ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 08.11.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 09.11.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕನ್ನ ಕಳುವು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಮಹೇಂದ್ರ ರೆಡ್ಡಿ, ಅಮರವತಿ ಲೇಔಟ್, ಬಂಗಾರಪೇಟೆ ರವರು ದಿನಾಂಕ 07.11.2020 ರಂದು ಸಂಜೆ 5.30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಅವರ ಸ್ವಂತ ಗ್ರಾಮವಾದ ನಡಂಪಲ್ಲಿಗೆ ಹೋಗಿ ದಿನಾಂಕ 08.11.2020 ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಿದಾಗ, ಮನೆಯ ಗೇಟ್ನ ಬೀಗವನ್ನು ಯಾರೋ ಕಳ್ಳರು ಹೊಡೆದು, ಮನೆಯ ಒಂದನೇ ಮಹಡಿಯಲ್ಲಿರುವ ಮನೆಯ ಬಾಗಿಲನ್ನು ಮೀಟಿ ಮನೆಯೊಳಗೆ ಹೋಗಿ, ಗಾಡ್ರೇಜ್ ಬೀರು & ಕಬೋರ್ಡ್ ನ್ನು ತೆಗೆದು, ಅದರಲ್ಲಿದ್ದ ಚಿನ್ನದ ವಡುವೆಗಳಾದ 1) 32 ಗ್ರಾಂ ತೂಕವುಳ್ಳ ಒಂದು ಕತ್ತಿನ ಚೈನು, 2) 18 ಗ್ರಾಂ ತೂಕವುಳ್ಳ ಒಂದು ಪೆಂಡೆಟ್ ಚೈನು, 3) 16 ಗ್ರಾಂ ತೂಕವುಳ್ಳ ಒಂದು ಸಿಂಗಲ್ ಬಳೆ, 4) 12 ಗ್ರಾಂ ತೂಕವುಳ್ಳ ಒಂದು ಬ್ರಾಸ್ಲೈಟ್, 5) 45 ಗ್ರಾಂ ತೂಕವುಳ್ಳ ಒಂದು ಎರಡೆಳೆ ಚೈನು, 6) 32 ಗ್ರಾಂ ತೂಕವುಳ್ಳ ಹನ್ನೆರಡು ಉಂಗುರಗಳು, 7) 45 ಗ್ರಾಂ ತೂಕವುಳ್ಳ ಹತ್ತು ಕಿವಿ ಓಲೆಗಳು, 8) 40 ಗ್ರಾಂ ತೂಕವುಳ್ಳ ಐದು ಜೊತೆ ದೊಡ್ಡ ಓಲೆ, ಒಟ್ಟು 240 ಗ್ರಾಂ, ಬೆಲೆ 4,20,000-00 ರೂಗಳು, ಬೆಳ್ಳಿಯ ವಡವೆಗಳಾದ 1) 270 ಗ್ರಾಂ ತೂಕವುಳ್ಳ ಒಂದು ದೇವರ ಲಕ್ಷ್ಮಿ ಮುಖವಾಡ, 2) 542 ಗ್ರಾಂ ತೂಕವುಳ್ಳ ಒಂದು ತಟ್ಟೆ, 3) 525 ಗ್ರಾಂ ತೂಕವುಳ್ಳ ಒಂದು ದೀಪಂ, 4) 137 ಗ್ರಾಂ ತೂಕವುಳ್ಳ ಎರಡು ಬೆಳ್ಳಿ ಬಟ್ಟಲುಗಳು, 5) 450 ಗ್ರಾಂ ತೂಕವುಳ್ಳ ಎರಡು ಜೊತೆ ದೀಪಗಳು, 6) 280 ಗ್ರಾಂ ತೂಕವುಳ್ಳ ಒಂದು ಕಾಮಾಕ್ಷಿದೀಪ, 7) 300 ಗ್ರಾಂ ತೂಕವುಳ್ಳ ಎರಡು ಜೊತೆ ಕುಂಕುಮದೀಪ, 8) 500 ಗ್ರಾಂ ತೂಕವುಳ್ಳ ಒಂದು ಚಂಬು ಒಟ್ಟು 3 ಕೆ.ಜಿ, ಬೆಲೆ 63,000-00 ರೂಗಳು ಹಾಗೂ ನಗದು ಹಣ 15,000-00 ರೂಗಳನ್ನು, ಒಟ್ಟು 4,98,000-00 ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ದಿನಾಂಕ 07.11.2020 ರ ಸಂಜೆಯಿಂದ 08.11.2020 ರ ಬೆಳಿಗ್ಗೆ 11.30 ಗಂಟೆ ಮಧ್ಯೆ ಪಿರ್ಯಾದಿಯ ಮನೆಯ ಬೀಗವನ್ನು ಹೊಡೆದು ಮನೆಯಲ್ಲಿದ್ದ ಬೆಳ್ಳಿ, ಬಂಗಾರದ ವಡುವೆಗಳನ್ನು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.
– ರಸ್ತೆ ಅಪಘಾತಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 28.10.2020 ರಂದು ಸಂಜೆ ಸುಮಾರು 5.45 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರಾದ ಜಯಂತ್ ಕುಮಾರ್, ಗಾಂಧಿನಗರ, ಬಂಗಾರಪೇಟೆ ರವರ ದೊಡ್ಡಪ್ಪ ರವರಾದ ಸಿ.ಜಿ.ಗೋವಿಂದರಾಜುಲು ಬಿನ್ ಲೇಟ್ ಮುನೇಗೌಡು, ವಯಸ್ಸು 72 ವರ್ಷ ರವರು, ಬಂಗಾರಪೇಟೆಯ ಗಾಂಧಿನಗರದಲ್ಲಿರುವ ಪಿರ್ಯಾದಿದಾರರ ಮನೆಗೆ ಬರಲು ಕೋಲಾರ ಮುಖ್ಯರಸ್ತೆಯಲ್ಲಿರುವ ಗಣೇಶ ದೇವಸ್ಥಾನ ಹತ್ತಿರ ಮುಖ್ಯ ರಸ್ತೆಯಲ್ಲಿ ಗಾಂಧಿನಗರದ ಕಡೆ ನಡೆದುಕೊಂಡು ಬರುತ್ತಿದ್ದಾಗ, ಹಿಂಬದಿಯಿಂದ ದ್ವಿಚಕ್ರ ವಾಹನ ಬುಲೆಟ್ ಸಂಖ್ಯೆ ಕೆಎ-01-ಹೆಚ್.ಎಫ್-2206 ನ್ನು ಅದರ ಸವಾರ ಹರೀಶ್, ಅಜ್ಜಪ್ಪನಹಳ್ಳಿ ಬಂಗಾರಪೇಟೆ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋವಿಂದರಾಜುಲು.ಸಿ.ಜಿ ರವರಿಗೆ ಹಿಂದಿನಿಂದ ಡಿಕ್ಕಿಪಡಿಸಿ ಸ್ಥಳದಿಂದ ಪರಾರಿಯಾಗಿದ್ದರಿಂದ ಗೋವಿಂದರಾಜುಲು ರವರಿಗೆ ತಲೆಗೆ ತೀವ್ರತರದ ಹಾಗೂ ಬಲಕಾಲಿಗೆ ರಕ್ತಗಾಯ & ಬಲಗಾಲು ಮುರಿದಿರುತ್ತದೆಂದು ದೂರು ನೀಡಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಧಾರತಿ, ನ್ಯೂ ಎಲ್ಕ್ಟ್ರಿಕೆಲ್ ಲೈನ್, ಉರಿಗಾಂ ರವರ ಮಗಳಾದ ಬೇಬಿ ಸೋನಿಯಾ, ೩೫ ವರ್ಷ, ರವರಿಗೆ ಎರಡು ಗಂಡು ಮಕ್ಕಳಿದ್ದು, 1. ಅಭಿಷೇಕ್ ಬರ್ನಾರ್ಡ್, 2. ನಿಖಿಲ್ ರೆನಾಲ್ಡೋ ಆಗಿದ್ದು, ಮೊದಲನೇ ಮಗ ಬುದ್ದಿ ಮಾಂದ್ಯನಾಗಿದ್ದು, ಎರಡನೇ ಮಗನಿಗೆ ಹೃದಯ ಸಂಬಂಧಿ ಕಾಯಿಲೇ ಇದ್ದುದ್ದರಿಂದ ಒಂದು ವರ್ಷದ ಹಿಂದೆ ಮೃತಪಟ್ಟಿರುತ್ತಾನೆ, ಈ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ ಮಗ ತನ್ನನ್ನು ಕರೆಯುತ್ತಿರುವುದಾಗಿ ತಿಳಿಸುತ್ತಿದ್ದಳು, ದಿನಾಂಕ:08.11.2020 ರಂದು ಬೆಳಗಿನ ಜಾವ 1.30 ಗಂಟೆಗೆ ಬೇಬಿ ಸೋನಿಯಾ ರವರು ಹಾನ್ಕಾಕ್ಸ್ ಬ್ಲಾಕ್ ಮಾರಿಕುಪ್ಪಂ ನಲ್ಲಿರುವ ತನ್ನ ವಾಸದ ಮನೆಯ ಬೆಡ್ ರೂಮಿನ ಮೇಲ್ಛಾವಣಿಗೆ ಅಳವಡಿಸಿದ ಕಬ್ಬಿಣದ ಪೈಫ್ಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.