ದಿನದ ಅಪರಾಧಗಳ ಪಕ್ಷಿನೋಟ 09ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 08.11.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 – ಜೂಜಾಟ ಕಾಯ್ದೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ವರದಾಪುರ ಗ್ರಾಮದ ಕೆರೆಯ ಪೊದೆಗಳಲ್ಲಿ ದಿನಾಂಕ 07.11.2018 ರಂದು ಮದ್ಯಾಹ್ನ 3.30 ಗಂಟೆಗೆ ವರದಾಪುರ ಗ್ರಾಮದ ವಾಸಿಗಳಾದ  1. ಸುರೇಶ್, 2. ಕೃಷ್ಣಪ್ಪ 3.ಗಣೇಶ, 4.ಸೋಮಶೇಖರ್, 5. ಶಶಿ, 6. ಸುಬ್ಬು, 7. ಸುಧಾಕರ್, 8. ಮುರಳಿ, 9. ಚಿನ್ನಪ್ಪ, 10. ಹರೀಶ್, 11. ಗಿರೀಶ್ ಬಾಬು ರವರು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿದ್ದವರನ್ನು ಪಿ.ಎಸ್.ಐ, ಶ್ರೀ. ರವಿಕುಮಾರ್‌ ಮತ್ತು ಸಿಬ್ಬಂದಿಯವರು ದಾಳಿಮಾಡಿ 52 ಇಸ್ಪೀಟ್ ಎಲೆಗಳು ಮತ್ತು ನಗದು 2,420/- ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಅಸ್ವಾಭಾವಿಕ ಮರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ  ಶ್ರೀ ಮುರಳಿ.ಸಿ, ಸಿಪಿಸಿ-166, ಬಂಗಾರಪೇಟೆ ಪೊಲೀಸ್ ಠಾಣೆ ರವರು ದಿನಾಂಕ 08.11.2018 ರಂದು  ಸಂಜೆ 4.00 ಗಂಟೆಯಲ್ಲಿ  ಬಂಗಾರಪೇಟೆ ರೈಲ್ವೆ ಕ್ವಾಟ್ರಸ್ ಕಡೆಯಿಂದ ಗಸ್ತು ಮಾಡಿಕೊಂಡು ಮುನಿಯಮ್ಮ ಲೇಔಟ್ ಕಡೆಗೆ ಹೋಗುತ್ತಿದ್ದಾಗ, ಸಂಗಮ ಕಲ್ಯಾಣಮಂಟಪದ ಮುಂಭಾಗದಲ್ಲಿ ಸುಮಾರು 35 ರಿಂದ 40 ವರ್ಷ ವಯಸ್ಸುಳ್ಳ ಒಬ್ಬ ಅನಾಮಧೇಯ ಗಂಡಸು ಮದ್ಯಪಾನ ಸೇವನೆ ಮಾಡಿಕೊಂಡು, ಸುಸ್ತಾಗಿ ಆಹಾರವಿಲ್ಲದೇಯೋ ಅಥವಾ ಖಾಯಿಲೆಯಿಂದಲೋ ಅಥವಾ ಹೃದಯಾಘಾತದಿಂದಲೋ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *