ದಿನದ ಅಪರಾಧಗಳ ಪಕ್ಷಿನೋಟ 09 ನೇ ಜನವರಿ 2021

 

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 08.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 – ಸಾಧಾರಣ ಕಳ್ಳತನ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ನವೀನ್, ಮುಗಲಬೆಲೆ ಗ್ರಾಮ ಬಂಗಾರಪೇಟೆ ರವರು ತನ್ನ ಹಿರೋ ಸ್ಲ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನ ಸಂಖ್ಯೆ ಕೆಎ08-ಡ್ಲ್ಯೂ-3514 ರನ್ನು ದಿನಾಂಕ: 05.01.2021 ರಂದು ಮಧ್ಯಾಹ್ನ 2.15 ಗಂಟೆಗೆ ತೋಟದ ಬಳಿ ನಿಲ್ಲಿಸಿ ತೋಟದಲ್ಲಿ ಕೆಲಸ ಮಾಡಿಕೊಂಡು ಮಧ್ಯಾಹ್ನ 3.00 ಗಂಟೆಗೆ ಬಂದು ನೋಡಲಾಗಿ ಸದರಿ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ, ದ್ವಿಚಕ್ರ ವಾಹನದ ಅಂದಾಜು ಬೆಲೆ ಸುಮಾರು 39.000/- ರೂ ಬೆಲೆ ಬಾಳುವುದಾಗಿರುತ್ತದೆ.

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಈ ಕೇಸಿನ ಪಿರ್ಯಾದಿ ರವಿ, ಪಾರಾಂಡಹಳ್ಳಿ ವಾಸಿ ರವರು ದಿನಾಂಕ:-16.10.2020 ರಂದು ಸಂಜೆ 4:30 ಗಂಟೆಗೆ 83356/- ಬೆಲೆ ಬಾಳುವ ಕಬ್ಬಿಣದ ಸಾಮಾನುಗಳನ್ನು ಕೆ.ಜಿ.ಎಫ್ ಬೆಮೆಲ್  ಕಾರ್ಖಾನೆಯಲ್ಲಿ  ತನ್ನ  ಕ್ಯಾಂಟರ್ ಸಂಖ್ಯೆ ಎ.ಪಿ-02 ವೈ-3668 ರಲ್ಲಿ ತುಂಬಿಸಿಕೊಂಡು ಪಾರಾಂಡಹಳ್ಳಿಯಲ್ಲಿರುವ  ತನ್ನ ಮನೆಯ ಬಳಿ ನಿಲ್ಲಿಸಿದ್ದು  ನಂತರ ಮಾರನೇ ದಿನ  ದಿನಾಂಕ:- 17.10.2020 ರಂದು ಬೆಳಿಗ್ಗೆ 4:30 ಗಂಟೆಗೆ  ಪಿರ್ಯಾದಿ  ಬೆಂಗಳೂರಿಗೆ  ಹೋಗಲು  ತನ್ನ  ಕ್ಯಾಂಟರ್ ಬಳಿ ಹೋದಾಗ ಕಬ್ಬಿಣದ ಸಾಮಾನುಗಳಿಗೆ ಕಟ್ಟಿದ್ದ ಟಾರ್ಪಲ್ ಸ್ಟಲ್ಪ ತೆರೆದಿದ್ದು ಸರಿಯಾಗಿ ಕಬ್ಬಿಣದ ಸಾಮಾನುಗಳನ್ನು ನೋಡಿಕೊಳ್ಳದೆ ಬೆಂಗಳೂರಿನ ಪೀಣ್ಯದಲ್ಲಿರುವ ಎಸ್.ಕೆ ಇಂಜಿನಿಯರಿಂಗ್ ಪ್ರೈವೇಟ್ ಕಂಪನಿಗೆ ಪಿರ್ಯಾದಿಯ ಕ್ಯಾಂಟರ್ ನಲ್ಲಿ  ಕಬ್ಬಿಣದ ಸಮಾನುಗಳನ್ನು ಸಾಗಿಸಿಕೊಂಡು  ಹೋಗಿ ಸದರಿ ಕಂಪನಿಯ ಬಳಿ ಸದರಿ ಸಾಮಾನುಗಳನ್ನು ಇಳಿಸಿ ನೋಡಲಾಗಿ 47 ಪೀಸುಗಳ ಪೈಕಿ ಐರನ್ ರೇರ್ ಕವರ್  09 ಪೀಸುಗಳು ಇರುವುದಿಲ್ಲ. ಯಾರೋ ಕಳ್ಳರು  ಪಿರ್ಯಾದಿಯ ಟೆಂಪೋನಲ್ಲಿದ್ದ  13527/- ರೂಪಾಯಿ ಬೆಲೆ  ಬಾಳುವ ಐರನ್ ರೇರ್ ಕವರ್  09 ಪೀಸುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು.

ರಸ್ತೆ ಅಪಘಾತಗಳು : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.07-01-2021 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಶ್ರೀಧರನ್, ಸುಮತಿನಗರ, ಕೆ.ಜಿ.ಎಫ್ ರವರ ಮಗನಾದ ಎಸ್. ಸಂತೋಷ್ ಕುಮಾರ್, 26 ವರ್ಷ ರವರು ತನ್ನ ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು  ಚಲಾಯಿಸಿಕೊಂಡು ಆಲದಮರ ಕಡೆಯಿಂದ ಕೆ.ಜಿ.ಎಫ್.-ಬಂಗಾರಪೇಟೆ ರಸ್ತೆಗೆ ಹೋಗಲು ಡಿವೈಡರ್ ಸಮೀಪ ಹೋಗುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್. ಕಡೆಗೆ ಹೋಗಲು KSRTC  ಬಸ್ ನಂ KA07-F.1652 ರ ಚಾಲಕ ಜಯಶಂಕರ್ ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂತೋಷ್ ಕುಮಾರ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಸಂತೋಷ್ ಕುಮಾರ್, ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ಆತನ ತಲೆಯ ಹಿಂಭಾಗ, ಬಲಕಣ್ಣಿನ ಬಳಿ, ಬಲಗಾಲಿನ ಬಳಿ ತೀವ್ರ ಸ್ವರೂಪದ ರಕ್ತ ಗಾಯಗಳಾಗಿ ಮೂಗಿನಲ್ಲಿ ರಕ್ತ ಬಂದಿದ್ದರಿಂದ, ಆತನನ್ನು, ಚಿಕಿತ್ಸೆಗೆ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆ ವೈಧ್ಯರು ರಾತ್ರಿ 10-05 ಗಂಟೆಯಲ್ಲಿ ಸಂತೋಷ್ ಕುಮಾರ್ ರವರನ್ನು ಪರೀಕ್ಷಿಸಿ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *