ದಿನದ ಅಪರಾಧಗಳ ಪಕ್ಷಿನೋಟ 09ನೇ ಡಿಸೆಂಬರ್‌ 2019

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08-12-2019 ರಂದು ರಾತ್ರಿ ಸುಮಾರು 7-30 ಗಂಟೆಯಲ್ಲಿ ಗಂಗಮ್ಮನಪಾಳ್ಯದಲ್ಲಿರುವ ಮಾರಿಯಮ್ಮ ದೇವಾಯಲಯದ ಬಳಿ ಪ್ರತಿ ವರ್ಷದಂತೆ ಮುಂಬರುವ 2020 ನೇ ಸಾಲಿನಲ್ಲಿ ಸಂಕ್ರಾಂತಿ ಹಬ್ಬದ ಸಲುವಾಗಿ ಹಬ್ಬದ ಆಚರಣೆಯ ಬಗ್ಗೆ ಮಾತನಾಡುತ್ತಿರುವಾಗ, ಈ ವರ್ಷ ಸಂಕ್ರಾಂತಿ ಹಬ್ಬ ಸರಿಯಾದ ರೀತಿಯಲ್ಲಿ ನಡೆಸಿಲ್ಲವೆಂತ ಕೇರಿಯ ಜನರು ಮಾತನಾಡಿಕೊಂಡಿರುತ್ತಾರೆ. ಮುಂಬರುವ ಹಬ್ಬವನ್ನು ಚೆನ್ನಾಗಿ ಆಚರಿಸೋಣ ಎಂದು ಈ ಕೇಸಿನ ದೂರುದಾರರು ಸಂತೋಷ್ ಬಿನ್ ಆರುಣಾಚಲಂ, ಗಂಗಂಪಾಳ್ಯ ಬಂಗಾರಪೇಟೆ ವಾಸಿ ರವರು ಹೇಳಿದಾಗ ಆರೋಪಿಗಳಾದ ಪ್ರಶಾಂತ್, ಡ್ಯಾನಿಯಲ್, ಮುರಳಿ ಮತ್ತು ಕಿರುಬ ರವರು ಏಕಾಏಕಿ ಜಗಳ ಮಾಡಿ ದೂರುದಾರರಿಗೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.  ಜಗಳವನ್ನು ಬಿಡಿಸಲು ಬಂದ ದೂರುದಾರರ ಅಣ್ಣನಾದ ದಿನೇಶ ರವರನ್ನು ಸಹ ಹೊಡೆದಿರುತ್ತಾರೆ.

– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರು ಈ ಕೇಸಿನ ಭವ್ಯ ಬಿನ್ ಬಸವರಾಜ್, ೨೬ ವರ್ಷ, ಬೋಡೇನಹಳ್ಳಿ ಕಾಮಸಮುದ್ರ ರವರು  ದಿನಾಂಕ 02.03.2019 ರಂದು ಸುರೇಶ, ಸಮೇತನಹಳ್ಳಿ, ಹೊಸಕೋಟೆ ವಾಸಿರವರೊಂದಿಗೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ದೂರುದಾರರಿಗೆ ಬಂಗಾರದ ಒಡುವೆಗಳು ಮತ್ತು ಆರೋಪಿ ಸುರೇಶ ರವರಿಗೆ 24 ಗ್ರಾಂ ಬಂಗಾರದ ಕತ್ತಿನ ಚೈನ್ ಡಾಲರ್ ನೊಂದಿಗೆ , 25 ಗ್ರಾಂ ಬಂಗಾರದ ಬ್ರಾಸ್ ಲೈಟ್, 08 ಗ್ರಾಂ, ಬಂಗಾರದ ಉಂಗುರ, 01 ಕೈ ಗಡಿಯಾರ, ಬಟ್ಟೆಗಳಿಗೆ 60 ಸಾವಿರ ರೂಗಳು ಮತ್ತು ಮದುವೆ ಖರ್ಚು 4.83.000/- ಖರ್ಚು ಮಾಡಿ ಮದುವೆಯನ್ನು ದೂರುದಾರರ ಕಡೆಯವರು ಮಾಡಿದ್ದು, ನಂತರ ದೂರುದಾರರ ಅತ್ತೆ ರತ್ನಮ್ಮ ಮತ್ತು ನಾದನಿ ಪದ್ಮ  ರವರು ದೂರುದಾರರನ್ನು ಕುರಿತು ತನ್ನ ಗಂಡ ಬೇರೆ ಕಡೆ ಮದುವೆಯಾಗಿದ್ದರೆ 50 ಲಕ್ಷ ರೂಗಳು ವರದಕ್ಷಿಣೆ ಕೊಡುತ್ತಿದ್ದರು, ನೀನು ಏನೂ ತಂದಿಲ್ಲ ಮದುವೆ ಮುಂಚೆ 2 ಲಕ್ಷ ರೂ ಕೇಳಿದ್ದಿವಿ ಅದನ್ನು ಸಹ ಕೊಟ್ಟಿರುವುದಿಲ್ಲ, ಈಗಾಲಾದರೂ ಆ ಹಣವನ್ನು ತೆಗೆದುಕೊಂಡು ಬಾ, ಎಂದು ಪೀಡಿಸುತ್ತಿದ್ದು,  ಬಂಗಾರಪೇಟೆಯಲ್ಲಿರುವ ಒಂದು ಖಾಲಿ ನಿವೇಶವನ್ನು ತನ್ನ ಹೆಸರಿಗೆ ಕ್ರಯ ಮಾಡಿಕೊಂಡು ಬಾ, ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಮಾನಸಿಕವಾಗಿ ಕೆಟ್ಟಮಾತುಗಳಿಂದ ಬೈದಿದ್ದು, ದೂರುದಾರರು 02 ತಿಂಗಳ ಗರ್ಭಿಣಿಯಾಗಿದ್ದಾಗ ತನ್ನ ಗಂಡ ಸುರೇಶ ರವರು ಗರ್ಭಸ್ರಾವ ಮಾತ್ರೆಗಳು ನೀಡಿದ್ದು ಇದ್ದರಿಂದ ಹೆಚ್ಚುಕಡಿಮೆಯಾಗಿ ದೂರುದಾರರನ್ನು ಆಸ್ಪತ್ರೆಗೆ ದಾಖಲು ಮಾಡಿಸಿ ಸ್ವಲ್ಪ ಸುಧಾರಣೆಗೊಂಡ ನಂತರ ದೂರುದಾರರನ್ನು ದಿನಾಂಕ 29.05.2019 ರಂದು ರಾತ್ರಿ 10.30 ಗಂಟೆಗೆ ತವರು ಮನೆಗೆ ಕರೆದುಕೊಂಡು ಬಂದು ನೀನು ಬಂಗಾರಪೇಟೆಯಲ್ಲಿರುವ ಖಾಲಿ ನಿವೇಶನ ಹಾಗೂ ಮನೆಯನ್ನು ಕ್ರಯ ಮಾಡಿಸಿಕೊಂಡರೆ ಬಾ ಇಲ್ಲದಿದ್ದರೆ ನೀನು ಇಲ್ಲಿಯೇ ಸಾಯಿ ಎಂದು ಕೆಟ್ಟಮಾತುಗಳಿಂದ ಬೈದು, ದೂರುದಾರರನ್ನು ಬಿಟ್ಟು ಹೊರಟು ಹೋಗಿದ್ದು ಅಂದಿನಿಂದ ಆಗಾಗ್ಗ ತನ್ನ ತಾಯಿಯ ಮೊಬೈಲ್ ಗೆ ಕರೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕುತ್ತಿರುತ್ತಾರೆ.

Leave a Reply

Your email address will not be published. Required fields are marked *