ದಿನದ ಅಪರಾಧಗಳ ಪಕ್ಷಿನೋಟ 09ನೇ ಅಕ್ಟೋಬರ್‌ 2019

– ಕೊಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನವೀನ್‌ ಕುಮಾರ್‌ ಬಿನ್ ಶಂಕರನಾರಾಯಣಮೂರ್ತಿ, ಆರಿಮಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ಶಂಕರನಾರಾಯಣಮೂರ್ತಿ, 53 ವರ್ಷ ರವರು ದಿನಾಂಕ 08.10.2019 ರಂದು ಮಧ್ಯಾಹ್ನ 12.30 ಗಂಟೆಯಲ್ಲಿ  ದ್ವಿ ಚಕ್ರ ವಾಹನದಲ್ಲಿ ಕಾಮಸಮುದ್ರಂ ಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಸಂಜೆ 4.00 ಗಂಟೆಯಲ್ಲಿ ಪುರ ಗ್ರಾಮದ ಬಳಿ ಯಾರೋ ದುಷ್ಕರ್ಮಿಗಳು ಶಂಕರನಾರಾಯಣಮೂರ್ತಿ ರವರ ಕುತ್ತಿಗೆ ಮೇಲೆ ಹೊಡೆದು ಕೊಲೆ ಮಾಡಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನೀಶ್‌ ಬಾಬು ಬಿನ್ ಗುಂಡಪ್ಪ, ಐತಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ಬಂಗಾರಪೇಟೆ ಕುಪ್ಪಸ್ವಾಮಿ ಮೊದಲಿಯಾರ್ ಲೇಔಟ್ ನಲ್ಲಿರುವ ದೂರುದಾರರ ಮನೆಯಲ್ಲಿ ಸುಮಾರು ಎರಡೂವರೆ ವರ್ಷಗಳಿಂದ ಬಾಡಿಗೆಗೆ ವಾಸವಾಗಿರುವ ಶ್ರೀಮತಿ ಸತ್ಯಲಕ್ಷ್ಮಿ ಕೋಂ ಲೇಟ್ ರಾಧಾಕೃಷ್ಣಶೆಟ್ಟಿ, 70 ವರ್ಷ ರವರನ್ನು ಯಾರೋ ದುಷ್ಕರ್ಮಿಗಳು, ದಿನಾಂಕ 08.10.2019 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆ ಮದ್ಯೆ ಯಾವುದೋ ಕಾರಣಕ್ಕೆ, ಹರಿತವಾದ ಆಯುಧದಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿರುತ್ತಾರೆ.

Leave a Reply

Your email address will not be published. Required fields are marked *