ದಿನದ ಅಪರಾಧಗಳ ಪಕ್ಷಿನೋಟ 09ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 08.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಪಿರ್ಯಾದಿ ಮಹೇಶ್, ಅನಂತಪುರಂ, ಬೇತಮಂಗಲ ರವರ ತಂದೆ ಗುರಪ್ಪ, 50 ವರ್ಷ ಮತ್ತು ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮದ ಮುನಿರಾಜು ರವರು ದಿನಾಂಕ-27-02-2021 ರಂದು  ಸಂಜೆ 7.30 ಗಂಟೆಯಲ್ಲಿ 3ನೇ ಮೈಲ್ ಬಳಿ ರಸ್ತೆ ಪಕ್ಕ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಯಾವುದೋ ಒಂದು ದ್ವಿಚಕ್ರ ವಾಹನ ಸವಾರ ಕೆ.ಜಿ.ಎಪ್ ರಸ್ತೆ ಕಡೆಯಿಂದ ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಗುರಪ್ಪ ಮತ್ತು ಮುನಿರಾಜು ರವರಿಗೆ ಹಿಂದೆಯಿಂದ ಡಿಕ್ಕಿ ಹೊಡೆದ ಪ್ರಯುಕ್ತ, ಇಬ್ಬರಿಗೂ  ರಕ್ತಗಾಯಗಳಾಗಿರುತ್ತದೆ. ಗುರಪ್ಪ ಮತ್ತು ಮುನಿರಾಜು ರವರನ್ನು ಚಿಕಿತ್ಸೆಗೆ ಕೆ.ಜಿ.ಎಪ್ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು,  ಗುರಪ್ಪ ರವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ07.03.2021 ರಂದು ರಾತ್ರಿ 10.33 ಗಂಟೆಯಲ್ಲಿ ಗುರಪ್ಪ ರವರು ಮೃತಪಟ್ಟಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ವೆಂಕಟೇಶ್ ಬಿನ್ ಯಲ್ಲಪ್ಪ, ಕದರಿನತ್ತ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಮಗನಾದ ರಾಜವೇಲು, 32 ವರ್ಷ ರವರು ದಿನಾಂಕ 08.03.2021 ರಂದು ಬೆಳಿಗ್ಗೆ 8.20 ಗಂಟೆಯಲ್ಲಿ KA-03-MG-8211  ಓಮಿನಿ   ವಾಹನದಲ್ಲಿ ಆತನ ಹೆಂಡತಿ ಅರ್ಚನಾ, 27 ವರ್ಷ, ರಾಜವೇಲು ರವರ ಮಗ ಹಾರ್ತಿಕ್, 3 ವರ್ಷ ರವರನ್ನು ಕುಳ್ಳರಿಸಿಕೊಂಡು  ಕಾಳಮ್ಮಗುಡಿ-ಕಳವಂಚಿ ವೃತ್ತದ ರಸ್ತೆಯಲ್ಲಿ ದಾಸಪ್ಪ ರವರ ಜಮೀನಿನ ಬಳಿ ಬರುತ್ತಿದ್ದಾಗ, ಎದುರುಗಡೆಯಿಂದ KA-07-F-1432 KSRTC BUS ಚಾಲಕ ಎಕ್ಬಾಲ್ ಷರೀಪ್ ರವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು KA-03-MG-8211 ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಸದರಿ ಓಮಿನಿ ವಾಹನ ಜಕಂಗೊಂಡು ಸದರಿ ವಾಹನದಲ್ಲಿದ್ದ ರಾಜವೇಲು, ಅರ್ಚನಾ, ಹಾರ್ತಿಕ್ ರವರಿಗೆ ಗಾಯಗಳಾಗಿರುತ್ತದೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ದೇವಿಕಾ, ರಾಜೇಶ್‌ ಕ್ಯಾಂಪ್‌, ಮಾರಿಕುಪ್ಪಂ, ಕೆ.ಜಿ.ಎಫ್ ರವರಿಗೆ  ಮೂರ್ಛೆ ರೋಗ ಇದ್ದುದರಿಂದ ಗಂಡ ಸತ್ಯ, 35 ವರ್ಷ ರವರು ಸಂಸಾರದಲ್ಲಿ ಮನಸ್ಥಾಪಗಳು ಉಂಟು ಮಾಡಿಕೊಂಡು ದೂರುದಾರರನ್ನು ತವರು ಮನೆಗೆ ಕಳುಹಿಸಿ, ಸರಿಯಾಗಿ ಕೆಲಸಕ್ಕೆ ಹೋಗದೆ ಮದ್ಯಪಾನ ಸವನೆ ಮಾಡಿಕೊಂಡಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07.03.2021 ರಂದು ರಾತ್ರಿ 9.30 ರಿಂದ 10.00 ಗಂಟೆಯ ಮದ್ಯೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *