ದಿನದ ಅಪರಾಧಗಳ ಪಕ್ಷಿನೋಟ 09ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 08.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು :‍ 02

ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ದಿನಾಂಕ: 06-07-2018 ರಂದು 21.30 ಗಂಟೆ ಸುಮಾರಿನಲ್ಲಿ ರಾಬರ್ಟ್ ಸನ್ ಪೇಟೆ, ಸುಮತಿ ಜೈನ್‌ ಸ್ಕೂಲ್‌ ಮುಂಭಾಗದ ರಸ್ತೆಯಲ್ಲಿ ನಡೆದಿರುತ್ತದೆ. ದಿನಾಂಕ:06.07.2018 ರಂದು ರಾತ್ರಿ ದೂರುದಾರ ಹಾಗೂ ಗಾಯಾಳು ವಿನೋದ್ ಕುಮಾರ್‍, ವಾಸ: 634/1, ಕೈಗಾರಿಕಾ ಪ್ರದೇಶ ಸಮೀಪ, ಚಾಮರಾಜಪೇಟೆ, ಕೆ.ಜಿ.ಎಫ್. ಇವರು ತನ್ನ ಇಬ್ಬರು ಮಕ್ಕಳಾದ ಸಂಜೀವ (9) ಮತ್ತು ಲೋವೀಶ್ (5) ಮತ್ತು ಹೆಂಡತಿ ನಾಗಲಕ್ಷ್ಮಿ ರವರನ್ನು ತನ್ನ ಹೀರೋ ಹೋಂಡಾ ದ್ವಿ ಚಕ್ರ ವಾಹನ ಸಂಖ್ಯೆ:ಕೆ.ಎ.08-ಎಲ್ 1379 ರಲ್ಲಿ ಕೂರಿಸಿಕೊಂಡು ರಾತ್ರಿ 9.30 ಗಂಟೆಯಲ್ಲಿ ಬಿ.ಎಂ. ರಸ್ತೆಯ ಸುಮತಿ ಜೈನ್ ಶಾಲೆಯ ಮುಂಭಾಗದ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ, ಎದುರಿಗೆ ಆಂಡ್ರಸನ್ ಪೇಟೆ ಕಡೆಯಿಂದ TATA INDICA ಕಾರನ್ನು ಅದರ ಚಾಲಕ (ಹೆಸರು ವಿಳಾಸ ತಿಳಿಯಬೇಕಿದೆ) ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರದಾರರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದ್ವಿ ಚಕ್ರ ವಾಹನದಲ್ಲಿದ್ದ 4 ಜನ ವಾಹನ ಸಮೇತ ಕೆಳಗೆ ಬಿದ್ದಿದ್ದು, ಆ ಪ್ರಯುಕ್ತ ಆ ನಾಲ್ಕೂ ಜನರಿಗೂ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ. ಕಾರಿನ ಚಾಲಕ ಅಪಘಾತಪಡಿಸಿ ಕಾರಿನ ಸಮೇತ ಪರಾರಿಯಾಗಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರವೀಣ್ ಬಿನ್ ರಾಜಶೇಖರನ್, ಸ್ವರ್ಣನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ದ್ವಿಚಕ್ರ ವಾಹನ ಯಮಹಾ R15, ನಂ ಕೆಎ04-ಹೆಚ್.ಎಂ1626 ನ್ನು ದಿನಾಂಕ 07.07.2018 ರಂದು ರಾತ್ರಿ 7.30 ಗಂಟೆಯಲ್ಲಿ  ಮಿಥುನ್, ವಿಧ್ಯರಣ್ಯಪುರ, ಬೆಂಗಳೂರು ಎಂಬುವನು ಆತನ ಸ್ನೇಹಿತ ಗಣರಾಜ್, ಮಲ್ಲೇಶ್ವರಂ, ಬೆಂಗಳೂರು  ರವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಚಾಂಪಿಯನ್ ರೀಪ್ಸ್ ಕಡೆಯಿಂದ ಪೈವ್ ಲೈಟ್ಸ್ ಸರ್ಕಲ್ ಕಡೆಗೆ ಹೋಗಲು ಬುಲ್ಲೇನ್ಸ್ ಶಾಫ್ಟ್ ಬಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರಸ್ತೆ ಉಬ್ಬನ್ನು ದಾಟುವಾಗ ಆರೋಪಿ ಮಿಥುನ್ ವಾಹನವನ್ನು ನಿಯಂತ್ರಿಸಲಾಗದೇ ವಾಹನ ಸಮೇತ ಕೆಳಗೆ ಬಿದ್ದು ವಾಹನದಲ್ಲಿದ್ದ ಇಬ್ಬರೂ ಗಾಯಗೊಂಡಿರುತ್ತಾರೆ.

Leave a Reply

Your email address will not be published. Required fields are marked *