ ನಾಯಕರಹಳ್ಳಿ ಕಡೆಗೆ ಹೋಗಲು NEW STAR CITY ರ ದ್ವಿಚಕ್ರ ವಾಹನ  ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿನಾಮ ರಕ್ತ ಗಾಯಗಳಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

ಅಪಹರಣ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

– ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

 ಹಲ್ಲೆ :   01

ಕಾಮಸಮುದ್ರಂ ಪೊಲೀಸ್‌ ಠಾನೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ ದಿನಾಂಕ:08.12.2017 ರಂದು ದೂರುದಾರರಾದ ಶ್ರೀ. ಈಶ್ವರ್‌ ಬಿನ್‌ ವೆಂಕಟೇಶಪ್ಪ ಬೋಡಗುರ್ಕಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ 03.12.2017 ರಂದು ರಾತ್ರಿ ಸುಮಾರು 7.30 ಗಂಟೆಯಲ್ಲಿ ದೂರುದಾರರು ಮನೆಯ ಮುಂದೆ ನಿಂತ್ತಿರುವಾಗ ಆರೋಪಿ ಚಿನ್ನಪ್ಪ ಎಂಬುವರು ವಿನಃಕಾರಣ ಜಗಳ ಕಾದು ಕೆಟ್ಟಮಾತುಗಳಿಂದ  ಬೈದು ಒಂದು ದೊಣ್ಣೆಯಿಂದ ತಲೆಗೆ  ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಅಕ್ರಮ ಮದ್ಯ ಮಾರಾಟ : ಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

ಅಸ್ವಾಭಾವಿಕ ಮರಣ : ಇಲ್ಲ

Leave a Reply

Your email address will not be published. Required fields are marked *